Advertisement

ವ್ಯಾಪಾರ ಯುದ್ಧದಿಂದ ಲಾಭ

06:00 AM Sep 29, 2018 | |

ನವದೆಹಲಿ: ಅಮೆರಿಕ ಹಾಗೂ ಇತರ ದೇಶಗಳ ಮಧ್ಯೆ ನಡೆಯುತ್ತಿರುವ ವ್ಯಾಪಾರ ಸಮರವು ಆರಂಭದಲ್ಲಿ ಅಸ್ಥಿರತೆ ಮೂಡಿಸಬಹುದು. ಆದರೆ ಭಾರತಕ್ಕೆ ಇದು ವ್ಯಾಪಾರ ಹಾಗೂ ಉತ್ಪಾದನೆ ಕೇಂದ್ರವಾಗಿ ಬೆಳೆಯಲು ಅವಕಾಶ ನಿರ್ಮಿಸಿದೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಹೀಗಾಗಿ ಅವಕಾಶವಾಗಿ ಸವಾಲು ಯಾವಾಗ ರೂಪಾಂತರವಾಗುತ್ತದೆ ಎಂಬುದನ್ನು ನಾವು ಗಮನಿಸಬೇಕು ಎಂದು ಅವರು ಹೇಳಿದ್ದಾರೆ. ತಜ್ಞರ ಪ್ರಕಾರ ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವ್ಯಾಪಾರ ಯುದ್ಧದಿಂದಾಗಿ ಎಲೆಕ್ಟ್ರಿಕಲ್‌ ಸಲಕರಣೆ, ವಾಹನ ಮತ್ತು ರಾಸಾಯನಿಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಉತ್ಪನ್ನಗಳ ಬೆಲೆ ಅಮೆರಿಕ ಮಾರುಕಟ್ಟೆಯಲ್ಲಿ ಕಡಿಮೆಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next