Advertisement

ಅಮೆರಿಕಾ ಮೂಲದ ನೋವಾವ್ಯಾಕ್ಸ್ ಲಸಿಕೆ ಕೋವಿಡ್ ನ ಎಲ್ಲಾ ರೂಪಾಂತರಿಗಳ ವಿರುದ್ಧ ಪರಿಣಾಮಕಾರಿ..!

08:32 PM Jun 14, 2021 | Team Udayavani |

ವಾಷಿಂಗ್ಟನ್ : ಅಮೆರಿಕಾ ಮೂಲದ ಆ್ಯಂಟಿ ಕೋವಿಡ್ ಲಸಿಕೆ ನೋವಾವ್ಯಾಕ್ಸ್ ಲಸಿಕೆ ಕೋವಿಡ್ ಸೋಂಕಿನ ಎಲ್ಲಾ ರೂಪಾಂತರಿ ಸೋಂಕಿನ ವಿರುದ್ಧ ಪರಿಣಾಮಕಾರಿ ಎಂದು ಪ್ರಾಯೋಗಿಕ ಅಧ್ಯಯನ ವರದಿ ತಿಳಿಸಿದೆ.

Advertisement

ಅಮೆರಿಕಾ ಹಾಗೂ ಮೆಕ್ಸಿಕೋದಲ್ಲಿ ಸುಮಾರು 30,000 ಮಂದಿಗೆ ಈ ಲಸಿಕೆಯನ್ನು ಪ್ರಾಯೋಗಿಕವಾಗಿ ನೀಡಲಾಗಿತ್ತು. ಅದರ ಅನ್ವಯ ಲಸಿಕೆ ಕೋವಿಡ್ ಸೋಂಕಿನ ರೂಪಾಂತರಿಗಳ ವಿರುದ್ಧ ಪರಿಣಾಮಕಾರಿ ಎಂದು  ಕಂಪೆನಿ ಹೇಳಿಕೊಂಡಿದೆ. ಇನ್ನು ಕಂಪೆನಿಯ ಮೇರಿಲ್ಯಾಂಡ್ ಪ್ರಧಾನ ಕಚೇರಿಯು 2021 ರ ಮೂರನೇ ತ್ರೈಮಾಸಿಕದೊಳಗೆ ವಿಶ್ವದಾದ್ಯಂತ ಈ ಲಸಿಕೆಯನ್ನು ತುರ್ತು ಪರಿಸ‍್ಥಿತಿಯಲ್ಲಿ ಬಳಲಸಲು ಅನುಮೋದಿಸುವಂತೆ ಔಷಧ ನಿಯಂತ್ರಕರಿಗೆ ಅರ್ಜಿ ಸಲ್ಲಿಸಲು ಉದ್ದೇಶಿಸಿದೆ ಎಂದು ತಿಳಿಸಿದೆ.

ಇದನ್ನೂ ಓದಿ : ಕೋವಿಡ್: ರಾಜ್ಯದಲ್ಲಿಂದು 15409 ಸೋಂಕಿತರು ಗುಣಮುಖ; 6835 ಹೊಸ ಪ್ರಕರಣ ಪತ್ತೆ  

ಈ ತ್ರೈಮಾಸಿಕ ಮುಗಿಯುವುದರೊಳಗೆ ಪ್ರತರಿ ತಿಂಗಳಿಗೆ 100 ಮಿಲಿಯನ್ ಡೋಸ್ ಉತ್ಪಾದನೆ ಮಾಡಲಿದ್ದು, ವರ್ಷದ ಅಂತ್ಯದ ವೇಳೆಗೆ ತಿಂಗಳಿಗೆ 150 ಮಿಲಿಯನ್ ಡೋಸ್ ಲಸಿಕೆ ಉತ್ಪಾದನೆ ಮಾಡಲಿದ್ದೇವೆ ಎಂದು ಕಂಪೆನಿ ಮಾಹಿತಿ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ನೋವಾವ್ಯಾಕ್ಸ್ ಸಂಸ್ಥೆಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಸ್ಟಾನ್ಲಿ ಸಿ. ಎರ್ಕ್, ಕೋವಿಡ್ ಸೋಂಕಿನ ಎಲ್ಲಾ ರೂಪಾಂತರಿಗಳ ವಿರುದ್ಧ ನೋವಾವ್ಯಾಕ್ಸ್ ಶಮಶಕಾರಿ ಲಸಿಕೆಯಾಗಿ ಬರಲಿದೆ. ಜಗತ್ತಿನಾದ್ಯಂತ ಇರುವ ಕೋವಿಡ್ ಸೋಂಕನ್ನು ಹೊಡೆದುರುಳಿಸಲು ನೋವಾವ್ಯಾಕ್ಸ್ ಹೆಜ್ಜೆ ಇಟ್ಟಿದೆ ಎಂದು ಹೇಳಿದ್ದಾರೆ.

Advertisement

ಔಷಧ ನಿಯಂತ್ರಕರ ಎಲ್ಲಾ ರೀತಿಯ ಅನುಮೋದನೆಯನ್ನು ಪಡೆದುಕೊಳ್ಳಲು ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಅತಿ ಶೀಘ್ರದಲ್ಲಿ ವಿಶ್ವದೆಲ್ಲೆಡೆ ಈ ಲಸಿಕೆಯ ಬಳಕೆಯಾಗುವುದನ್ನು ನಾವು ಎದುರುಗಾಣುತ್ತಿದ್ದೇವೆ ಎಂದಿದ್ದಾರೆ.

ವಿಶ‍್ವದ ಶ್ರೀಮಂತ ರಾಷ್ಟ್ರಗಳಲ್ಲಿ ಮಾತ್ರ ಲಸಿಕೆಗಳ ಸೌಲಭ್ಯವಿದೆ. ಕೆಲವ ಬಡ ರಾಷ್ಟ್ರಗಳಲ್ಲಿ ಇನ್ನೂ ಕೂಡ ಲಸಿಕೆ ಕೊರತೆ ಇದೆ. ಹಾಗಾಗಿ ವಿಶ್ವದೆಲ್ಲೆಡೆ ಕೋವಿಡ್ ತುರ್ತು ಪರಿಸ‍್ಥಿಗೆ ಬಳಕೆಯಾಗುವಂತೆ ಅನುಮೋದನೆಗಾಗಿ ಸಂಸ್ಥೆ ಕಾರ್ಯೋನ್ಮುಖವಾಗಿದೆ ಎಂದು ಹೇಳಿದೆ.

ಇನ್ನು, ಈ ಲಸಿಕೆಯ ಸಂಗ್ರಃಣೆಯ ಬಗ್ಗೆಯೂ ಕೂಡ ಮಾಹಿತಿ ಹಂಚಿಕೊಂಡ ಸಂಸ್ಥೆ, ನೋವಾವ್ಯಾಕ್ಸ್ ಲಸಿಕೆಯತನ್ನು “2 ° – 8 ° ಸೆಲ್ಸಿಯಸ್ ತಾಪಮಾನದಲ್ಲಿಯೂ ಇಡಬಹುದಾಗಿದೆಸುಲಭವಾಘಿ ಈ ಲಸಿಕೆಗಳನ್ನು ಸಾಗಿಸಬಹುದು ಎಂದು ತಿಳಿಸಿದೆ.

ನೊವಾವ್ಯಾಕ್ಸ್‌ ನ ಪ್ರೋಟೀನ್ ಆಧಾರಿತ ಕೋವಿಡ್ -19 ಲಸಿಕೆ ಪ್ರಮುಖ ರೂಪಾಂತರಗಳ ವಿರುದ್ಧ ಶೇಕಡಾ 93 ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ನೋವಾವ್ಯಾಕ್ಸ್ ಪ್ರತಿಪಾದಿಸಿಕೊಂಡಿದೆ.

ಇದನ್ನೂ ಓದಿ : ಪ್ರವಾಸಿ ಮಾರ್ಗದರ್ಶಿಗಳಿಗೆ ಕೋವಿಡ್‍ ಪರಿಹಾರವಾಗಿ 5000 ರೂಪಾಯಿ ಘೋಷಣೆ

Advertisement

Udayavani is now on Telegram. Click here to join our channel and stay updated with the latest news.

Next