Advertisement
ಭಾರತದಲ್ಲಿನ ಆರು ಮ್ಯೂಚುವಲ್ ಫಂಡ್ ನಿಲ್ಲಿಸಿದ ಪರಿಣಾಮ ಹೂಡಿಕೆದಾರರ 30,800 ಕೋಟಿ ರೂಪಾಯಿ ಹಣ ಲಾಕ್ (ಹಿಂಪಡೆಯಲು ಅಸಾಧ್ಯ) ಆದಂತಾಗಿದೆ. ಮ್ಯೂಚುವಲ್ ಫಂಡ್ ಗಳ ಮಾರಾಟದ ಆಧಾರದ ಮೇಲೆ ಹೂಡಿಕೆದಾರರ ಹಣದ ಮೌಲ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಫ್ರಾಂಕ್ಲಿನ್ ಟೆಂಪಲ್ಟನ್ ಪ್ರಕಟಣೆಯಲ್ಲಿ ತಿಳಿಸಿದೆ.
1)ಫ್ರಾಂಕ್ಲಿನ್ ಇಂಡಿಯಾ ಲೋ ಡ್ಯುರೇಷನ್ ಫಂಡ್
2)ಫ್ರಾಂಕ್ಲಿನ್ ಇಂಡಿಯಾ ಡೈನಾಮಿಕ್ ಆ್ಯಕ್ಯುರಲ್ ಫಂಡ್
3)ಫ್ರಾಂಕ್ಲಿನ್ ಇಂಡಿಯಾ ಕ್ರೆಡಿಟ್ ರಿಸ್ಕ್ ಫಂಡ್
4)ಫ್ರಾಂಕ್ಲಿನ್ ಇಂಡಿಯಾ ಶಾರ್ಟ್ ಟರ್ಮ್ ಇನ್ ಕಮ್ ಪ್ಲ್ಯಾನ್
5)ಫ್ರಾಂಕ್ಲಿನ್ ಇಂಡಿಯಾ ಆಲ್ಟ್ರಾ ಶಾರ್ಟ್ ಬಾಂಡ್ ಫಂಡ್
6)ಫ್ರಾಂಕ್ಲಿನ್ ಇಂಡಿಯಾ ಇನ್ ಕಂ ಅಪಾರ್ಚುನಿಟೀಸ್ ಫಂಡ್ ಈ ಆರು ಯೋಜನೆ ನಿಲ್ಲಿಸಿದ ಪರಿಣಾಮ ಹೂಡಿಕೆದಾರರಿಗೆ ಹೂಡಿಕೆ ಮಾಡಲು ಅವಕಾಶ ಇಲ್ಲದಂತಾಗಿದೆ. ಲಾಕ್ ಡೌನ್ ಬಿಕ್ಕಟ್ಟಿನಿಂದಾಗಿ ಮ್ಯೂಚುವಲ್ ಫಂಡ್ ಮಾರುವ ಮತ್ತು ಕೊಳ್ಳುವ ಸೌಲಭ್ಯ ನಿಲ್ಲಿಸಲಾಗಿದೆ. ಏಪ್ರಿಲ್ 24ರಿಂದ ಮ್ಯೂಚುವಲ್ ಫಂಡ್ ಗಳ ಕರೀದಿ, ಇಕ್ವಿಟಿ ಯೋಜನೆಗಳ ವರ್ಗಾವಣೆಗೆ ಅವಕಾಶ ಇಲ್ಲ ಎಂದು ಫ್ರಾಂಕ್ಲಿನ್ ಟೆಂಪಲ್ಟನ್ ಸ್ಪಷ್ಟಪಡಿಸಿದೆ. ಇದರಿಂದಾಗಿ ಹೂಡಿಕೆದಾರರ ಹಣ ಕೈಸೇರುವ ಅವಕಾಶ ಕೂಡಾ ತಪ್ಪಿ ಹೋದಂತಾಗಿದೆ.