Advertisement
ಅಮೆರಿಕದ 3 ಪ್ರಾಂತದಲ್ಲಿ ಟ್ರಂಪ್ಗಿಂತ ಹ್ಯಾರಿಸ್ಗೆ ಬೆಂಬಲ ಹೆಚ್ಚು: ಸಮೀಕ್ಷೆವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಪ್ರಚಾರ ಬಿರುಸುಗೊಳ್ಳುತ್ತಿರುವಂತೆಯೇ ಫಲಿತಾಂಶ ದಲ್ಲಿ ತಿರುವು ತರಬಲ್ಲ ವಿಸ್ಕಾನ್ಸಿನ್, ಪೆನ್ಸಿಲ್ವೇನಿಯಾ, ಮಿಚಿಗನ್ ಪ್ರಾಂತಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಅದರಲ್ಲಿ ಮಾಜಿ ಅಧ್ಯಕ್ಷ ಟ್ರಂಪ್ಗಿಂತ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅಲ್ಪಮತಗಳ ಅಂತರದಲ್ಲಿ ಮುಂದಿದ್ದಾರೆ. ಹ್ಯಾರಿಸ್ಗೆ ಶೇ.50 ಬೆಂಬಲ ನೀಡಿದ್ದರೆ, ಟ್ರಂಪ್ಗೆ ಶೇ.46 ಬೆಂಬಲ ವ್ಯಕ್ತವಾಗಿದೆ. 1,973 ಮತದಾರರನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದೆ. ಜೋ ಬೈಡೆನ್ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಬಳಿಕ ಹ್ಯಾರಿಸ್ ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೋಷಿಸಲಾಗಿದೆ.