ನ್ಯೂಯಾರ್ಕ್:ಅಮೆರಿಕದಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸೇರಿದಂತೆ ಇತರ ರಾಜಕೀಯ ನಾಯಕರ ಹತ್ಯೆಗಳನ್ನು ನಡೆಸಲು ಇರಾನ್‌ನೊಂದಿಗೆ ಸಂಪರ್ಕ ಹೊಂದಿದ್ದ ಪಾಕಿಸ್ಥಾನಿ ವ್ಯಕ್ತಿಯೊಬ್ಬ ಸಂಚು ಹೂಡಿರುವುದು ಕಂಡು ಬಂದಿದೆ.
ಭಾರೀ ಹಣ ಪಡೆದು ಹತ್ಯೆ ಮಾಡಲು ಮುಂದಾದ ಕುರಿತು ಯುಎಸ್ ನ್ಯಾಯಾಂಗ ಇಲಾಖೆ ಮಂಗಳವಾರ ಬಹಿರಂಗಪಡಿಸಿದೆ. FBI ನಿರ್ದೇಶಕ ಕ್ರಿಸ್ಟೋಫರ್ ವ್ರೇ ಈ ಸಂಚನ್ನು “ಡೇಂಜರಸ್ ಮರ್ಡರ್ ಫಾರ್ ಹೈರ್ ಪ್ಲಾಟ್…” ನೇರವಾಗಿ ಇರಾನಿನ ಸಹಕಾರದಿಂದ ” ಎಂದು ಹೇಳಿದ್ದಾರೆ.
ಆರೋಪಿತನನ್ನ 46 ವರ್ಷದ ಆಸಿಫ್ ಮರ್ಚೆಂಟ್ ಎಂದು ಗುರುತಿಸಲಾಗಿದೆ. ದೋಷಾರೋಪಣೆಯ ಪ್ರಕಾರ, ಮರ್ಚೆಂಟ್ ಇರಾನ್‌ನಲ್ಲಿ ಸ್ವಲ್ಪ ಸಮಯ ಕಳೆದ ನಂತರ ಪಾಕಿಸ್ಥಾನದಿಂದ ಯುಎಸ್‌ಗೆ ಬಂದಿದ್ದ.
ಜೂನ್‌ನಲ್ಲಿ ಆಸಿಫ್ ಕೊಲೆಗಳನ್ನು ನಡೆಸಲು ನೇಮಿಸಿಕೊಳ್ಳುತ್ತಿದ್ದ ಎಂದು ಹೇಳಲಾದ ವ್ಯಕ್ತಿಯನ್ನು ಭೇಟಿ ಮಾಡುವ ಉದ್ದೇಶಕ್ಕಾಗಿ ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಿದ್ದ. ಇಬ್ಬರಿಗೆ 5,000 $(ಯುಎಸ್ ಡಾಲರ್) ಮುಂಗಡ ಹಣವನ್ನೂ ಪಾವತಿಸಿ, ವಾಸ್ತವವಾಗಿ ರಹಸ್ಯ ಕಾನೂನು ಜಾರಿ ಅಧಿಕಾರಿಗಳು ಎಂದು ಹೇಳಿಕೊಂಡಿದ್ದರು.
ಯುಎಸ್ ನಿಂದ ಪಲಾಯನ ಗೈಯಲು ಯೋಜಿಸುತ್ತಿದ್ದ ವೇಳೆಯಲ್ಲೇ ಕಳೆದ ತಿಂಗಳು ಬಂಧಿಸಲಾಗಿದೆ. ಪಾಕಿಸ್ಥಾನಕ್ಕೆ ಮರಳುವ ಮೊದಲು ಹಿಂದಿರುಗಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಗುರಿಗಳ ಹೆಸರುಗಳನ್ನು ಒಳಗೊಂಡಂತೆ ಹೆಚ್ಚಿನ ಸೂಚನೆಗಳನ್ನು ನೀಡುವುದಾಗಿ ಹಂತಕರಿಗೆ ತಿಳಿಸಿದ್ದ.
ದೋಷಾರೋಪಣೆಯು ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಉಲ್ಲೇಖಿಸದಿದ್ದರೂ, CBS ಉಲ್ಲೇಖಿಸಿದ ಮೂಲಗಳು ರಿಪಬ್ಲಿಕನ್ ಅಭ್ಯರ್ಥಿಯು ಉದ್ದೇಶಿತ ಗುರಿಗಳಲ್ಲಿ ಒಂದಾಗಿದ್ದರು ಎಂದು ಹೇಳಿದೆ.
ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂಬಾತ ಟ್ರಂಪ್ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸಿದ ಒಂದು ತಿಂಗಳ ನಂತರ ಈ ವಿಚಾರ ಬಹಿರಂಗವಾಗಿದ್ದು ಆದರೆ, ನ್ಯಾಯಾಂಗ ಇಲಾಖೆಯ ದೋಷಾರೋಪ ಪಟ್ಟಿಯಲ್ಲಿ ಜುಲೈ 13ರ ಹತ್ಯೆ ಯತ್ನಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.