Advertisement

ಅಮೆರಿಕದಲ್ಲಿ ಕೋವಿಡ್‌ ಸೋಂಕಿಗೆ 7 ಲಕ್ಷ ಸಾವು

12:36 AM Oct 03, 2021 | Team Udayavani |

ವಾಷಿಂಗ್ಟನ್‌/ಹೊಸದಿಲ್ಲಿ: ಕೋವಿಡ್‌ದಿಂದಾಗಿ ಅಮೆರಿಕದಲ್ಲಿ ಅಸುನೀಗಿ ದವರ ಸಂಖ್ಯೆ 7 ಲಕ್ಷಕ್ಕೆ ಏರಿದೆ. ಮೂರೂವರೆ ತಿಂಗಳ ಹಿಂದೆ ಅಂದರೆ ಜೂನ್‌ ಮಧ್ಯದಲ್ಲಿ ದೇಶದಲ್ಲಿ ಕೊರೊನಾದಿಂದಾಗಿ ಮೃತರ ಸಂಖ್ಯೆ 6 ಲಕ್ಷ ದಾಟಿತ್ತು.

Advertisement

ಅದಾದ ಅನಂತರ ಡೆಲ್ಟಾ ರೂಪಾಂತರಿಯಿಂದಾಗಿ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಪ್ರತೀ ದಿನ 1,500-2,500 ಮಂದಿ ಸೋಂಕಿಗೆ ಬಲಿಯಾಗುತ್ತಿದ್ದಾರೆ.

ಅಮೆರಿಕದಲ್ಲಿ ಇದುವರೆಗೆ 70 ಮಿಲಿಯ ಮಂದಿಗೆ ಇನ್ನೂ ಲಸಿಕೆ ನೀಡಲಾಗಿಲ್ಲ ಎನ್ನುವುದು ಗಮನಾರ್ಹ. ಇದೇ ವೇಳೆ ಜಾಗತಿಕವಾಗಿ ಕೊರೊನಾಗೆ ಸಾವಿಗೀಡಾದವರ ಸಂಖ್ಯೆ 48 ಲಕ್ಷ ದಾಟಿದೆ.

ಇದನ್ನೂ ಓದಿ:ಕರ್ನಾಟಕಕ್ಕೆ “ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಅತ್ಯುತ್ತಮ ರಾಜ್ಯ” ಪ್ರಶಸ್ತಿ

ಚರ್ಚೆ ನಡೆದಿದೆ: ಲಸಿಕೆ ಪ್ರಮಾಣ ಪತ್ರ ವನ್ನು ಗುರುತಿಸುವ ಬಗ್ಗೆ ಕೇಂದ್ರ ಸರಕಾರದೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ಬ್ರಿಟನ್‌ ಸರಕಾರ ಹೇಳಿದೆ. ಯು.ಕೆ. ಪ್ರಯಾಣಿಕರಿಗೆ ಭಾರತದಲ್ಲಿ 10 ದಿನಗಳ ಕ್ವಾರಂಟೈನ್‌ ಕಡ್ಡಾಯ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next