ಮಯಾಮಿ : ಅಮೆರಿಕದಲ್ಲಿ ಇದೇ ಮೊದಲ ಬಾರಿಗೆಂಬಂತೆ ವಿಜ್ಞಾನಿಗಳು 17 ಅಡಿ ಉದ್ದದ ಹೆಣ್ಣು ಹೆಬ್ಬಾವೊಂದನ್ನು ಸೆರೆ ಹಿಡಿದಿದ್ದಾರೆ.
ಅಮೆರಿಕದ ಫ್ಲೋರಿಡಾದಲ್ಲಿ ಸೆರೆ ಹಿಡಿಯಲಾಗಿರುವ ಈ 17 ಅಡಿ ಉದ್ದ ಹೆಬ್ಬಾವು ಬರೋಬ್ಬರಿ 40 ಪೌಂಡ್ ತೂಗುತ್ತದೆ ಮತ್ತು ಈಗ ಬೆಳೆಯುವ ಹಂತದಲ್ಲಿ 73 ಮೊಟ್ಟೆಗಳನ್ನು ತನ್ನ ಹೊಟ್ಟೆಯಲ್ಲಿ ಹೊಂದಿದೆ.
ದಕ್ಷಿಣ ಫ್ಲೋರಿಡಾದಲ್ಲಿರುವ ಬಿಗ್ ಸೈಪ್ರಸ್ ನ್ಯಾಶನಲ್ ಪ್ರಿಸರ್ವ್ ನಿಂದ ತೆಗೆಯಲಾಗಿರುವ ಈ ವರೆಗಿನ ಅತೀ ಉದ್ದದ ಹೆಬ್ಬಾವು ಇದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಹೆಬ್ಬಾವನ್ನು ಪತ್ತೆ ಹಚ್ಚಿ ಸೆರೆ ಹಿಡಿಯುವಲ್ಲಿ ವಿಜ್ಞಾನಿಗಳು ಹೊಸ ಬಗೆಯ ತಾಂತ್ರಿಕತೆಯನ್ನು ಬಳಸಿಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ವರದಿಗಳು ತಿಳಿಸಿವೆ.
ನ್ಯಾಶನಲ್ ಪ್ರಿಸರ್ವ್ ನಲ್ಲಿನ ಗಂಡು ಹೆಬ್ಬಾವು ಗಳನ್ನು ಪತ್ತೆ ಹಚ್ಚಿ ಅನಂತರ ಮೊಟ್ಟೆ ಇಡುವ ಹಂತದಲ್ಲಿರುವ ಹೆಣ್ಣು ಹೆಬ್ಟಾವುಗಳನ್ನು ಪತ್ತೆ ಹಚ್ಚಿ ಹಿಡಿಯಲು ರೆಡಿಯೋ ಟ್ರಾನ್ಸ್‌ಮೀಟರ್‌ಗಳನ್ನು ವಿಜ್ಞಾನಿಗಳು ಬಳಸುತ್ತಿದ್ದಾರೆ ಎಂದು ಯುಎಸ್‌ಎ ಟುಡೇ ವರದಿ ಮಾಡಿದೆ.