Advertisement

US Open 2024: ಹಾಲಿ ಚಾಂಪಿಯನ್ನರಿಗೆ ಗೆಲುವು

11:00 PM Aug 27, 2024 | Team Udayavani |

ನ್ಯೂಯಾರ್ಕ್‌: ಹಾಲಿ ಚಾಂಪಿಯನ್‌ಗಳಾದ ನೊವಾಕ್‌ ಜೊಕೋವಿಕ್‌ ಮತ್ತು ಕೊಕೊ ಗಾಫ್ ಯುಎಸ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಗೆಲುವಿನ ಆರಂಭ ಪಡೆದಿದ್ದಾರೆ.

Advertisement

25ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಹುಡುಕಾಟದಲ್ಲಿರುವ ದ್ವಿತೀಯ ಶ್ರೇಯಾಂಕದ ಜೊಕೋವಿಕ್‌ ಮಾಲ್ಡೋವಾದ 138ನೇ ರ್‍ಯಾಂಕ್‌ ಆಟಗಾರ ರಾಡು ಅಲ್ಬೋಟ್‌ ಅವರನ್ನು 6-2, 6-2, 6-4ರಿಂದ ಮಣಿಸಿದರು. ಜೊಕೋವಿಕ್‌ ಮುಂದಿನ ಸುತ್ತಿನಲ್ಲಿ ತಮ್ಮದೇ ದೇಶದ ಲಾಸ್ಲೊ ಡಿಜೆರೆ ವಿರುದ್ಧ ಆಡಲಿದ್ದಾರೆ.

ಮೊದಲ ದಿನದ ಏರುಪೇರಿನ ಫ‌ಲಿತಾಂಶ ಅಮೆರಿಕದ ಬೆನ್‌ ಶೆಲ್ಟನ್‌ ಅವರಿಂದ ದಾಖಲಾಯಿತು. ಶೆಲ್ಟನ್‌ ಮಾಜಿ ಚಾಂಪಿಯನ್‌, ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಅವರನ್ನು 6-4, 6-2, 6-2ರಿಂದ ಉರುಳಿಸಿದರು.

ಅಮೆರಿಕದ ಫ್ರಾನ್ಸೆಸ್‌ ಥಿಯಾಫೊ, ಟೇಲರ್‌ ಫ್ರಿಟ್ಜ್, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ದ್ವಿತೀಯ ಸುತ್ತಿಗೆ ಏರಿದ ಪ್ರಮುಖರು.

ವನಿತಾ ಸಿಂಗಲ್ಸ್‌

Advertisement

ವನಿತಾ ಸಿಂಗಲ್ಸ್‌ನಲ್ಲಿ ಕೊಕೊ ಗಾಫ್ ಫ್ರಾನ್ಸ್‌ನ ವರ್ವರಾ ಗ್ರಶೇವಾ ವಿರುದ್ಧ 6-2, 6-0 ಅಂತರದ ನಿರಾಯಾಸದ ಜಯ ಸಾಧಿಸಿದರು.

ವನಿತಾ ಸಿಂಗಲ್ಸ್‌ನ ಉಳಿದ ಪಂದ್ಯಗಳಲ್ಲಿ ಅರಿನಾ ಸಬಲೆಂಕಾ 6-3, 6-3ರಿಂದ ಅರ್ಹತಾ ಆಟ ಗಾರ್ತಿ ಪ್ರಿಸ್ಕಿಲ್ಲಾ ಹಾನ್‌ ಅವರನ್ನು ಮಣಿಸಿದರು. ಆತಿಥೇಯ ದೇಶದ ಮ್ಯಾಡಿಸನ್‌ ಕೀಸ್‌ ಜೆಕ್‌ ಆಟಗಾರ್ತಿ ಕ್ಯಾಥರಿನಾ ಸಿನಿಯಕೋವಾ ವಿರುದ್ಧ 6-4, 6-1ರ ಮೇಲುಗೈ ಸಾಧಿಸಿದರು. ಚೀನದ ಕ್ವಿನ್ವೆನ್‌ ಜೆಂಗ್‌ ಆತಿಥೇಯ ದೇಶದ ಅಮಂಡಾ ಅನಿಸಿಮೋವಾ ವಿರುದ್ಧ 3 ಸೆಟ್‌ಗಳ ಹೋರಾಟ ನಡೆಸಿ 4-6, 6-4, 6-2ರಿಂದ ಗೆದ್ದು ಬಂದರು.

ಉಕ್ರೇನಿನ ಎಲಿನಾ ಸ್ವಿಟೋಲಿನಾ ಆರ್ಜೆಂಟೀನಾದ ಮರಿಯಾ ಲಾರ್ಡೆಸ್‌ ಕಾರ್ಲೆ ಅವರನ್ನು 3-6, 6-3, 6-4ರಿಂದ ಹಿಮ್ಮೆಟ್ಟಿಸಿದರು. ರಷ್ಯಾದ ದರಿಯಾ ಕಸತ್ಕಿನಾ ರೊಮೇನಿಯಾದ ಜಾಕ್ವೆಲಿನ್‌ ಕ್ರಿಸ್ಟಿನ್‌ ವಿರುದ್ಧ 6-2, 6-4 ಅಂತರದ ಜಯ ಸಾಧಿಸಿದರು.

ಗ್ರೀಕ್‌ನ ಮರಿಯಾ ಸಕ್ಕರಿ ಚೀನದ ಯಫಾನ್‌ ವಾಂಗ್‌ ವಿರುದ್ಧ ಆಡು ತ್ತಿರುವಾಗ ಗಾಯಾಳಾಗಿ ಹೊರಬಿದ್ದರು. ಆಗ ವಾಂಗ್‌ 6-2ರಿಂದ ಮೊದಲ ಸೆಟ್‌ ಜಯಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next