Advertisement
ಕಾರ್ಲೋಸ್ ಅಲ್ಕರಾಜ್ ಬ್ರಿಟನ್‌ನ ಡೇನಿಯಲ್ ಇವಾನ್ಸ್ ಅವರ ದಿಟ್ಟ ಸವಾಲನ್ನು ಮೆಟ್ಟಿ ನಿಂತು 6-2, 6-3, 4-6, 6-3 ಅಂತರದಿಂದ ಗೆದ್ದು ಬಂದರು. ಅಲ್ಕರಾಜ್ ಅವರ ಮುಂದಿನ ಎದುರಾಳಿ ಇಟಲಿಯ ಮ್ಯಾಟಿಯೊ ಅರ್ನಾಲ್ಡಿ. ಇವರು ಬ್ರಿಟನ್‌ನ 16ನೇ ಶ್ರೇಯಾಂಕದ ಆಟಗಾರ ಕ್ಯಾಮರಾನ್ ನೂರಿಗೆ ನೇರ ಸೆಟ್‌ಗಳ ಆಘಾತವಿಕ್ಕಿದರು. ಇದು ಅಲ್ಕರಾಜ್-ಅರ್ನಾಲ್ಡಿ ನಡುವಿನ ಮೊದಲ ಮುಖಾಮುಖೀ.21 ವರ್ಷದ ಜಾಕ್ ಡ್ರಾಪರ್ ಅಮೆ ರಿಕದ ಮೈಕಲ್ ಮೋಹ್ ಅವರನ್ನು 6-4, 6-2, 3-6, 6-3ರಿಂದ ಮಣಿಸಿ ಬ್ರಿಟನ್ ಹೋರಾಟವನ್ನು ಜಾರಿಯಲ್ಲಿರಿಸಿದ್ದಾರೆ. ಇವರ ಎದುರಾಳಿ ಆ್ಯಂಡ್ರೆ ರುಬ್ಲೇವ್.
ವನಿತಾ ಸಿಂಗಲ್ಸ್‌ನಲ್ಲಿ ಟ್ಯುನೀಶಿಯಾದ 5ನೇ ಶ್ರೇಯಾಂಕದ ಓನ್ಸ್ ಜೆಬ್ಯೂರ್ ಜೆಕ್ ಆಟಗಾರ್ತಿ ಮಾರಿ ಬುಜ್ಕೋವಾ ಅವರನ್ನು 5-7, 7-6 (5), 6-3ರಿಂದ ಮಣಿಸಿದರು. ಇವರ ಪ್ರಿ-ಕ್ವಾರ್ಟರ್ ಫೈನಲ್ ಎದುರಾಳಿ ಚೀನದ ಜೆಂಗ್ ಕ್ವಿನ್ವೆನ್. ಇವರು ಇಟಲಿಯ ಲೂಸಿಯಾ ಬೊÅಂಝೇಟಿ ವಿರುದ್ಧ 6-3, 4-6, 6-4ರಿಂದ ಗೆದ್ದು ಬಂದರು.
Related Articles
Advertisement
ವಿಂಬಲ್ಡನ್ ಚಾಂಪಿಯನ್ ಮಾರ್ಕೆಟಾ ವೊಂಡ್ರುಸೋವಾ ಕೂಡ ಓಟ ಬೆಳೆಸಿದ್ದು, ಎಕಟೆರಿನಾ ಅಲೆಕ್ಸಾಂಡ್ರೋವಾ ವಿರುದ್ಧ 6-2, 6-1; ಅರಿನಾ ಸಬಲೆಂಕಾ ಫ್ರಾನ್ಸ್‌ನ ಕ್ಲಾರಾ ಬುರೆಲ್ ವಿರುದ್ಧ 6-1, 6-1 ಅಂತರದ ಸುಲಭ ಗೆಲುವು ಒಲಿಸಿಕೊಂಡರು.