ವಾಷಿಂಗ್ಟನ್: ಕೋವಿಡ್ 19 ಎರಡನೇ ಅಲೆಯ ಸೋಂಕಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಈವರೆಗೆ ಸುಮಾರು 3,656 ಕೋಟಿಗೂ (500ದಶಲಕ್ಷ ಡಾಲರ್) ಅಧಿಕ ಮೊತ್ತದ ನೆರವು ನೀಡಲಾಗಿದೆ ಎಂದು ಅಮೆರಿಕ ಬುಧವಾರ(ಮೇ 19) ತಿಳಿಸಿದೆ.
ಇದನ್ನೂ ಓದಿ:ಸೂರಿಂಜೆ: ಗದ್ದೆ, ತೋಟಗಳಿಗೆ ನುಗ್ಗಿದ ಸಂಸ್ಕರಿಸದ ತೈಲಯುಕ್ತ ನೀರು; ಗ್ರಾಮಸ್ಥರಿಂದ ಆಕ್ರೋಶ
ಅಷ್ಟೇ ಅಲ್ಲ ಇತರ ದೇಶಗಳಿಗೂ 80 ಮಿಲಿಯನ್ ಲಸಿಕೆಗಳನ್ನು ವಿತರಿಸುವ ಬಗ್ಗೆಯೂ ಶೀಘ್ರದಲ್ಲಿಯೇ ನಿರ್ಧಾರ ತೆಗೆದುಕೊಳ್ಳುವುದಾಗಿ ಶ್ವೇತಭವನ ಹೇಳಿದೆ.
ಕೋವಿಡ್ 19 ಬಿಕ್ಕಟ್ಟು ಎದುರಿಸುತ್ತಿರುವ ಭಾರತಕ್ಕೆ ಅಮೆರಿಕದ ಫೆಡರಲ್ ಸರ್ಕಾರ, ವಿವಿಧ ರಾಜ್ಯಗಳು, ಸಂಘಟನೆಗಳು ಮತ್ತು ಹಲವಾರು ಕಂಪನಿಗಳು ಕೂಡಾ ಕೋವಿಡ್ ನೆರವಿನ ಪರಿಹಾರವನ್ನು ನೀಡಿದೆ. ಅಲ್ಲದೇ ಹಲವು ನಾಗರಿಕರು ಕೂಡಾ ಸಹಾಯಹಸ್ತ ಚಾಚಿರುವುದಾಗಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೋವಿಡ್ 19 ಸೋಂಕಿನಿಂದ ತತ್ತರಿಸಿ ಹೋಗಿರುವ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೂ ಕೂಡಾ ಜೋ ಬೈಡೆನ್ ನೇತೃತ್ವದ ಅಮೆರಿಕ ಸರ್ಕಾರ ನೆರವು ನೀಡುವ ಕಾರ್ಯದಲ್ಲಿ ಕೈಜೋಡಿಸಲಿದೆ ಎಂದು ಸಾಕಿ ತಿಳಿಸಿದ್ದಾರೆ. ಆಕ್ಸಿಜನ್, ಆಕ್ಸಿಜನ್ ಸಪ್ಲೈಸ್ ಮತ್ತು 95 ಮಾಸ್ಕ್, ಮೆಡಿಸಿನ್ ಸೇರಿದಂತೆ ವೈದ್ಯಕೀಯ ಉಪಕರಣ ಹೊತ್ತ ಏಳು ವಿಮಾನಗಳನ್ನು ಅಮೆರಿಕ ಕಳುಹಿಸಿದೆ ಎಂದು ಹೇಳಿದರು.