Advertisement
ವಿಂಬಲ್ಡನ್‌ನಲ್ಲಿ ಫೈನಲ್ ತನಕ ದಾಪುಗಾಲಿಕ್ಕಿದ್ದ ನಿಕ್ ಕಿರ್ಗಿಯೋಸ್ ನ್ಯೂಯಾರ್ಕ್‌ನಲ್ಲೂ ಗೆಲುವಿನ ಓಟ ಬೆಳೆ ಸಿದ್ದರು. ನಂ.1 ಖ್ಯಾತಿಯ ಹಾಲಿ ಚಾಂಪಿ ಯನ್ ಡ್ಯಾನಿಲ್ ಮೆಡ್ವೆಡೇವ್ ಅವರನ್ನು ಕೆಡವಿದ ಹೆಗ್ಗಳಿಕೆ ಇವರದಾಗಿತ್ತು. ಆದರೆ 27ನೇ ಶ್ರೇಯಾಂಕದ ಕಶನೋವ್ ವಿರುದ್ಧ ಕಿರ್ಗಿಯೋಸ್ ಆಟ ನಡೆಯಲಿಲ್ಲ.
Related Articles
Advertisement
ಗಾರ್ಸಿಯಾಗೆ ಶರಣಾದ ತವರಿನ ಗಾಫ್ವನಿತಾ ಸಿಂಗಲ್ಸ್‌ನಲ್ಲಿ ಆತಿಥೇಯ ಅಮೆರಿಕದ ಆಶಾಕಿರಣವಾಗಿದ್ದ 18 ವರ್ಷದ ಕೊಕೊ ಗಾಫ್ ಆಟ ಕ್ವಾರ್ಟರ್ ಫೈನಲ್‌ನಲ್ಲಿ ಕೊನೆ ಗೊಂಡಿದೆ. ತವರಿನ ಅಭಿ ಮಾನಿಗಳ ಭಾರೀ ಬೆಂಬಲ ಹೊಂದಿದ್ದ ಗಾಫ್ ಅವರನ್ನು ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ 6-3, 6-4 ಅಂತರದಿಂದ ಹಿಮ್ಮೆಟ್ಟಿಸಿದರು. ಇದ ರೊಂದಿಗೆ ಗಾರ್ಸಿಯಾ ಅವರ ಸತತ ಗೆಲುವಿನ ಓಟ 13 ಪಂದ್ಯಗಳಿಗೆ ವಿಸ್ತರಿಸಲ್ಪಟ್ಟಿತು. ಈ ಜಯದೊಂದಿಗೆ ಕ್ಯಾರೋಲಿನ್ ಗಾರ್ಸಿಯಾ ಮೊದಲ ಸಲ ಗ್ರ್ಯಾನ್‌ಸ್ಲಾಮ್ ಸೆಮಿ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರ ರಾದರು. ಜತೆಗೆ ಡಬ್ಲ್ಯುಟಿಎ ರ್‍ಯಾಂಕಿಂಗ್ ನಲ್ಲಿ ಮರಳಿ ಟಾಪ್-10 ಸ್ಥಾನ ಅಲಂ ಕರಿಸುವುದೂ ಖಾತ್ರಿಯಾಯಿತು. ಸೆಮಿಫೈನಲ್‌ನಲ್ಲಿ 17ನೇ ಶ್ರೇಯಾಂಕದ ಗಾರ್ಸಿಯಾ ಅವರ ಎದುರಾಳಿಯಾಗಿ ಕಣಕ್ಕಿಳಿಯುವವರು ಟ್ಯುನೀಶಿಯಾದ ಓನ್ಸ್ ಜೆಬ್ಯೂರ್. ಅವರು ಆಸ್ಟ್ರೇಲಿಯದ ಅಜ್ಲಾ ಟೊಮ್ಜಾನೋವಿಕ್ ಓಟಕ್ಕೆ 6-4, 7-6 (7-4) ಅಂತರದಿಂದ ಬ್ರೇಕ್ ಹಾಕಿದರು. ಟೊಮ್ಜಾನೋವಿಕ್ 3ನೇ ಸುತ್ತಿನಲ್ಲಿ ಆತಿಥೇಯ ನಾಡಿನ ದೈತ್ಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರನ್ನು ಕೆಡವಿದ್ದರು.