Advertisement
ರವಿವಾರ ರಾತ್ರಿಯ ಸೆಣಸಾಟ ದಲ್ಲಿ ಜೊಕೋವಿಕ್ ಕ್ರೊವೇಶಿಯಾದ ಬೋರ್ನ ಗೊಜೊ ವಿರುದ್ಧ 6-2, 7-5, 6-4 ಅಂತರದ ಜಯ ಸಾಧಿಸಿದರು. 3ನೇ ಸೆಟ್‌ನಲ್ಲಿ ಮಾತ್ರ ಒಂದಿಷ್ಟು ಪ್ರತಿರೋಧ ಎದುರಿಸಿದರು. ಇದಕ್ಕೂ ಹಿಂದಿನ ಪಂದ್ಯದಲ್ಲಿ ಲಾಸ್ಲೊ ಡಿಜೆರೆ ವಿರುದ್ಧ ಜೊಕೋ 5 ಸೆಟ್‌ಗಳ ಹೋರಾಟ ನಡೆಸಿದ್ದನ್ನು ಗಮನಿಸಬಹುದು. ಇದು ಜೊಕೋ ಆಡುತ್ತಿರುವ 13ನೇ ಯುಎಸ್ ಓಪನ್ ಕ್ವಾರ್ಟರ್ ಫೈನಲ್ ಆಗಿದೆ.ಇನ್ನೊಂದು ಪ್ರಿ-ಕ್ವಾರ್ಟರ್ ಫೈನಲ್ ಮುಖಾಮುಖೀಯಲ್ಲಿ ಕ್ಯಾಲಿಫೋರ್ನಿ ಯಾದ 9ನೇ ಶ್ರೇಯಾಂಕಿತ ಆಟಗಾರ ಟೇಲರ್ ಫ್ರಿಟ್ಜ್ ಸ್ವಿಜರ್ಲೆಂಡ್‌ನ ಅರ್ಹತಾ ಆಟಗಾರ ಡೊಮಿನಿಕ್ ಸ್ಟ್ರೈಕರ್ ವಿರುದ್ಧ 7-6 (2), 6-4, 6-4ರಿಂದ ಗೆದ್ದು ಬಂದರು.
ಟೇಲರ್ ಫ್ರಿಟ್ಜ್ ಗೆಲುವಿನೊಂದಿಗೆ 2005ರ ಬಳಿಕ ಅಮೆರಿಕದ ಮೂವರು ಯುಎಸ್ ಓಪನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದಂತಾಯಿತು. ಉಳಿ ದಿಬ್ಬರೆಂದರೆ ಫ್ರಾನ್ಸೆಸ್ ಥಿಯಾಫೊ ಮತ್ತು ಬೆನ್ ಶೆಲ್ಟನ್. ಮೂವರೂ ಆಕ್ರಮಣಕಾರಿ ಹಾಗೂ ಬಿಗ್ ಸರ್ವಿಂಗ್ ಆಟಗಾರರೆಂಬುದು ಗಮ ನಾರ್ಹ. 2005ರಲ್ಲಿ ಆ್ಯಂಡ್ರೆ ಅಗಾಸ್ಸಿ, ಜೇಮ್ಸ್ ಬ್ಲೇಕ್ ಮತ್ತು ರಾಬಿ ಜಿನಾಪ್ರಿ ಈ ಸಾಧನೆಗೈದಿದ್ದರು. ಫ್ರಾನ್ಸೆಸ್ ಥಿಯಾಫೊ-ಬೆನ್ ಶೆಲ್ಟನ್ “ಆಲ್ ಅಮೆರಿಕನ್’ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ. ಹೀಗಾಗಿ ಆತಿಥೇಯ ನಾಡಿನ ಓರ್ವ ಟೆನಿಸಿಗ ಸೆಮಿಫೈನಲ್ ಪ್ರವೇಶ ಈಗಾಗಲೇ ಅಧಿಕೃತಗೊಂಡಿದೆ.
Related Articles
Advertisement
ಚಾಂಪಿಯನ್ ಸ್ವಿಯಾಟೆಕ್ ಔಟ್! ಒಸ್ಟಾಪೆಂಕೊ ವಿರುದ್ಧ 6-3, 3-6, 1-6 ಸೋಲು
ಹಾಲಿ ಚಾಂಪಿಯನ್, ಕಳೆದ ಆರರಲ್ಲಿ 3 ಗ್ರ್ಯಾನ್ ನ್‌ಸ್ಲಾಮ್ ಪ್ರಶಸ್ತಿ ವಿಜೇತೆ, ಜತೆಗೆ ಕಳೆದ ಒಂದೂವರೆ ವರ್ಷದಿಂದ ನಂ.1 ರ್‍ಯಾಂಕಿಂಗ್ ಹೊಂದಿದ್ದ ಇಗಾ ಸ್ವಿಯಾಟೆಕ್ ಅವರಿಗೆ ಯುಎಸ್ ಓಪನ್ 4ನೇ ಸುತ್ತಿನ ಪಂದ್ಯದಲ್ಲಿ ಈ ಯಾವ ಅಂಶಗಳೂ ನೆರವಿಗೆ ಬರಲಿಲ್ಲ. 2017ರ ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊ, ಪೋಲೆಂಡ್ ಆಟಗಾರ್ತಿಯನ್ನು 3-6, 6-3, 6-1ರಿಂದ ಮಣಿಸಿ ಮೆರೆದರು.ಈ ಸೋಲಿನೊಂದಿಗೆ ಸ್ವಿಯಾಟೆಕ್ ನಂಬರ್ ವನ್ ಪಟ್ಟದಿಂದಲೂ ಕೆಳಗಿಳಿಯಲಿದ್ದಾರೆ. ನಂ.2 ಆಟಗಾರ್ತಿ ಅರಿನಾ ಸಬಲೆಂಕಾ ಮೊದಲ ಬಾರಿಗೆ ನಂ.1 ಆಟಗಾರ್ತಿಯಾಗಿ ಮೂಡಿಬರಲಿದ್ದಾರೆ. ಲಾತ್ವಿಯಾದ 20ನೇ ಶ್ರೇಯಾಂಕಿತ ಆಟಗಾರ್ತಿ ಜೆಲೆನಾ ಒಸ್ಟಾಪೆಂಕೊ ಯುಎಸ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ನಿದರ್ಶನ ಇದಾಗಿದೆ. ಇಲ್ಲಿ ಅವರು ಅಮೆರಿಕದ 19 ವರ್ಷದ ಪ್ರತಿಭಾನ್ವಿತ ಆಟಗಾರ್ತಿ ಕೊಕೊ ಗಾಫ್ ಸವಾಲು ಎದುರಿಸಲಿದ್ದಾರೆ. ಗಾಫ್ 6-3, 3-6, 6-1ರಿಂದ ಕ್ಯಾರೋಲಿನ್ ವೋಜ್ನಿಯಾಕಿ ಆಟವನ್ನು ಕೊನೆಗಾಣಿಸಿದರು.ಡೆನ್ಮಾರ್ಕ್‌ನ ವೋಜ್ನಿಯಾಕಿ 2019ರ ಬಳಿಕ ಮೊದಲ ಸಲ ಯುಎಸ್ ಓಪನ್‌ನಲ್ಲಿ ಆಡಲಿಳಿದಿದ್ದರು. 14 ವರ್ಷ ಬಳಿಕ ಕ್ರಿಸ್ಟಿ!
ರೊಮೇನಿಯಾದ ಸೊರಾನಾ ಕ್ರಿಸ್ಟಿ 14 ವರ್ಷಗಳ ಬಳಿಕ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು ವನಿತಾ ವಿಭಾಗದ ಮತ್ತೂಂದು ಬ್ರೇಕಿಂಗ್ ನ್ಯೂಸ್. ಅವರು 6-3, 6-3ರಿಂದ ಬೆಲಿಂಡಾ ಬೆನ್ಸಿಕ್‌ಗೆ ಶಾಕ್ ಕೊಟ್ಟರು. ಕ್ರಿಸ್ಟಿ ಕೊನೆಯ ಸಲ 2009ರಲ್ಲಿ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ್ದರು. ಸೊರಾನಾ ಕ್ರಿಸ್ಟಿ ಅವರಿನ್ನು ಜೆಕ್ ಆಟಗಾರ್ತಿ ಕ್ಯಾರೋಲಿನಾ ಮುಕೊÕàವಾ ವಿರುದ್ಧ ಆಡಲಿದ್ದಾರೆ. ಚೀನದ ವಾಂಗ್ ಕ್ಸಿಯುಂಗ್ ವಿರುದ್ಧ ಮುಕೊÕàವಾ 6-3, 5-7, 6-1 ಅಂತರದ ಮೇಲುಗೈ ದಾಖಲಿಸಿದರು. ಇದು 2023ರಲ್ಲಿ ಕ್ರಿಸ್ಟಿ-ಮುಕೊÕàವಾ ನಡುವೆ ಸಾಗಲಿರುವ 4ನೇ ಮುಖಾಮುಖೀ. ದುಬಾೖ ಮತ್ತು ಮಾಂಟ್ರಿಯಲ್‌ನಲ್ಲಿ ಮುಕೊÕàವಾ, ಮಯಾಮಿಯಲ್ಲಿ ಕ್ರಿಸ್ಟಿ ಜಯ ಸಾಧಿಸಿದ್ದರು. ಬೋಪಣ್ಣ-ಎಬ್ಡೆನ್ ಕ್ವಾರ್ಟರ್ ಫೈನಲ್‌ಗೆ
ಭಾರತದ ರೋಹನ್ ಬೋಪಣ್ಣ ತಮ್ಮ ಆಸ್ಟ್ರೇಲಿಯದ ಜತೆಗಾರ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಯುಎಸ್ ಓಪನ್ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 6ನೇ ಶ್ರೇಯಾಂಕದ ಇಂಡೋ-ಆಸ್ಟ್ರೇಲಿಯನ್ ಜೋಡಿ 3 ಸೆಟ್‌ಗಳ ಕಠಿನ ಹೋರಾಟದ ಬಳಿಕ ಬ್ರಿಟನ್‌ನ ಜೂಲಿಯನ್ ಕ್ಯಾಶ್-ಹೆನ್ರಿ ಪ್ಯಾಟನ್ ವಿರುದ್ಧ 6-4, 6-7 (5 -7), 7-6 (10-6) ಅಂತರದಿಂದ ಗೆದ್ದು ಬಂದರು. 2 ಗಂಟೆ, 22 ನಿಮಿಷಗಳ ಕಾಲ ಇವರ ಹೋರಾಟ ಸಾಗಿತು. ಕಳೆದ ವಿಂಬಲ್ಡನ್‌ನಲ್ಲಿ ಸೆಮಿಫೈನಲ್ ತನಕ ಸಾಗಿದ್ದ ಬೋಪಣ್ಣ-ಎಬ್ಡೆನ್ 13 ಏಸ್ ಸಿಡಿಸಿದರು. ಜತೆಗೆ ಮೊದಲ ಸರ್ವ್ ಶೇ. 81ರಷ್ಟು ಅಂಕಗಳನ್ನು ತಮ್ಮದಾಗಿಸಿಕೊಂಡರು.