Advertisement
ಸಿಸಿಪಸ್-ಮರ್ರೆ ನಡುವಿನ ಪಂದ್ಯ 5 ಸೆಟ್‌ಗಳ ತನಕ ಸಾಗಿತು. ಇದನ್ನು ಸಿಸಿಪಸ್ 2-6, 7-6 (7), 3-6, 6-4, 6-4ರಿಂದ ಗೆದ್ದು ದೊಡ್ಡ ಕಂಟಕದಿಂದ ಪಾರಾದರು.
Related Articles
Advertisement
3 ಬಾರಿಯ ಚಾಂಪಿಯನ್, ಕಳೆದ ವರ್ಷದ ಫೈನಲ್‌ನಲ್ಲಿ ಒಸಾಕಾಗೆ ಶರಣಾಗಿದ್ದ ವಿಕ್ಟೋರಿಯಾ ಅಜರೆಂಕಾ 6-4, 6-0 ಅಂತರದಿಂದ ಟೆರೆಜಾ ಮಾರ್ಟಿನ್ಕೋವಾ ಅವರನ್ನು ಮಣಿಸಿದರು. ಹಾಗೆಯೇ 2016ರ ಚಾಂಪಿಯನ್ ಆ್ಯಂಜೆಲಿಕ್ ಕೆರ್ಬರ್ 3 ಸೆಟ್‌ಗಳ ಕಾದಾಟದ ಬಳಿಕ ಡಯಾನಾ ಯಸ್ಟ್ರೆಮ್ಸ್‌ಕಾ ವಿರುದ್ಧ ಜಯ ಸಾಧಿಸುವಲ್ಲಿ ಸಫಲರಾದರು. ಅಂತರ 3-6, 6-4, 7-6 (3).
ಈ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಆಡುತ್ತಿರುವ ಸಿಮೋನಾ ಹಾಲೆಪ್ ಇಟಲಿಯ ಕ್ಯಾಮಿಲಾ ಜಾರ್ಜಿ ಅವರನ್ನು 6-4, 7-6 (3)ರಿಂದ ಹಿಮ್ಮೆಟ್ಟಿಸಿದರು.
17 ವರ್ಷದ ಕೊಕೊ ಗಾಫ್ 3 ಸೆಟ್ ಕಾದಾಟದ ಬಳಿಕ ಮಾಗ್ಡಾ ಲಿನೆಟ್ ವಿರುದ್ಧ 5-7, 6-3, 6-4 ಅಂತರದ ಮೇಲುಗೈ ಕಂಡರು. ಅಮೆರಿಕದವರೇ ಆದ ಸ್ಲೋನ್ ಸ್ಟೀಫನ್ಸ್ ಇವರ ಮುಂದಿನ ಎದುರಾಳಿ.