Advertisement

ಯುಎಸ್‌ ಓಪನ್‌ ಅರ್ಹತಾ ಸುತ್ತು: ಅಂಕಿತಾಗೆ ಸೋಲು

02:13 AM Aug 23, 2019 | Sriram |

ನ್ಯೂಯಾರ್ಕ್‌: ಯುಎಸ್‌ ಓಪನ್‌ ಟೆನಿಸ್‌ ಅರ್ಹತಾ ಸುತ್ತಿನಲ್ಲಿ ಅಂಕಿತಾ ರೈನಾ 7-6, 4-6, 2-6ರಿಂದ ಚೆಕ್‌ ಗಣರಾಜ್ಯದ ಎದುರಾಳಿ ಡೆನಿಸಾ ಅಲೆರ್ಟೋವಾ ವಿರುದ್ಧ ಪರಾಭವಗೊಂಡಿದ್ದಾರೆ. ಇದರಿಂದ ಮುಖ್ಯ ಸುತ್ತಿನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

Advertisement

ವಿಶ್ವದ 194ನೇ ಶ್ರೇಯಾಂಕಿತ ಟೆನಿಸ್‌ ಆಟಗಾರ್ತಿ ಅಂಕಿತಾ ರೈನಾ ಪ್ರಬಲ ಪೈಪೋಟಿಯನ್ನೇ ನೀಡಿದರು. ಮೊದಲ ಸೆಟ್ ಗೆದ್ದರೂ ಮುಂದಿನೆರಡು ಸೆಟ್‌ಗಳಲ್ಲಿ ಎಡವಿದರು. ಸದ್ಯ ಅರ್ಹತಾ ಸುತ್ತಿನಲ್ಲಿ ಉಳಿದುಕೊಂಡಿರುವ ಭಾರತೀಯ ಆಟಗಾರ ಸುಮಿತ್‌ ನಗಾಲ್ ಮಾತ್ರ.

 

Advertisement

Udayavani is now on Telegram. Click here to join our channel and stay updated with the latest news.

Next