ನ್ಯೂಯಾರ್ಕ್: ವಿಶ್ವದ ಶ್ರೇಷ್ಠ ಟೆನ್ನಿಸ್ ಆಟಗಾರರಲ್ಲಿ ಓರ್ವ ನೊವಾಕ್ ಜೊಕೊವಿಕ್ (Novak Djokovic) ಅವರು 16 ವರ್ಷಗಳ ಬಳಿಕ ಯುಎಸ್ ಓಪನ್ ನ (US Open) ನಾಲ್ಕನೇ ಸುತ್ತಿಗೇರಲು ವಿಫಲರಾಗಿದ್ದಾರೆ. ಶುಕ್ರವಾರ (ಆ.30) ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೊಕೊವಿಕ್ 28ನೇ ಶ್ರೇಯಾಂಕದ ಆಸ್ಟ್ರೇಲಿಯಾದ ಅಲೆಕ್ಸ್ ಪಾಪಿರಿನ್ (Alexei Popyrin) ವಿರುದ್ದ ನಾಲ್ಕು ಸೆಟ್ ಗಳ ಪಂದ್ಯದಲ್ಲಿ ಸೋಲು ಕಂಡರು.
ಆರ್ತರ್ ಆಶೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಜೊಕೊ 4-6, 4-6, 6-2, 4-6 ಸೆಟ್ ಗಳಲ್ಲಿ ಸೋಲು ಕಂಡರು. ಜೊಕೊವಿಕ್ 2017ರ ನಂತರ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಇಲ್ಲದೆ ವರ್ಷವನ್ನು ಮುಗಿಸಲಿದ್ದಾರೆ.
ಮಾರ್ಚ್ ಬಳಿಕ ತನ್ನ ಮೊದಲ ಹಾರ್ಡ್-ಕೋರ್ಟ್ ಪಂದ್ಯಾವಳಿಯಲ್ಲಿ ಆಡುತ್ತಿರುವ ಜೊಕೊವಿಕ್, ಮೊದಲ ಎರಡು ಸೆಟ್‌ಗಳಲ್ಲಿ ಪಾಪಿರಿನ್ ಗೆ ಪ್ರಾಬಲ್ಯ ಸಾಧಿಸಲು ಅವಕಾಶ ಮಾಡಿಕೊಟ್ಟರು. ದಾಖಲೆಯ 25ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಹಿಂಬಾಲಿಸುತ್ತಿರುವ ಸರ್ಬಿಯಾ ಆಟಗಾರ ಮೂರನೇ ಸೆಟ್ ನಲ್ಲಿ ಕಮ್ ಬ್ಯಾಕ್ ಮಾಡಿದರೂ ಆಸೀಸ್ ಆಟಗಾರನ ಎದುರು ಸೋಲು ಕಾಣಬೇಕಾಯಿತು. ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ಯುಎಸ್ ಓಪನ್ ನಲ್ಲಿ ನಾಲ್ಕನೇ ಸುತ್ತಿಗೆ ಪ್ರವೇಶಿಸಲಾಗಿದೆ ಸೋತರು.
2022 ರ ಚಾಂಪಿಯನ್ ಮತ್ತು ಮೂರನೇ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್ ಅವರು ಎರಡನೇ ಸುತ್ತಿನಲ್ಲಿ ಸೋಲು ಕಂಡ ಒಂದು ದಿನದ ನಂತರ ಎರಡನೇ ಶ್ರೇಯಾಂಕದ ಜೊಕೊವಿಕ್ ಕೂಟದಿಂದ ಹೊರ ನಡೆದಿದ್ದಾರೆ. 1973 ರ ನಂತರ ಇದೇ ಮೊದಲ ಬಾರಿಗೆ ಯುಎಸ್ ಓಪನ್ ನಲ್ಲಿ ಪುರುಷರ ಸಿಂಗಲ್ಸ್ ನಲ್ಲಿ ನಾಲ್ಕನೇ ಸುತ್ತಿನ ಮೊದಲು ಎರಡನೇ ಮತ್ತು ಮೂರನೇ ಶ್ರೇಯಾಂಕಗಳನ್ನು ಹೊರಬಿದ್ದಿದ್ದಾರೆ.
2006 ರಲ್ಲಿ ನ್ಯೂಯಾರ್ಕ್‌ನಲ್ಲಿ ಜೊಕೊವಿಕ್ ಕೊನೆಯ ಬಾರಿಗೆ ನಾಲ್ಕನೇ ಸುತ್ತಿಗೇರಲು ವಿಫಲರಾಗಿದ್ದರು