Advertisement

ಶಮಿಗೆ ಸಿಗದ ಅಮೇರಿಕಾ ವೀಸಾ: ಬಿಸಿಸಿಐ ಮಧ್ಯಪ್ರವೇಶ

09:21 AM Jul 28, 2019 | Team Udayavani |

ಹೊಸದೆಹಲಿ: ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಅಮೇರಿಕಾ ವೀಸಾ ನಿರಾಕರಿಸಿದ್ದು, ಬಿಸಿಸಿಐ ಮಧ್ಯಪ್ರವೇಶದಿಂದ ಸಮಸ್ಯೆ ಬಗೆಹರಿದಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Advertisement

ಭಾರತ ಕ್ರಿಕೆಟ್‌ ತಂಡ ಆಗಸ್ಟ್‌ ಮೂರರಿಂದ ವೆಸ್ಟ್‌ ಇಂಡೀಸ್‌ ನಲ್ಲಿ ಟಿ ಟ್ವೆಂಟಿ, ಏಕದಿನ, ಟೆಸ್ಟ್ ಸರಣಿ ಆಡಲಿದೆ.

ಕೌಟುಂಬಿಕ ವಿಚಾರಗಳಿಗಾಗಿ ಮೊಹಮ್ಮದ್‌ ಶಮಿಯ ಮೇಲೆ ಪೊಲೀಸ್‌ ಕೇಸುಗಳಿರುವುದರಿಂದ ಅಮೇರಿಕಾ ವೀಸಾ ನೀಡಲು ನಿರಾಕರಣೆ ಮಾಡಿತ್ತು. ನಂತರದ ಬೆಳವಣಿಗೆಯಲ್ಲಿ ಬಿಸಿಸಿಐ ಅಧಿಕಾರಿಗಳು ಮಧ್ಯಪ್ರವೇಶ ಮಾಡಿ ಅಮೇರಿಕಾದ ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದು, ಶಮಿ ಕೇಸುಗಳ ವಿವಾದ ಈಗ ಬಗೆಹರಿದಿದೆ ಎಂದು ಮನವರಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.

ಬಂಗಾಲ ಮೂಲದ ಕ್ರಿಕೆಟರ್ ಶಮಿ ಮತ್ತು‌ ಪತ್ನಿ ಹಸೀನ್‌ ಜಹಾನ್‌ ನಡುವೆ ವೈಮನಸ್ಸಿನ ವಿಚಾರವಾಗಿ ಪತ್ನಿ ಕೋರ್ಟ್‌ ಮೆಟ್ಟಿಲೇರಿದ್ದರು. ನಂತರ ಸತತವಾಗಿ ಮಾಧ್ಯಮಗಳ ಮುಂದೆ ಶಮಿಯ ಮೇಲೆ ಆರೋಪಗಳ ಸುರಿಮಳೆಗರೆಯುತ್ತಿದ್ದರು.

ಕೌಟುಂಬಿಕ ವಿವಾದಗಳಿಂದ ಬೇಸತ್ತಿದ್ದ ಶಮಿ ಕಳಪೆ ಪ್ರದರ್ಶನ ನೀಡಿ ವರ್ಷಗಳ ಕಾಲ ಟೀಂ ಇಂಡಿಯಾದಿಂದ ದೂರವಾಗಿದ್ದರು. ಆದರೆ ನಂತರ ಉತ್ತಮ ಫಿಟ್‌ ನೆಸ್‌ ಮಾಡಿ, ಫಾರ್ಮ್ ಗೆ ಮರಳಿದ ಶಮಿ ಇತ್ತೀಚೆಗಷ್ಟೇ ನಡೆದ ವಿಶ್ವಕಪ್‌ ನಲ್ಲಿ ಕೇವಲ ನಾಲ್ಕು ಪಂದ್ಯಗಳಲ್ಲಿ 14 ವಿಕೆಟ್‌ ಪಡೆದು ಮಿಂಚಿದ್ದರು.

Advertisement

ಭಾರತ ವೆಸ್ಟ್‌ ಇಂಡೀಸ್‌ ವಿರುದ್ದ ಮೂರು ಟಿ ಟ್ವೆಂಟಿ, ಮೂರು ಏಕದಿನ ಮತ್ತು ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಮೊದಲೆರಡು ಟಿ ಟ್ವೆಂಟಿ ಪಂದ್ಯಗಳು ಫ್ಲೋರಿಡಾದಲ್ಲಿ ನಡೆಯಲಿದೆ.

ಪತ್ನಿ ಹಸಿನ್ ಜಹಾನ್ ಜೊತೆ ಶಮಿ

Advertisement

Udayavani is now on Telegram. Click here to join our channel and stay updated with the latest news.

Next