ಯುಎಸ್ ಓಪನ್ ವನಿತಾ ಸಿಂಗಲ್ಸ್‌ನಲ್ಲಿ ಸೆರೆನಾ ವಿಲಿಯಮ್ಸ್, ಆ್ಯಶ್ಲಿ ಬಾರ್ಟಿ, ಎಲಿನಾ ಸ್ವಿಟೋಲಿನಾ, ಮ್ಯಾಡಿಸನ್ ಕೀಸ್ ಮೊದಲಾದವರೆಲ್ಲ 3ನೇ ಸುತ್ತಿನಲ್ಲಿ ಪಾಸ್ ಆಗಿದ್ದಾರೆ.
ಸೆರೆನಾ ವಿಲಿಯಮ್ಸ್ ಬಹಳ ಸುಲಭದಲ್ಲಿ ಜೆಕ್ ಗಣರಾಜ್ಯಾದ ಕ್ಯಾರೋಲಿನಾ ಮುಕೋವಾ ಅವರನ್ನು ಮಣಿಸಿದರು. ಅಂತರ 6-3, 6-2. ಇವರ ಮುಂದಿನ ಎದುರಾಳಿ ಕ್ರೊವೇಶಿಯಾದ ಪೆಟ್ರಾ ಮಾರ್ಟಿಕ್. ಅವರು 6-4, 6-3ರಿಂದ ಲಾತ್ವಿಯಾದ ಅನಸ್ತಾಸಿಜಾ ಸೆವಸ್ತೋವಾಗೆ ಸೋಲುಣಿಸಿದರು.
ಆಲ್ ಅಮೆರಿಕನ್ ಕಾದಾಟವೊಂದರಲ್ಲಿ 10ನೇ ಶ್ರೇಯಾಂಕದ ಮ್ಯಾಡಿಸನ್ ಕೀಸ್ 20ನೇ ಶ್ರೇಯಾಂಕದ ಸೋಫಿಯಾ ಕೆನಿನ್ ಅವರನ್ನು 6-3, 7-5ರಿಂದ ಹಿಮ್ಮೆಟ್ಟಿಸಿದರು. ಇವರ ಎದುರಾಳಿ ಉಕ್ರೇನಿನ ಎಲಿನಾ ಸ್ವಿಟೋಲಿನಾ.
ಇನ್ನೊಂದು ಪಂದ್ಯದಲ್ಲಿ ಸ್ವಿಟೋಲಿನಾ ಉಕ್ರೇನಿನ ಡಯಾನಾ ಯಾಸ್ಟ್ರೆಮ್‌ಸ್ಕಾ ವಿರುದ್ಧ 6-2, 6-0 ಅಂತರದ ಸುಲಭ ಜಯ ಸಾಧಿಸಿದರು.
ದ್ವಿತೀಯ ಶ್ರೇಯಾಂಕದ ಆ್ಯಶ್ಲಿ ಬಾರ್ಟಿ ಅವರಿಗೆ ಶರಣಾದವರು ಗ್ರೀಸ್‌ನ ಮರಿಯಾ ಸಕ್ಕರಿ. ಬಾರ್ಟಿ ಗೆಲುವಿನ ಅಂತರ 7-5, 6-3. ಬಾರ್ಟಿಯ ಎದುರಾಳಿ ಚೀನದ ಕ್ವಿಯಾಂಗ್ ವಾಂಗ್. ಇವರು ಫ್ರಾನ್ಸ್‌ನ ಫಿಯೋನಾ ಫೆರೊÅ ವಿರುದ್ಧ 7-6 (7-1), 6-3 ಅಂತರದ ಮೇಲುಗೈ ಸಾಧಿಸಿದರು.
ಜೆಕ್ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ, ಬ್ರಿಟನ್ನಿನ ಜೊಹಾನಾ ಕೊಂಟಾ ಕೂಡ 3ನೇ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ.