Advertisement

US Open ಗ್ರ್ಯಾನ್‌ಸ್ಲಾಮ್‌ ಒಂದೇ ಮಾದರಿಯ ಚೆಂಡು

11:03 PM Aug 18, 2023 | Team Udayavani |

ನ್ಯೂಯಾರ್ಕ್‌: ಇಲ್ಲಿಯ ತನಕ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಯಲ್ಲಿ ತಾರತಮ್ಯವೊಂದು ಕಂಡುಬರುತ್ತಿತ್ತು. ಅದೇನೆಂದರೆ, ಪುರುಷರ ಹಾಗೂ ವನಿತಾ ಸ್ಪರ್ಧಿಗಳು ಪ್ರತ್ಯೇಕ ಮಾದರಿಯ ಚೆಂಡುಗಳಲ್ಲಿ ಆಡಬೇಕಿತ್ತು. ಕೆಲವು ಆಟಗಾರ್ತಿಯರ ಬಲವಾದ ವಿರೋಧ ಹಾಗೂ ಆಕ್ಷೇಪದಿಂದಾಗಿ 2023ರಿಂದ ಎರಡೂ ವಿಭಾಗಗಳಲ್ಲಿ ಒಂದೇ ಮಾದರಿಯ ಚೆಂಡನ್ನು ಬಳಸಲು ನಿರ್ಧರಿಸಲಾಗಿದೆ.

Advertisement

ಗ್ರ್ಯಾನ್‌ಸ್ಲಾಮ್‌ ಇತಿಹಾಸದಲ್ಲಿ ಯುಎಸ್‌ ಓಪನ್‌ನಲ್ಲಿ ಮಾತ್ರ ಪುರುಷರು ಮತ್ತು ವನಿತೆಯರು ಪ್ರತ್ಯೇಕ ಮಾದರಿಯ ಚೆಂಡುಗಳನ್ನು ಬಳಸುತ್ತಿದ್ದರು. ಪುರುಷರು ವಿಲ್ಸನ್‌ ಕಂಪೆನಿಯ “ಎಕ್ಸ್‌ಟ್ರಾ ಡ್ನೂಟಿ’ ಹಾಗೂ ವನಿತೆಯರು “ರೆಗ್ಯುಲರ್‌ ಡ್ನೂಟಿ’ ಮಾದರಿಯ ಚೆಂಡುಗಳಿಂದ ಆಡುತ್ತಿದ್ದರು. ಆದರೆ ರೆಗ್ಯುಲರ್‌ ಡ್ನೂಟಿ ಚೆಂಡುಗಳ ತೂಕ ತುಸು ಕಡಿಮೆ ಇರುತ್ತಿರುವುದು ಹಾಗೂ ಇದರ “ಸ್ಟ್ರೆಂತ್‌’ ಕೂಡ ಕಡಿಮೆ ಇದ್ದುದು ವನಿತೆಯರ ಆಕ್ಷೇಪಕ್ಕೆ ಮುಖ್ಯ ಕಾರಣವಾಗಿತ್ತು. ಹಾರ್ಡ್‌ಕೋರ್ಟ್‌ನಲ್ಲಿ “ಎಕ್ಸ್‌ಟ್ರಾ ಡ್ನೂಟಿ’ ಚೆಂಡುಗಳೇ ಹೆಚ್ಚು ಸೂಕ್ತ ಎಂಬ ಅಭಿಪ್ರಾಯವೂ ಇತ್ತು.

ಈ “ಚೆಂಡು ತಾರತಮ್ಯ’ದ ವಿರುದ್ಧ ಧ್ವನಿ ಎತ್ತಿದ ಪ್ರಮುಖ ಆಟಗಾರ್ತಿ, ಹಾಲಿ ಚಾಂಪಿಯನ್‌ ಕೂಡ ಆಗಿರುವ ಇಗಾ ಸ್ವಿಯಾಟೆಕ್‌. ಇದಕ್ಕೆ ಯುಎಸ್‌ ಓಪನ್‌ ಪಂದ್ಯಾವಳಿಯ ನಿರ್ದೇಶಕ ಸ್ಟೇಸಿ ಅಲಸ್ಟರ್‌ ಸಮ್ಮತಿ ಸೂಚಿಸಿದ್ದಾರೆ. 2023ನೇ ಋತುವಿನಿಂದ ಪುರುಷರು ಬಳಸುವ ವಿಲ್ಸನ್‌ ಕಂಪೆನಿಯ “ಎಕ್ಸ್‌ಟ್ರಾ ಡ್ಯೂಟಿ’ಯ ಟೆನಿಸ್‌ ಚೆಂಡು ಗಳನ್ನೇ ವನಿತೆಯರಿಗೂ ನೀಡಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next