Advertisement

ಭಾರತಕ್ಕೆ ಆರು ಅಪಾಚೆ ಹೆಲಿಕಾಪ್ಟರ್‌ ಮಾರಾಟ: ಅಮೆರಿಕ ಅನುಮತಿ

11:52 AM Jun 13, 2018 | udayavani editorial |

ಹೊಸದಿಲ್ಲಿ : ಭಾರತದ ರಕ್ಷಣಾ ಸಾಮರ್ಥ್ಯಕ್ಕೆ  ಭಾರೀ ದೊಡ್ಡ ಶಕ್ತಿಯನ್ನು ತುಂಬುವ ರೀತಿಯಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ ಭಾರತಕ್ಕೆ ಆರು ಬೋಯಿಂಗ್‌ ಎಎಚ್‌-64ಇ ಅಪಾಚೆ ದಾಳಿ ಹೆಲಿಕಾಪ್ಟರ್‌ಗಳ ಮಾರಾಟಕ್ಕೆ ಅನುಮತಿ ನೀಡಿದೆ. 

Advertisement

ಭಾರತದ ಕೋರಿಕೆಯ ಪ್ರಕಾರ ಅದಕ್ಕೆ ಮಾರಾಟ ಮಾಡಲಾಗಿರುವ ಅಪಾಚೆ ಹೆಲಿಕಾಪ್ಟರ್‌ಗಳು ಅದರ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲಿವೆಯಲ್ಲದೆ ಅಮೆರಿಕ-ಭಾರತ ವ್ಯೂಹಾತ್ಮಕ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಅಮೆರಿಕ ಹೇಳಿದೆ. 

ಅಮೆರಿಕ ಭಾರತಕ್ಕೆ ಮಾರಾಟ ಮಾಡಿರುವ ಆರು ಅಪಾಚೆ ಹೆಲಿಕಾಪ್ಟರ್‌ಗಳಿಂದಾಗಿ ದಕ್ಷಿಣ ಏಶ್ಯದಲ್ಲಿನ ಮೂಲ ಮಿಲಿಟರಿ ಸಂತುಲನೆಯಲ್ಲಿ ಯಾವುದೇ ಬದಲಾವಣೆ ಆಗದು; ಆದರೆ ಭಾರತೀಯ ಸಶಸ್ತ್ರ ಪಡೆಗಳಿಗೆ ನೆಲದಲ್ಲಿ ಎದುರಾಗುವ ಸಶಸ್ತ್ರ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ಅದು ವಿಶೇಷ ಶಕ್ತಿ ದೊರಕುವುದು ಎಂದು ಅಮೆರಿಕ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. 

ಅಪಾಚೆ ಹೆಲಿಕಾಪ್ಟರ್‌ಗಳನ್ನು ಬೋಯಿಂಗ್‌ ಕಂಪೆನಿ ಉತ್ಪಾದಿಸಿದ್ದು ಈ ರೀತಿಯ ಹೆಲಿಕಾಪ್ಟರ್‌ಗಳನ್ನು ಭಾರತದಲ್ಲಿ ಉತ್ಪಾದಿಸುವುದಕ್ಕೆ ಅದು ಟಾಟಾ ಕಂಪೆನಿಯೊಂದಿಗೆ ಭಾಗೀದಾರಿಕೆಯನ್ನು ಹೊಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next