Advertisement
ಸುಮಾರು 24.3 ಕೋಟಿ ಮಂದಿ ಮತದಾರರಿದ್ದು, ನ. 2ರ ವರೆಗೆ 7.5 ಕೋಟಿಗೂ ಹೆಚ್ಚು ಮಂದಿ ಆನ್ಲೈನ್ ಮೂಲಕ ಹಕ್ಕು ಚಲಾಯಿಸಿದ್ದಾರೆ ಎಂದು ಫ್ಲೋರಿಡಾ ವಿ.ವಿ. ತಿಳಿಸಿದೆ.
ಅಮೆರಿಕ ಚುನಾವಣೆಯಲ್ಲಿ ನಿರ್ಣಾಯಕ ಎಂದು ಕರೆಸಿಕೊಳ್ಳುವ ಪೆನ್ಸಿಲ್ವೇನಿಯಾ, ಮಿಚಿಗನ್, ವಿಸ್ಕಾನ್ಸಿನ್, ನೆವಡಾ, ಜಾರ್ಜಿಯಾ, ಅರಿಜೋನಾ ಮತ್ತು ಉತ್ತರ ಕೆರೋಲಿನಾಗಳಲ್ಲಿ ಇಬ್ಬರೂ ಅಭ್ಯರ್ಥಿಗಳು ಕೊನೆಯ ಕ್ಷಣದ ಅಬ್ಬರದ ಪ್ರಚಾರ ನಡೆಸಿದ್ದಾರೆ. ಕೊನೆಯ ದಿನದ ಕಮಲಾ ಪೆನ್ಸಿಲ್ವೇನಿಯಾದಲ್ಲಿ 5 ರ್ಯಾಲಿಗಳಲ್ಲಿ ಭಾಗಿಯಾಗಿದ್ದರೆ ಟ್ರಂಪ್ ಉತ್ತರ ಕ್ಯಾರೋಲಿನಾ, ಪೆನ್ಸಿಲ್ವೇನಿಯಾ, ಮಿಚಿಗನ್ನಲ್ಲಿ 4 ಸಮಾವೇಶ ನಡೆಸಿದ್ದಾರೆ.
Related Articles
ನ್ಯೂಯಾರ್ಕ್ ಟೈಮ್ಸ್ ನಡೆಸಿರುವ ಸಮೀಕ್ಷೆಯ ಪ್ರಕಾರ ಅರಿಜೋನಾ ಹೊರತುಪಡಿಸಿ ಉಳಿದ ನಿರ್ಣಾಯಕ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್ ಮುನ್ನಡೆಯಲ್ಲಿದ್ದಾರೆ. ಶೇ. 46ರಷ್ಟು ಮಂದಿ ಕಮಲಾ ಪರ ಒಲವು ತೋರಿದ್ದರೆ, ಶೇ. 43ರಷ್ಟು ಮಂದಿ ಟ್ರಂಪ್ ಪರವಾಗಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಫಲಿತಾಂಶ ಕಮಲಾ ಪರವಾಗಿ ಬಂದರೆ ಈ ಹುದ್ದೆಗೇರಿದ ಮೊದಲ ಭಾರತೀಯ ಮೂಲದ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ. ಜತೆಗೆ ಅಮೆರಿಕದ ಅಧ್ಯಕ್ಷ ಗಾದಿಗೇರಿದ ಮೊದಲ ಮಹಿಳೆಯೂ ಆಗಲಿದ್ದಾರೆ.
Advertisement
ಡಿ. 10ಕ್ಕೆ ಮತ ಎಣಿಕೆ ಪೂರ್ಣಮಂಗಳವಾರ (ಅಮೆರಿಕ ಕಾಲಮಾನ) ಅಮೆರಿಕದಲ್ಲಿ ಮತದಾನ ಮುಕ್ತಾಯವಾದರೂ ಅಂತಿಮ ಫಲಿತಾಂಶ ಘೋಷಣೆ ಡಿ. 10ರಂದು ನಡೆಯಲಿದೆ. ಮತ ಪತ್ರಗಳನ್ನು ಬಳಕೆ ಮಾಡಿ ಚುನಾವಣೆ ನಡೆಸಿರುವುದರಿಂದ ಇದರ ಎಣಿಕೆಗೆ ಹೆಚ್ಚಿನ ಸಮಯ ಬೇಕಿದ್ದು, 3 ದಿನಗಳ ಬಳಿಕ ಗೆಲ್ಲುವವರು ಯಾರು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 24.3 ಕೋಟಿ ಮತದಾರರು
-ಕಮಲಾ, ಟ್ರಂಪ್ ಭವಿಷ್ಯ ನಿರ್ಧರಿಸಲಿದ್ದಾರೆ 24.3 ಕೋಟಿ ಮತದಾರರು
-ಆನ್ಲೈನ್ ಆಗಿ ಹಕ್ಕು ಚಲಾಯಿಸಿದ 7.5 ಕೋಟಿಗೂ ಹೆಚ್ಚು ಜನ
-ಮತ ಪತ್ರ ಬಳಕೆ ಮಾಡಿದ ಕಾರಣ ಫಲಿತಾಂಶ ವಿಳಂಬ ಸಾಧ್ಯತೆ
-ಮತ ಎಣಿಕೆ ಪೂರ್ಣಗೊಳಿಸಲು ಡಿಸೆಂಬರ್ 10 ಅಂತಿಮ ದಿನ
-ಕೊನೇ ದಿನವೂ ಟ್ರಂಪ್, ಕಮಲಾ ಹ್ಯಾರಿಸ್ ಅಬ್ಬರದ ಪ್ರಚಾರ
-ಫಲಿತಾಂಶ ನಿರ್ಧರಿಸಲಿರುವ ಅಮೆರಿಕ 7 ನಿರ್ಣಾಯಕ ರಾಜ್ಯಗಳು