ವಾಷಿಂಗ್ಟನ್ : ಎಂಟು ಜನರಿದ್ದ ಅಮೇರಿಕನ್ ಆಸ್ಪ್ರೆ ಸೇನಾ ವಿಮಾನವು ಬುಧವಾರ ಜಪಾನ್ ಕರಾವಳಿಯಲ್ಲಿ ಪತನಗೊಂಡಿದೆ ಎಂದು ಜಪಾನಿನ ಕೋಸ್ಟ್ ಗಾರ್ಡ್ ಅನ್ನು ಉಲ್ಲೇಖಿಸಿ ಜಪಾನ್‌ನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಈ ಘಟನೆಯು ದೇಶದ ದಕ್ಷಿಣದ ಪ್ರಮುಖ ದ್ವೀಪವಾದ ಕ್ಯುಶುವಿನ ದಕ್ಷಿಣದಲ್ಲಿರುವ ಯಕುಶಿಮಾ ದ್ವೀಪದ ಬಳಿ ಸಂಭವಿಸಿದೆ ಎನ್ನಲಾಗಿದೆ.
“ಯುಎಸ್ ಮಿಲಿಟರಿ ಓಸ್ಪ್ರೆ ಯುದ್ಧ ವಿಮಾನವು ಯಕುಶಿಮಾ ದ್ವೀಪದಲ್ಲಿ ಪತನಗೊಂಡಿದೆ ಎಂದು ನಮಗೆ ಇಂದು ಮಧ್ಯಾಹ್ನ 2:47 ಕ್ಕೆ ಸುದ್ದಿ ಬಂದಿದೆ” ಎಂದು ವಕ್ತಾರರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಸಮುದ್ರಕ್ಕೆ ಬಿದ್ದಾಗ ವಿಮಾನದ ಎಡ ಇಂಜಿನ್‌ನಿಂದ ಬೆಂಕಿ ಕಾಣಿಸಿಕೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಯಕುಶಿಮಾ ದ್ವೀಪವು ಜಪಾನ್‌ನ ದಕ್ಷಿಣದ ಪ್ರಮುಖ ದ್ವೀಪವಾದ ಕ್ಯುಶುವಿನ ದಕ್ಷಿಣದಲ್ಲಿದೆ.
ಸೇನಾ ವಿಮಾನ ಯಮಗುಚಿ ಪ್ರದೇಶದ ಇವಾಕುನಿ ಯುಎಸ್ ನೆಲೆಯಿಂದ ಓಕಿನಾವಾದಲ್ಲಿನ ಕಡೇನಾ ಬೇಸ್‌ಗೆ ಹೊರಟಿತ್ತು ಎಂದು ಜಪಾನಿನ ಪ್ರಸಾರಕ NHK ವರದಿ ಮಾಡಿದೆ. ಪತನಗೊಂಡ ವಿಮಾನದಲ್ಲಿದ್ದವರ ವಿವರ ಇನ್ನೂ ಲಭ್ಯವಾಗಲಿಲ್ಲ ಅಲ್ಲದೆ ಅವರ ಸ್ಥಿತಿಗತಿಗಳ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.
ಕಳೆದ ಆಗಸ್ಟ್‌ನಲ್ಲಿ, ಉತ್ತರ ಆಸ್ಟ್ರೇಲಿಯಾದಲ್ಲಿ ಬೇರೊಂದು ಆಸ್ಪ್ರೆ ವಿಮಾನ ಅಪಘಾತಕ್ಕೀಡಾಯಿತು, ಈ ವೇಳೆ ಇದರಲ್ಲಿದ್ದ 23 ಜನರಲ್ಲಿ ಮೂವರು ಸಾವನ್ನಪ್ಪಿದರು.
ಇದನ್ನೂ ಓದಿ: Drought:ಬರಗಾಲದ ಪರಿಹಾರ ಕುರಿತು ಸಮೀಕ್ಷೆ; ಎನ್.ಡಿ.ಆರ್.ಎಫ್ ಪ್ರಕಾರ ಪರಿಹಾರ: ಮುಖ್ಯಮಂತ್ರಿ