Advertisement

ಅಮೆರಿಕ- ರಷ್ಯಾ ಜಂಟಿ ಚಂದ್ರಯಾನ ಯೋಜನೆ

10:17 AM Sep 20, 2019 | mahesh |

ಅಮೆರಿಕ, ಚಂದ್ರನ ಮೇಲೆ ತನ್ನ ಗಗನಯಾನಿಗಳನ್ನು 1969ರಲ್ಲಿ ಇಳಿಸಿ ಐತಿಹಾಸಿಕ ಸಾಧನೆ ಮಾಡಿತು. ಅದಕ್ಕಾಗಿ ಅಮೆರಿಕ ದಶಕಗಳಿಂದ ಪೂರ್ವ ತಯಾರಿ ನಡೆಸಿತ್ತು. ಚಂದ್ರಯಾನವನ್ನು ಅಮೆರಿಕ ಮತ್ತು ರಷ್ಯಾದ ನಡುವೆ ಶೀತಲ ಸಮರದ ಪ್ರತಿಫ‌ಲ ಎಂದೂ ಹೇಲುತ್ತಾರೆ. ಶೀತಲ ಸಮರ ಎಂದರೆ ಮದ್ದುಗುಂಡುಗಳ ಯುದ್ಧವಲ್ಲ, ಅದೊಂದು ರೀತಿಯಲ್ಲಿ ಪೈಪೋಟಿಯ ಸ್ಪರ್ಧೆ. ರಷ್ಯಾ ಮೊದಲ ಬಾರಿಗೆ ಅಂತರಿಕ್ಷಕ್ಕೆ ಮನುಷ್ಯನನ್ನು ಕಳಿಸಿ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಬಿಟ್ಟಿತ್ತು. ಆಗ ಅಮೆರಿಕ ತಾನು ಚಂದ್ರನಲ್ಲಿಗೆ ಮನುಷ್ಯನನ್ನು ಕಳಿಸುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಲು ಹೊರಟಿತು.

Advertisement

ಆ ಸಮಯದಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದವರು ಜಾನ್‌ ಎಫ್. ಕೆನಡಿ. ಚಂದ್ರಯಾನದ ಯೋಜನೆಯಲ್ಲಿ ಅಮೆರಿಕ ಮಾತ್ರ ಪಾಲ್ಗೊಳ್ಳದೆ ಅಂತಾರಾಷ್ಟ್ರೀಯ ಯೋಜನೆಯನ್ನಾಗಿಸಬೇಕೆನ್ನುವುದು ಅವರ ಇರಾದೆಯಾಗಿತ್ತು. ಅದರಲ್ಲೂ ಅಮೆರಿಕ ಮತ್ತು ರಷ್ಯಾ ಜಂಟಿಯಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸಬೇಕು ಎಂದು ಕೆನಡಿ, ರಷ್ಯಾ ಪ್ರಧಾನಿ ನಿಕಿತಾ ಅವರ ಮನವೊಲಿಸುವ ಯತ್ನವನ್ನೂ ನಡೆಸಿದರು. ಶೀತಲ ಸಮರವನ್ನು ಕೊನೆಗೊಳಿಸಿ ಜಂಟಿಯಾಗಿ ಚಂದ್ರಯಾನವನ್ನು ಯಶಸ್ವಿಗೊಳಿಸಿದ್ದರೆ ಜಗತ್ತಿನ ಎರಡು ಬಲಿಷ್ಠ ಶಕ್ತಿಗಳು ಒಂದಾಗಿ ಸಾಮರಸ್ಯದ ಸಂದೇಶ ರವಾನೆಯಾಗುತ್ತಿತ್ತು. ಆದರೆ ನಡೆದಿದ್ದೇ ಬೇರೆ.

ಶುರುವಿನಲ್ಲಿ ಕೆನಡಿಯ ಆಹ್ವಾನದ ಬಗ್ಗೆ ನಿರಾಸಕ್ತಿ ತೋರಿದ್ದ ರಷ್ಯಾದ ಪ್ರಧಾನಿ ನಿಕಿತಾ ಕ್ರುಶ್ಚೇವ್‌ ನಂತರದ ದಿನಗಳಲ್ಲಿ ಮನಸ್ಸು ಮಾಡಿದರು. ಆದರೆ, ಎರಡೂ ಕಡೆಯ ಕೆಲ ಪ್ರಭಾವಶಾಲಿ ವ್ಯಕ್ತಿಗಳಿಗೆ ಶಾಂತಿ ಪ್ರತಿಪಾದಕ ಜಂಟಿ ಯೋಜನೆ ಸರಿ ಕಾಣಲಿಲ್ಲ. ಅಲ್ಲದೆ ಅಮೆರಿಕ ಮತ್ತು ರಷ್ಯಾ ನಡುವೆ ಇತರೆ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಕಂಡುಬಂದವು. ಅದಕ್ಕೆ ಮಿಗಿಲಾಗಿ, ಜಂಟಿ ಯೋಜನೆಯ ರೂವಾರಿಯಾಗಿದ್ದ ಅಮೆರಿಕದ ಪ್ರಧಾನಿ ಜಾನ್‌ ಎಫ್. ಕೆನಡಿಯ ಹತ್ಯೆ ಜಂಟಿ ಯೋಜನೆಗೆ ಪೂರ್ಣ ವಿರಾಮ ಹಾಕಿತು. ಹೀಗೆ ಜಗತ್ತಿನ ಮೊದಲ ಚಂದ್ರಯಾನದ ಗೌರವಕ್ಕೆ ಅಮೆರಿಕ- ರಷ್ಯಾ ಪಾತ್ರವಾಗುವುದು ತಪ್ಪಿತು.

ಹವನ

Advertisement

Udayavani is now on Telegram. Click here to join our channel and stay updated with the latest news.

Next