ನವದೆಹಲಿ:ಲಸಿಕೆ ಉತ್ಪಾದನೆಯ ಉಪಕರಣಗಳ ರಫ್ತಿನ ಮೇಲೆ ಹೇರಿದ ನಿಷೇಧವನ್ನು ಅಮೆರಿಕ ತೆಗೆದುಹಾಕಬೇಕೆಂದು ಒತ್ತಾಯಿಸಿರುವ ಸಿಪಿಐ(ಎಂ) ಈ ಉಪಕರಣಗಳ ಕೊರತೆಯಿಂದಾಗಿ ಭಾರತದಲ್ಲಿ ಲಸಿಕೆ ಉತ್ಪಾದಿಸಲು ಅಡ್ಡಿ ಉಂಟಾಗುತ್ತಿದೆ ಎಂದು ಆರೋಪಿಸಿದೆ.
ಇದನ್ನೂ ಓದಿ:ನಾಯಿಗೆ ಮಾಸ್ಕ್ : ನಾನು ಸತ್ತರೂ ನನ್ನ ಮಗನಿಗೆ ತೊಂದರೆ ಆಗಬಾರದು ಎಂದ ವ್ಯಕ್ತಿ..!
ಈ ಬಗ್ಗೆ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾದ ಪೊಲಿಟ್ ಬ್ಯೂರೋ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಕೋವಿಡ್ ಉಪಕರಣಗಳ ರಫ್ತಿನ ಮೇಲೆ ನಿಷೇಧ ಹೇರಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನೇತೃತ್ವದ ಸರ್ಕಾರದ ದ್ವಂದ್ವ ನಿಲುವು ಇದಾಗಿದೆ ಎಂದು ಹೇಳಿದೆ.
ಲಸಿಕೆ ತಯಾರಿಕೆಗೆ ಅಗತ್ಯವಿರುವ ಉಪಕರಣಗಳ ಕೊರತೆಯಿಂದಾಗಿಯೇ ಭಾರತದಲ್ಲಿ ಲಸಿಕೆ ಉತ್ಪಾದನೆಯ ಕೊರತೆ ಎದುರಿಸಲು ಕಾರಣವಾಗಿದೆ. ಲಸಿಕೆ ಉತ್ಪಾದನೆಗೆ ಫಿಲ್ಟರ್ಸ್ಸ್, ಸೊಲ್ಯೂಷನ್ಸ್ ಮತ್ತು ಪ್ಲಾಸ್ಟಿಕ್ ಬ್ಯಾಗ್ ಗಳ ಅಗತ್ಯವಿದೆ. ಆದರೆ ಅಮೆರಿಕ ರಕ್ಷಣಾ ಉತ್ಪಾದನಾ ಕಾಯ್ದೆಯಡಿ ಲಸಿಕೆ ಉಪಕರಣಗಳ ರಫ್ತಿಗೆ ಅಮೆರಿಕ ಸರ್ಕಾರ ನಿಷೇಧ ಹೇರಿವುದಾಗಿ ಸಿಪಿಐಎಂ ಆರೋಪಿಸಿದೆ.
ಲಸಿಕೆ ಉಪಕರಣಗಳ ಕೊರತೆಯಿಂದ ಲಸಿಕೆ ಉತ್ಪಾದನೆಗೆ ತೊಂದರೆಯಾಗುತ್ತಿದ್ದು, ರಫ್ತು ನಿಷೇಧ ಸಡಿಲಿಕೆ ಅಥವಾ ವಿನಾಯ್ತಿ ನೀಡುವಂತೆ ಭಾರತದ ಅಧಿಕಾರಿಗಳು ಮನವಿ ಮಾಡಿಕೊಂಡರು, ಅಮೆರಿಕ ಯಾವುದೇ ರಿಯಾಯ್ತಿ ನೀಡಿಲ್ಲ ಎಂದು ಸಿಪಿಐಎಂ ದೂರಿದೆ.
ಭಾರತದಲ್ಲಿ ಅತೀ ದೊಡ್ಡ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸುತ್ತಿರುವ ಸೇರಂ ಸಂಸ್ಥೆ, ಈ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದಿತ್ತು ಎಂದು ವರದಿ ವಿವರಿಸಿದೆ.