Advertisement

Ranji Trophy: ಬಿಹಾರ ವಿರುದ್ದ ಗೆಲುವಿನ ನಗೆ ಬೀರಿದ ಕರ್ನಾಟಕ

05:48 PM Oct 29, 2024 | Team Udayavani |

ಪಾಟ್ನಾ: ಮೊದಲೆರಡು ಪಂದ್ಯಗಳಲ್ಲಿ ಮಳೆಯ ಕಾರಣದಿಂದ ನಷ್ಟ ಅನುಭವಿಸಿದ್ದ ಕರ್ನಾಟಕ ತಂಡವು (Karnataka Team) ರಣಜಿ ಟ್ರೋಫಿಯ (Ranji Trophy) ಮೂರನೇ ಪಂದ್ಯದಲ್ಲಿ ಜಯ ಗಳಿಸಿದೆ. ಪಾಟ್ನಾದಲ್ಲಿ ನಡೆದ ಬಿಹಾರ್‌ ವಿರುದ್ದದ ಪಂದ್ಯದಲ್ಲಿ ಕರ್ನಾಟಕ ತಂಡವು ಎಂಟು ವಿಕೆಟ್‌ ಅಂತರದ ಜಯ ಗಳಿಸಿದೆ.

Advertisement

ಗೆಲುವಿಗೆ 69 ರನ್‌ ಗುರಿ ಪಡೆದ ಕರ್ನಾಟಕವು ಎರಡು ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು. ನಿಕಿನ್‌ ಜೋಸ್‌ ಅಜೇಯ 28 ರನ್‌ ಮತ್ತು ಅಭಿನವ್‌ ಮನೋಹರ್‌ 17 ರನ್‌ ಗಳಿಸಿ ತಂಡವನ್ನು ಜಯ ತಂದಿತ್ತರು.

ಮೂರನೇ ದಿನದಾಟದಲ್ಲಿ ಏಳು ವಿಕೆಟ್‌ ಗೆ 287 ರನ್‌ ಮಾಡಿದ್ದಲ್ಲಿಗೆ ಕರ್ನಾಟಕ ತಂಡ ಡಿಕ್ಲೇರ್‌ ಮಾಡಿಕೊಂಡಿತು. ಬಳಿಕ ಎರಡನೇ ಇನ್ನಿಂಗ್ಸ್‌ ನ ಬ್ಯಾಟಿಂಗ್‌ ಮಾಡಿದ ಬಿಹಾರ್‌ ಸಕಿಬುಲ್‌ ಗನಿ ಶತಕದ ಹೊರತಾಗಿಯೂ 212 ರನ್‌ ಗಳಿಗೆ ಆಲೌಟಾಯಿತು. ಗನಿ 130 ರನ್‌ ಗಳಿಸಿದರು. ಬಬುಲ್‌ ಕುಮಾರ್‌ 44 ರನ್‌ ಮಾಡಿದರು. ಕರ್ನಾಟಕದ ಪರ ಶ್ರೇಯಸ್‌ ಗೋಪಾಲ್‌ ನಾಲ್ಕು ವಿಕೆಟ್‌, ವೈಶಾಕ್‌ ಮೂರು ವಿಕೆಟ್‌ ಪಡೆದರು. ಕೌಶಿಕ್‌, ವಿದ್ಯಾದರ್‌ ಪಾಟೀಲ್‌ ಮತ್ತು ಮೊಹ್ಸಿನ್‌ ಖಾನ್‌ ತಲಾ ಒಂದು ವಿಕೆಟ್‌ ಪಡೆದರು.

ಮೊದಲ ಇನ್ನಿಂಗ್ಸ್‌ ನ 144 ರನ್‌ ಮುನ್ನಡೆಯ ಕಾರಣದಿಂದ ಕರ್ನಾಟಕಕ್ಕೆ 69 ರನ್‌ ಗುರಿ ಸಿಕ್ಕಿತು. ವೇಗವಾಗಿಯೇ ಬ್ಯಾಟಿಂಗ್‌ ನಡೆಸಿದ ಕರ್ನಾಟಕ 10.1 ಓವರ್‌ ನಲ್ಲಿ ಜಯ ಸಾಧಿಸಿತು. ಕರ್ನಾಟಕ ಪರ ನಾಯಕ ಮಯಾಂಕ್‌ ಅಗರ್ವಾಲ್‌ ಮೊದಲ ಇನ್ನಿಂಗ್ಸ್‌ ನಲ್ಲಿ ಶತಕ ಬಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next