ವಾಷಿಂಗ್ಟನ್:ಎಚ್ 1ಬಿ ವೀಸಾ ಹೊಂದಿರುವವರ ಪತ್ನಿಯರು ಅಮೆರಿಕದಲ್ಲಿ ಉದ್ಯೋಗ ಮಾಡುವಂತೆ ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಆಡಳಿತ ನೀಡಿದ್ದ ಅನುಮತಿಯನ್ನು ಅಧ್ಯಕ್ಷ ಟ್ರಂಪ್ ರದ್ದುಗೊಳಿಸುವ ಚಿಂತನೆ ನಡೆಸುತ್ತಿದೆ, ಇದರಿಂದಾಗಿ ಸಾವಿರಾರು ಭಾರತೀಯ ಉದ್ಯೋಗಿಗಳಿಗೆ ಮತ್ತು ಕುಟುಂಬಗಳಿಗೆ ಹೊಡೆತ ಬೀಳಲಿದೆ ಎಂದು ವರದಿ ತಿಳಿಸಿದೆ.
ಬರಾಕ್ ಒಬಾಮಾ ಆಡಳಿತಾವಧಿಯಲ್ಲಿ ನಿಯಮವನ್ನು ಜಾರಿಗೆ ತರಲಾಗಿತ್ತು, 2015ರಿಂದ ಎಚ್ 1 ಬಿ ವೀಸಾ ಅಥವಾ ಅತ್ಯುನ್ನತ ಕೌಶಲ್ಯ ಹೊಂದಿರುವವರ ಮತ್ತು ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿರುವವರ ಪತ್ನಿಯರು ಅಮೆರಿಕಾದಲ್ಲಿ ಎಚ್ 4 ಅವಲಂಬಿತರ ವೀಸಾದಡಿ ಉದ್ಯೋಗ ಮಾಡಲು ಅರ್ಹರು ಎಂದು ಒಬಾಮಾ ಆಡಳಿತ ಕಾನೂನು ಜಾರಿಗೆ ತಂದಿತ್ತು.
2016ರಲ್ಲಿ 41ಸಾವಿರಕ್ಕೂ ಅಧಿಕ ಎಚ್ 4 ವೀಸಾ ಹೊಂದಿರುವವರಿಗೆ ಉದ್ಯೋಗ ಮಾಡಲು ಅವಕಾಶ ನೀಡಲಾಗಿತ್ತು. ಈ ವರ್ಷದ ಜೂನ್ ವರೆಗೆ 36000 ಎಚ್ 4 ವೀಸಾ ಉದ್ಯೋಗ ಮಾಡಲು ಅವಕಾಶ ಪಡೆದಿದ್ದಾರೆ.
ಎಚ್ 1 ಬಿ ವೀಸಾದಿಂದಾಗಿ ವಿದೇಶಿ ನುರಿತ ಕೆಲಸಗಾರರನ್ನು ಅಮೆರಿಕದತ್ತ ಹೆಚ್ಚು ಸೆಳೆಯುತ್ತಿತ್ತು. ಇದರಿಂದಾಗಿ ಅಮೆರಿಕಕ್ಕೆ ಭಾರತ ಮತ್ತು ಚೀನಾದಿಂದ ಹೆಚ್ಚು ಮಂದಿ ಉದ್ಯೋಗ ಅರಸಿ ಬರುತ್ತಾರೆ ಎಂದು ವರದಿ ಹೇಳಿದೆ.