ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಮುಖಭಂಗಕ್ಕೆ ತುತ್ತಾಗಿದ್ದಾರೆ. ಫ್ಲೋರಿಡಾದ ಫೆಡರಲ್ ನ್ಯಾಯಾಧೀಶ ಡೊನಾಲ್ಡ್ ಮಿಡ್ಲ್ ಬ್ರೂಕ್ಸ್, ಟ್ರಂಪ್ ಮತ್ತವರ ವಕೀಲರಿಬ್ಬರೂ ಸೇರಿ ಒಟ್ಟು 8.11 ಕೋಟಿ ರೂ. ದಂಡ ಕಟ್ಟುವಂತೆ ಆದೇಶಿಸಿದ್ದಾರೆ!
ಇದು ಟ್ರಂಪ್ ನ್ಯಾಯಾಲಯ ಹೋರಾಟದ ಇತಿಹಾಸದಲ್ಲೇ ದೊಡ್ಡ ಹಿನ್ನಡೆ ಎಂದೇ ವರ್ಣಿಸಲಾಗಿದೆ. ಡೆಮಾಕ್ರಾಟಿಕ್ ಪಕ್ಷದ ನಾಯಕಿ ಹಿಲರಿ ಕ್ಲಿಂಟನ್, ಎಫ್ಬಿಐ ಮಾಜಿ ನಿರ್ದೇಶಕ ಜೇಮ್ಸ್ ಕಾಮೆ ಸೇರಿದಂತೆ ಒಟ್ಟು 31 ಮಂದಿ ವಿರುದ್ಧ ಪಿತೂರಿ ಪ್ರಕರಣವನ್ನು ಟ್ರಂಪ್ ದಾಖಲಿಸಿದ್ದರು.
2016ರಲ್ಲಿ ತಾನು ರಷ್ಯಾ ನೆರವಿನಿಂದ ಗೆದ್ದಿದ್ದು ಎಂದು ಹಿಲರಿ ಮತ್ತಿತರರು ಅಪಪ್ರಚಾರ ಮಾಡಿದ್ದರು ಎನ್ನುವುದು ಟ್ರಂಪ್ ಆರೋಪವಾಗಿತ್ತು.