Advertisement

US: ಅಧ್ಯಕ್ಷೀಯ ಅಭ್ಯರ್ಥಿಗಳ ಚರ್ಚಾ ಕೂಟದಲ್ಲಿ ವೈಯಕ್ತಿಕ ನಿಂದನೆ

08:53 PM Nov 09, 2023 | Team Udayavani |

ನ್ಯೂಯಾರ್ಕ್‌: ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಗಳಾಗಿರುವ ಉದ್ಯಮಿ ವಿವೇಕ್‌ ರಾಮಸ್ವಾಮಿ ಮತ್ತು ನಿಕ್ಕಿ ಹ್ಯಾಲೆ ನಡುವೆ ಬಿರುಸಿನ ಮಾತಿನ ಚಕಮಕಿ ನಡೆದಿದೆ. ಬುಧವಾರ ಅಭ್ಯರ್ಥಿಗಳ ನಡುವಿನ ಚರ್ಚಾ ಕೂಟದಲ್ಲಿ ಈ ಬೆಳವಣಿಗೆ ವರದಿಯಾಗಿದೆ.

Advertisement

ದಕ್ಷಿಣ ಕ್ಯಾಲಿಫೋರ್ನಿಯಾದ ಮಾಜಿ ಗವರ್ನರ್‌ ನಿಕ್ಕಿ ಹ್ಯಾಲೆ ವಿರುದ್ಧ ಉದ್ಯಮಿ- ರಿಪಬ್ಲಿಕನ್‌ ಪಕ್ಷದ ನಾಯಕ ವಿವೇಕ್‌ ರಾಮಸ್ವಾಮಿ ಮೂರು ಇಂಚು ಹೀಲ್ಸ್‌ ಧರಿಸುವವರು ಎಂದು ಅವಹೇಳನ ಮಾಡಿದ್ದಾರೆ. ಇದರ ಜತೆಗೆ ಟ್ವಿಟರ್‌ನಲ್ಲಿ ಚರ್ಚೆಯ ವಿಡಿಯೋವನ್ನು ಕೂಡ ಟ್ವೀಟ್‌ ಮಾಡಿದ್ದಾರೆ. ಇದಲ್ಲದೆ ನಿಕ್ಕಿ ಹ್ಯಾಲೆ ಅವರ ಪುತ್ರಿ ಟಿಕ್‌ಟಾಕ್‌ನಲ್ಲಿ ವಿಡಿಯೋ ಅಪ್‌ಲೋಡ್‌ ಮಾಡುವುದರ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ನಿಕ್ಕಿ ಹ್ಯಾಲೆ ಹೊಂದಿರುವ ವಿದೇಶಾಂಗ ನೀತಿ ಅಮೆರಿಕದ ಹಿತಕ್ಕೆ ಮಾರಕವಾದದ್ದು. ಅವರದ್ದು ಮಾಜಿ ಉಪಾಧ್ಯಕ್ಷ ಡಿಕ್‌ ಚೆನಿ ಕಾಲದ ನಿಲುವಿನಂತೆ ಹಳೆಯ ಕಾಲದ್ದು ಎಂದು ಟೀಕಿಸಿದ್ದಾರೆ.

ಅದಕ್ಕೆ ತಿರುಗೇಟು ನೀಡಿದ ನಿಕ್ಕಿ ಹ್ಯಾಲೆ, ಅಧ್ಯಕ್ಷೀಯ ಚುನಾವಣೆಯ ಚರ್ಚೆಗಳಲ್ಲಿ ಪುತ್ರಿ ಸೇರಿದಂತೆ ನನ್ನ ಕುಟುಂಬದ ವಿಚಾರ ಎಳೆದು ತರುವುದು ಬೇಡ ಎಂದು ವಿವೇಕ್‌ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಜತೆಗೆ ರಾಮಸ್ವಾಮಿ ಅವರನ್ನು ಕೊಳಕು ಎಂದು ಹೇಳಿದ್ದಾರೆ. ಇದಲ್ಲದೆ ತಾನು ಧರಿಸುವುದು ಮೂರಲ್ಲ, ಐದು ಇಂಚು ಎತ್ತರದ ಹೀಲ್ಸ್‌ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next