Advertisement

ಪಾಕ್‌ಗೆ ಅಮೆರಿಕ ಚಾಟಿ

09:58 AM Sep 29, 2019 | Team Udayavani |

ವಾಷಿಂಗ್ಟನ್‌: ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾವಿಸಿ ಸೋಲುಂಡಿರುವ ಪಾಕಿಸ್ಥಾನಕ್ಕೆ ಅಮೆರಿಕ ಕೂಡ ಚಾಟಿ ಬೀಸಿದೆ. ಭಾರತ ಮತ್ತು ಪಾಕಿಸ್ಥಾನದ ಸಂಬಂಧ ಸುಧಾರಣೆಯು ಉಗ್ರವಾದದ ವಿರುದ್ಧ ಪಾಕಿಸ್ಥಾನ ಕೈಗೊಳ್ಳುವ ಕ್ರಮವನ್ನು ಆಧರಿಸಿರುತ್ತದೆ ಎಂದು ವಿದೇಶಾಂಗ ಸಚಿವಾಲಯದ ದಕ್ಷಿಣ ಏಷ್ಯಾ ವಿಭಾಗದ ಅಧಿಕಾರಿ ಅಲೈಸ್‌ ವೆಲ್ಸ್‌ ಹೇಳಿದ್ದಾರೆ. ಅಲ್ಲದೆ, ಪಾಕಿಸ್ಥಾನವು ಭಾರತದಲ್ಲಿನ ಮುಸ್ಲಿಮರ ಸ್ಥಿತಿಗತಿಯ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸುತ್ತದೆ. ಆದರೆ ಅದೇ ಪ್ರಮಾಣದಲ್ಲಿ, ಚೀನದಲ್ಲಿನ ಮುಸ್ಲಿಮರ ಸ್ಥಿತಿಗತಿಯ ಬಗ್ಗೆ ಸೊಲ್ಲೆತ್ತುವುದಿಲ್ಲ ಎಂದು ಹೇಳುವ ಮೂಲಕ ಪಾಕಿಸ್ಥಾನದ ದ್ವಂದ್ವ ನೀತಿಯನ್ನು ಬಹಿರಂಗಗೊಳಿಸಿದ್ದಾರೆ.

Advertisement

ಸದ್ಯ ಕಸ್ಟಡಿಯಲ್ಲಿರುವ ಉಗ್ರ ಹಫೀಜ್‌ ಸಯೀದ್‌ ಅಥವಾ ಜೈಶ್‌ ಎ ಮೊಹಮದ್‌ನ ಮುಖ್ಯಸ್ಥ ಮಸೂದ್‌ ಅಜರ್‌ ವಿರುದ್ಧ ಪಾಕಿಸ್ಥಾನ ಕ್ರಮ ತೆಗೆದುಕೊಳ್ಳಬೇಕು. ಇವರ ಮೇಲೆ ಕ್ರಮ ತೆಗೆದುಕೊಳ್ಳುವುದನ್ನು ಆಧರಿಸಿ ಭಾರತ ಮತ್ತು ಪಾಕಿಸ್ಥಾನದ ಮಧ್ಯದ ಸಂಬಂಧ ಮುಂದುವರಿಯುತ್ತದೆ. ಇವರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಪಾಕಿಸ್ಥಾನ ಗಂಭೀರವಾಗಿರಬೇಕು ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಕಾಶ್ಮೀರ ವನ್ನು ಆದಷ್ಟು ಬೇಗ ಸಹಜ ಸ್ಥಿತಿಗೆ ಮರಳಿ ಸಲು ಭಾರತ ಪ್ರಯತ್ನಿಸಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

ಉಗ್ರವಾದ ನಿರ್ಮೂಲನೆಯೇ ಷರತ್ತು: ದಕ್ಷಿಣ ಏಷ್ಯಾದಲ್ಲಿ ಫ‌ಲಪ್ರದ ಸಹಕಾರಕ್ಕೆ ಉಗ್ರವಾದ ನಿರ್ಮೂಲನೆಯೇ ಷರತ್ತು ಎಂಬುದಾಗಿ ಪಾಕಿಸ್ಥಾನವನ್ನು ಪರೋಕ್ಷವಾಗಿ ಉಲ್ಲೇಖೀಸಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ. ಸಾರ್ಕ್‌ ದೇಶಗಳ ಸಚಿವರ ಅನೌಪಚಾರಿಕ ಭೇಟಿಯಲ್ಲಿ ಮಾತ ನಾಡಿದ ಅವರು, ಈ ವಲಯದ ಅಸ್ತಿತ್ವಕ್ಕೂ ಉಗ್ರವಾದವನ್ನು ನಾವು ನಿರ್ಮೂಲನೆ ಮಾಡುವುದು ಅಗತ್ಯವಿದೆ ಎಂದು ಹೇಳಿದರು.

ಸಭೆ ಬಹಿಷ್ಕರಿಸಿದ ಪಾಕ್‌ ಸಚಿವ: ಸಾರ್ಕ್‌ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮಾತನಾಡು ವುದಕ್ಕೂ ಮೊದಲೇ ಪಾಕ್‌ ವಿದೇಶಾಂಗ ಸಚಿವ ಷಾ ಮೆಹಮೂದ್‌ ಖುರೇಶಿ ಸಭೆ ಯಿಂದ ಎದ್ದುಹೋದ ಘಟನೆ ನಡೆದಿದೆ. ಜೈಶಂಕರ್‌ ಅವರೂ ತಮ್ಮ ಮಾತು ಮುಗಿ ಯುತ್ತಿದ್ದಂತೆಯೇ ಸಭೆಯಿಂದ ತೆರಳಿದ್ದಾರೆ. ಜೈಶಂಕರ್‌ ತೆರಳಿದ ನಂತರ ಪುನಃ ಸಭೆಗೆ ಹಾಜರಾಗಿ ಖುರೇಷಿ ಮಾತನಾಡಿದ್ದಾರೆ. ಕಾಶ್ಮೀರದ ಕೊಲೆಗಾರರೊಂದಿಗೆ ಪಾಕಿಸ್ಥಾನ ಮಾತುಕತೆ ನಡೆಸುವುದಿಲ್ಲ ಎಂದು ಈ ಬಗ್ಗೆ ಪಾಕಿಸ್ಥಾನದ ಆಡಳಿತ ಪಕ್ಷ ತೆಹ್ರೀಕ್‌ ಎ ಇನ್ಸಾಫ್ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿದೆ.

ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಸುಧಾರಣೆಗೆ ಕರೆ: ವಿಶ್ವಸಂಸ್ಥೆ ಸೇರಿದಂತೆ ಎಲ್ಲ ಅಂತಾ ರಾಷ್ಟ್ರೀಯ ಸಂಸ್ಥೆಗಳ ಸುಧಾರಣೆಗೆ ಭಾರತ ಸೇರಿದಂತೆ ಇತರ ಸದಸ್ಯ ರಾಷ್ಟ್ರಗಳು ಕರೆ ನೀಡಿವೆ. ವಿಶ್ವಸಂಸ್ಥೆ, ವಿಶ್ವ ವ್ಯಾಪಾರ ಸಂಸ್ಥೆ ಮತ್ತು ಜಿ20 ಒಕ್ಕೂಟಗಳಲ್ಲಿ ಸುಧಾರಣೆ ಅಗತ್ಯವಿದೆ ಎಂದು ಭಾರತ, ಬ್ರೆಜಿಲ್‌ ಮತ್ತು ದಕ್ಷಿಣ ಆಫ್ರಿಕಾ ಕರೆ ನೀಡಿವೆ. ಈ ಸಂಬಂಧ ಮೂರೂ ದೇಶಗಳ ವಿದೇಶಾಂಗ ಸಚಿವರು ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

ಪರ್ಷಿಯನ್‌ ಗಲ್ಫ್ನಲ್ಲಿ ಶಾಂತಿ ಸ್ಥಾಪನೆಗೆ ಬದ್ಧ
ಪರ್ಷಿಯನ್‌ ಗಲ್ಫ್ನಲ್ಲಿ ಶಾಂತಿ ಮತ್ತು ಭದ್ರತೆ ಕಾಯ್ದುಕೊಳ್ಳಲು ಭಾರತ ಸಹಕಾರ ಒದಗಿಸುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಜತೆಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದು, ವಿವಿಧ ವಿಷಯಗಳ ಕುರಿತು ಪರಸ್ಪರ ಸಹಕಾರದ ಚರ್ಚೆ ನಡೆಸಲಾಗಿದೆ. ಅಮೆರಿಕ ಜತೆಗೆ ಇರಾನ್‌ ಸಂಬಂಧ ತೀವ್ರವಾಗಿ ಹಳಸಿರುವ ಹಿನ್ನೆಲೆಯಲ್ಲಿ ಭಾರತದ ಈ ಭರವಸೆ ಅತ್ಯಂತ ಮಹತ್ವದ್ದಾಗಿದೆ.

ವಿಶ್ವಸಂಸ್ಥೆಯಲ್ಲೂ ಪಾಕ್‌ ಅಣ್ವಸ್ತ್ರ ಪ್ರಸ್ತಾವ
ವಿಶ್ವಸಂಸ್ಥೆಯಲ್ಲೂ ಅಣ್ವಸ್ತ್ರದ ವಿಚಾರ ವನ್ನು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಪ್ರಸ್ತಾವಿಸಿದ್ದಾರೆ. ಪ್ರಧಾನಿ ಮೋದಿ ಅನಂತರ ಮಾತನಾಡಿದ ಪಾಕ್‌ ಪ್ರಧಾನಿ, ಅಣ್ವಸ್ತ್ರ ಸಜ್ಜಿತ ಎರಡು ದೇಶ ಗಳು ಎದುರಾದರೆ ಅದು ಭಾರಿ ಪರಿಣಾಮ ಬೀರುತ್ತದೆ. ಇಂತಹ ಸನ್ನಿವೇಶಕ್ಕೆ ವಿಶ್ವಸಂಸ್ಥೆ ಅವಕಾಶ ನೀಡ ಬಾರದು ಎಂದರು.

ಕಾಶ್ಮೀರದಲ್ಲಿ ಕರ್ಫ್ಯೂ ರದ್ದುಗೊಳಿಸಿದ ಅನಂತರ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. 370ನೇ ವಿಧಿ ಯನ್ನು ರದ್ದು ಗೊಳಿಸುವ ನಿರ್ಧಾರ ಕೈಗೊಳ್ಳುವ ಮುನ್ನ ಸೂಕ್ತ ಚಿಂತನೆ ನಡೆಸಿಲ್ಲ ಎಂದು ಖಾನ್‌ ಕಿಡಿಕಾರಿ ಕೊಂಡಿದ್ದಾರೆ. ಇದಲ್ಲದೆ, ಉಗ್ರವಾದ ವನ್ನು ಮುಸ್ಲಿಂ ಧರ್ಮಕ್ಕೆ ತಳಕುಹಾಕ ಲಾಗುತ್ತಿದೆ. ಆದರೆ ಉಗ್ರ ವಾದಕ್ಕೂ ಧರ್ಮಕ್ಕೂ ಸಂಬಂಧವಿಲ್ಲ ಎಂದು ಅವರು ಹೇಳಿದರು.

ಸಮಯ ಮೀರಿ ಮಾತನಾಡಿದ ಖಾನ್‌: ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ವಾಗ್ಧಾಳಿ ನಡೆಸುವುದಕ್ಕೇ ಹೆಚ್ಚಿನ ಸಮಯವನ್ನು ಮೀಸಲಿಟ್ಟ ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌, ತಮಗೆ ನಿಗದಿಸಿದ 15 ನಿಮಿಷಗಳನ್ನೂ ಮೀರಿ ಮಾತನಾಡಿದರು. ಅವರ ಎದುರೇ ಇದ್ದ ಓವರ್‌ಟೈಮ್‌ ಬಜರ್‌ ಬೆಳಗಿದರೂ ನೋಡದೇ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next