Advertisement

ಪಾಕ್‌ ಅಣ್ವಸ್ತ್ರ ದಾಸ್ತಾನಿನ 9 ರಹಸ್ಯ ತಾಣ ಪತ್ತೆ ಹಚ್ಚಿದ ಅಮೆರಿಕ

11:27 AM Sep 25, 2017 | Team Udayavani |

ಹೊಸದಿಲ್ಲಿ : ಪಾಕಿಸ್ಥಾನ ತನ್ನ ಅಣ್ವಸ್ತ್ರಗಳನ್ನು ದಾಸ್ತಾನು ಇಟ್ಟಿರುವ ಕನಿಷ್ಠ ಒಂಭತ್ತು ರಹಸ್ಯ ತಾಣಗಳನ್ನು ಅಮೆರಿಕ ಗುರುತಿಸಿದೆ. ಆದರೆ ಇವು ಪಾಕ್‌ ಉಗ್ರರ ಕೈವಶವಾಗುವ ಭೀತಿಯನ್ನು ಅದು ವ್ಯಕ್ತಪಡಿಸಿದೆ.

Advertisement

ಪಾಕಿಸ್ಥಾನ ಈಗ ತನ್ನ ಬಳಿಕ 130 ರಿಂದ 140ರಷ್ಟು ಅಣ್ವಸ್ತ್ರಗಳನ್ನು ಹೊಂದಿದ್ದು ಅವುಗಳ ಸಂಖ್ಯೆಯನ್ನು ಕ್ಷಿಪ್ರ ಗತಿಯಲ್ಲಿ  ಹೆಚ್ಚು ಮಾಡುವ ಎಲ್ಲ  ಕೆಲಸಗಳನ್ನು ಅದು ಕೈಗೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಅಣ್ವಸ್ತ್ರಗಳನ್ನು ತನಗೆ ಬೇಕಾಡೆಡೆಗೆ ಅತ್ಯಂತ ಕ್ಷಿಪ್ತ ಗತಿಯಲ್ಲಿ ಸಾಗಿಸುವ, ಪೂರೈಸುವ ಸೌಕರ್ಯಗಳನ್ನು ಕೂಡ ಪಾಕಿಸ್ಥಾನ ರೂಪಿಸಿಕೊಂಡಿದೆ ಎಂದು ಅಮೆರಿಕ ಹೇಳಿದೆ.

ಪಾಕಿಸ್ಥಾನ ತನ್ನ ಅಣ್ವಸ್ತ್ರಗಳನ್ನು ದಾಸ್ತಾನು ಇಟ್ಟಿರುವ 9 ರಹಸ್ಯ ತಾಣಗಳ ಪೈಕಿ ಮೂರು ಸಿಂಧ್‌ ಪ್ರಾಂತ್ಯದ ಸಮೀಪದಲ್ಲೇ ಇವೆ. ಬಲೂಚಿಸ್ಥಾನ ಮತ್ತು ಖೈಬರ್‌ ಪಖ್‌ತೂನ್‌ಖ್ವಾ ಸಮೀಪ ತಲಾ ಒಂದು ರಹಸ್ಯ ತಾಣ ಇದೆ. 

ಅಮೆರಿಕ ವಿಜ್ಞಾನಿಗಳ ಒಕ್ಕೂಟ ಪ್ರಕಟಿಸಿರುವ ವರದಿಯ ಪ್ರಕಾರ “ಪಾಕಿಸ್ಥಾನ ತನ್ನ ಅಣ್ವಸ್ತ್ರಗಳ ಸಂಖ್ಯೆಯನ್ನು ನಿರಂತರಾವಾಗಿ ಹೆಚ್ಚಿಸುತ್ತಿದೆ ಮತ್ತು ಅವುಗಳನ್ನು ಹೆಚ್ಚಿನ ಸಂಖ್ಯೆಯ ರಹಸ್ಯ ತಾಣಗಳಲ್ಲಿ  ಇರಿಸಿದೆ. ಈ ರಹಸ್ಯ ತಾಣಗಳನ್ನು ನಿರ್ದಿಷ್ಟವಾಗಿ ಬೆಟ್ಟು ಮಾಡುವುದು ಕಷ್ಟಕರ’ ಎಂದು ತಿಳಿದು ಬಂದಿದೆ.

ಅಮೆರಿಕ ವಿಜ್ಞಾನಿಗಳ ಒಕ್ಕೂಟದ ವರದಿಯನ್ನು  ಹ್ಯಾನ್ಸ ಂ ಕ್ರಿಸ್ಟನ್‌ಸನ್‌ ಮತ್ತು ರಾಬರ್ಟ್‌ ಎಸ್‌ ನೋರಿಸ್‌ ಸಿದ್ಧಪಡಿಸಿದ್ದಾರೆ. 

Advertisement

ಪಾಕಿಸ್ಥಾನ ತನ್ನ ಅಣ್ವಸ್ತ್ರಗಳನ್ನು ದಾಸ್ತಾನು ಇರಿಸಿರುವ 9 ರಹಸ್ಯ ತಾಣಗಳು ಇಂತಿವೆ :

1. ಆಕ್ರೋ ಗ್ಯಾರಿಸನ್‌ ಸಿಂಧ್‌
2. ಗುಜರನ್‌ವಾಲಾ ಗ್ಯಾರಿಸನ್‌ ಪಂಜಾಬ್‌
3. ಖುಜ್‌ದರ್‌ ಗ್ಯಾರಿಸನ್‌ ಬಲೂಚಿಸ್ಥಾನ
4. ಮಸ್‌ರೂರ್‌ ಡಿಪೋ ಕರಾಚಿ, ಸಿಂಧ್‌
6. ನ್ಯಾಶನಲ್‌ ಡೆವಲಪ್‌ಮೆಂಟ್‌ ಕಾಂಪ್ಲೆಕ್ಸ್‌ ಫ‌ತೇಗಂಜ್‌, ಪಂಜಾಬ್‌
7. ಸರ್‌ಗೊಧಾ ಡಿಪೋ ಪಂಜಾಬ್‌
8. ತರ್‌ಬಲಾ ಭೂಗತ ಡಿಪೋ, ಖೈಬರ್‌ ಪಖ್‌ತೂನ್‌ಖ್ವಾ.
9. ವಾಹ್‌ ಶಸ್ತ್ರಾಸ್ತ ಕಾರ್ಖಾ, ಪಂಜಾಬ್‌

Advertisement

Udayavani is now on Telegram. Click here to join our channel and stay updated with the latest news.

Next