ನವದೆಹಲಿ: ಜಗತ್ತಿನಾದ್ಯಂತ ಮಂಕಿಪಾಕ್ಸ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಅಮೆರಿಕ ಗುರುವಾರ (ಆಗಸ್ಟ್ 05) ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆ. ಅಷ್ಟೇ ಅಲ್ಲ ಮಂಕಿಪಾಕ್ಸ್ ನಿಯಂತ್ರಿಸುವ ನಿಟ್ಟಿನಲ್ಲಿ ಹೆಚ್ಚುವರಿ ಆರ್ಥಿಕ ಮತ್ತು ಉಪಕರಣಗಳ ನೆರವು ನೀಡುವ ನಿರೀಕ್ಷೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸೌಂದರ್ಯ ಸ್ಪರ್ಧೆಯಲ್ಲಿ ಪೊಲೀಸರ ರಾಂಪ್ ವಾಕ್; ವರ್ಗಾವಣೆ ಶಿಕ್ಷೆ
ಅಮೆರಿಕದಲ್ಲಿ ಬುಧವಾರ ಮಂಕಿಪಾಕ್ಸ್ ಸೋಂಕು ಪ್ರಕರಣಗಳ ಸಂಖ್ಯೆ 6,600ಕ್ಕೆ ಏರಿಕೆಯಾಗಿತ್ತು. ಈ ಎಲ್ಲಾ ಪ್ರಕರಣಗಳು ಲೈಂಗಿಕ ಸಂಪರ್ಕದಿಂದಾಗಿ ಹರಡಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಮಂಕಿಪಾಕ್ಸ್ ಸೋಂಕು ತಡೆಗಟ್ಟಲು ನಾವು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅದೇ ರೀತಿ ಅಮೆರಿಕ ನಿವಾಸಿಗಳು ಮಂಕಿಪಾಕ್ಸ್ ಸೋಂಕನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆರೋಗ್ಯ ಮತ್ತು ಮಾನವ ಸೇವೇಗಳ ಕಾರ್ಯದರ್ಶಿ ಕ್ಸೇವಿಯರ್ ವಿವರಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಣೆಯಿಂದ ಮಂಕಿಪಾಕ್ಸ್ ಸೋಂಕಿತರ ಅಂಕಿಅಂಶವನ್ನು ಸುಧಾರಣೆಗೊಳಿಸಲು ಸಾಧ್ಯವಾಗುತ್ತದೆ. ಮಂಕಿಪಾಕ್ಸ್ ಪ್ರಕರಣದ ಹೆಚ್ಚಳದಿಂದ ಅಧ್ಯಕ್ಷ ಬೈಡೆನ್ ನೇತೃತ್ವದ ಅಮೆರಿಕ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತವಾಗುತ್ತಿರುವುದಾಗಿ ವರದಿ ತಿಳಿಸಿದೆ.