Advertisement

ಚೀನದ ಚಿಪ್‌ ಕಂಪೆನಿಗಳಿಗೆ ಅಮೆರಿಕದ ನಿಷೇಧ

12:54 AM Sep 08, 2022 | Team Udayavani |

ವಾಷಿಂಗ್ಟನ್‌: ತನ್ನ ಹೊಸ “ಚಿಪ್ಸ್‌ ಪ್ರೋಗ್ರಾಂ’ ಅಡಿಯಲ್ಲಿ ಅನುದಾನ ಪಡೆಯುವ ಕಂಪೆನಿಗಳು ಚೀನದಲ್ಲಿ ಹೂಡಿಕೆ ಮಾಡುವುದನ್ನು ಅಮೆರಿಕ ನಿರ್ಬಂಧಿಸಿದೆ.

Advertisement

“ಚಿಪ್ಸ್‌ ಪ್ರೋಗ್ರಾಂ’ನ 50 ಬಿಲಿಯನ್‌ ಡಾಲರ್‌ ನಿಧಿಯು, ಅಮೆರಿಕದಲ್ಲಿ ಸೆಮಿ ಕಂಡಕ್ಟರ್‌ಗಳ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಿದೆ. “ಚಿಪ್ಸ್‌ ಪ್ರೋಗ್ರಾಂ’ ಅಡಿಯಲ್ಲಿ ಅನುದಾನ ಪಡೆಯುವ ಕಂಪೆನಿಗಳು ಚೀನದಲ್ಲಿ ಹೂಡಿಕೆ ಮಾಡಲು, ಅಲ್ಲಿ ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು, ಬೇರೆ ದೇಶಗಳಿಗೆ ತಂತ್ರಜ್ಞಾನ ಕಳುಹಿಸಲು ನಿಧಿ ಬಳಸಲು ಬಿಡುವುದಿಲ್ಲ.

ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ರಾಜಿ ಇಲ್ಲ. ನಿಧಿಯನ್ನು ಸ್ಟಾಕ್‌ ಮರು ಖರೀದಿಗಾಗಿ ಬಳಸುವಂತಿಲ್ಲ. ಇದನ್ನು ಖಾಸಗಿ ಬಂಡವಾಳವಾಗಿ ಬದಲಿಸುವಂತಿಲ್ಲ. ಅಲ್ಲದೆ, ಕಂಪೆನಿಗಳು ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಲು ಪೂರ್ಣಗೊಳಿ ಸಲು ವಿಫ‌ಲವಾದರೆ ನಿಧಿಯನ್ನು ತಡೆಹಿಡಿ ಯುವ ಅಧಿಕಾರವನ್ನು ವಾಣಿಜ್ಯ ಸಚಿವಾ ಲಯ ಹೊಂದಿದೆ ಎಂದಿದ್ದಾರೆ ಅಮೆರಿಕದ ವಾಣಿಜ್ಯ ಸಚಿವೆ ಗಿನಾ ರೈಮಂಡೆ.

 

Advertisement

Udayavani is now on Telegram. Click here to join our channel and stay updated with the latest news.

Next