ವಾಷಿಂಗ್ಟನ್: ತಮಿಳುನಾಡಿನಲ್ಲಿ 3.3 ಗಿಗಾ ವ್ಯಾಟ್ ಸಾಮರ್ಥ್ಯದ ಏಕೀಕೃತ ಫೋಟೋವೋಲ್ಟಿಕ್ ಸೌರ ಘಟಕ ಸ್ಥಾಪನೆ ಮಾಡಲು ಅಮೆರಿಕ ಸರಕಾರದ ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಶನ್ (ಡಿಎಫ್ ಸಿ ) 500 ಮಿಲಿಯ ಡಾಲರ್ ನೆರವು ನೀಡುವ ಘೋಷಣೆ ಮಾಡಿದೆ.
ಅಮೆರಿಕದ ಫಸ್ಟ್ ಸೋಲಾರ್ ಕಂಪೆನಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ ಎಂದು ಸಂಸ್ಥೆಯ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವ್ ಜಗದೀಶನ್ ತಿಳಿಸಿದ್ದಾರೆ.
ಸಹ್ಯ ಇಂಧನವನ್ನು ಹೊಂದುವ ಬಗ್ಗೆ ಅಮೆರಿಕ ಯಾವ ರೀತಿ ಆಸಕ್ತಿ ಹೊಂದಿದೆಯೋ ಅದೇ ರೀತಿ ಭಾರತವೂ ಕೂಡ ಇಂಥದ್ದೇ ಇಚ್ಛೆಯನ್ನು ಹೊಂದಿರುವುದು ಪ್ರಶಂಸನೀಯ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಪಾರ್ಟಿಗಳಿಗೆ ಡ್ರಗ್ಸ್ ಮಾರಾಟ-ಕೇರಳ ಮೂಲದ ಆರೋಪಿ ಬಂಧನ
ಯೋಜನೆಯನ್ನು ಕೈಗೆತ್ತಿಕೊಳ್ಳಲಿರುವ ಫಸ್ಟ್ ಸೋಲಾರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಮಾತನಾಡಿ ಅಮೆರಿಕದಂತೆ ಭಾರತವೂ ಕೂಡ ಸ್ವದೇಶೀಯವಾಗಿಯೇ ಸೌರ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿ ಯಾಗಲು ಮುಂದಾಗುತ್ತಿದೆ.ಅದಕ್ಕಾಗಿ ಡಿಎಫ್ಸಿ ಹಣಕಾಸಿನ ನೆರವು ನೀಡಿರುವುದು ಪ್ರಶಂಸನೀಯ ಎಂದು ಹೇಳಿದ್ದಾರೆ.