Advertisement

ಸೇನೆಗೆ ಅಪಾಚಿ ಬಲ

06:00 AM Jun 14, 2018 | Team Udayavani |

ವಾಷಿಂಗ್ಟನ್‌: ಭಾರತೀಯ ಸೇನೆಯನ್ನು ಆಧುನಿಕಗೊಳಿಸುವ ಮಹಾಯಜ್ಞಕ್ಕೆ ಕೈ ಹಾಕಿರುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಕೈ ಜೋಡಿಸಿರುವ ಅಮೆರಿಕ, ಅತ್ಯಾಧುನಿಕ ಹಾಗೂ ಬಹುಮುಖಿ ಯುದ್ಧ ಕೌಶಲ್ಯಗಳುಳ್ಳ “ಎಎಚ್‌-64ಎಚ್‌ ಅಪಾಚಿ’ ಮಾದರಿಯ ಆರು ಸಮರ ಹೆಲಿಕಾಪ್ಟರ್‌  ಹಾಗೂ ಹೆಲ್‌ ಫೈರ್‌ ಹಾಗೂ ಸ್ಟಿಂಜರ್‌ ಎಂಬ ಎರಡು ಮಾದರಿಯ ಕ್ಷಿಪಣಿಗಳನ್ನು ಭಾರತಕ್ಕೆ ನೀಡಲು ಒಪ್ಪಿದೆ. 

Advertisement

ಒಟ್ಟು 6,200 ಕೋಟಿ ರೂ. ಮೌಲ್ಯದ ಈ ವ್ಯಾವಹಾರಿಕ ಒಪ್ಪಂದ ಪ್ರಸ್ತಾವನೆಯನ್ನು ಅಮೆರಿಕದ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿಯಾದ ಪೆಂಟಗನ್‌, ಅಮೆರಿಕ ಸಂಸತ್ತಿಗೆ ಮಂಡಿಸಿದ್ದು, ಸಂಸತ್ತಿನ ಒಪ್ಪಿಗೆ ದೊರೆತ ನಂತರ ಇದು ಅನುಷ್ಠಾನಕ್ಕೆ ಬರಲಿದೆ. “ಭಾರತಕ್ಕೆ ನೆರೆ ರಾಷ್ಟ್ರಗಳಿಂದ ಇರುವ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಲು ಆ ದೇಶಕ್ಕೆ ಈ ಯುದ್ಧ ಸಾಮಗ್ರಿ ವಿತರಿಸಲಾಗುತ್ತಿದೆ’ ಎಂದು ಪ್ರಸ್ತಾವನೆಯಲ್ಲಿ ಪೆಂಟಗಾನ್‌ ಈ ಒಪ್ಪಂದವನ್ನು ಸಮರ್ಥಿಸಿಕೊಂಡಿದೆ. 

2016ರಲ್ಲಿ ಭಾರತವನ್ನು ಅಮೆರಿಕದ ರಕ್ಷಣಾ ಪಾಲುದಾರ ಎಂದು ಅಮೆರಿಕ ಘೋಷಿಸಿದ ನಂತರ, ಭಾರತಕ್ಕೆ ಆಗಲಿರುವ ಮಹತ್ವದ ಉಪಯೋಗದಲ್ಲಿ ಈ ಹೊಸ ವ್ಯಾಪಾರ ಒಪ್ಪಂದ ಕೂಡ ಒಂದು ಎಂದು ವಿಶ್ಲೇಷಿಸಲಾಗಿದೆ.

ಮಹತ್ವದ ಸಭೆಗೂ ಮುನ್ನವೇ ಡೀಲ್‌?
ಮುಂದಿನ ತಿಂಗಳಷ್ಟೇ ಭಾರತ ಮತ್ತು ಅಮೆರಿಕದ ನಡುವೆ ಮಹತ್ವದ ಮಾತುಕತೆ ನಡೆಯಲಿದೆ. “2 ಪ್ಲಸ್‌ 2′ ಎಂದೇ ಬಣ್ಣಿಸಲ್ಪಟ್ಟಿರುವ ಈ ಮಾತುಕತೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಅವರು, ಅಮೆರಿಕದ ತಮ್ಮ ತತ್ಸಮಾನ ಪದವಿಗಳಲ್ಲಿರುವ ಮೈಕ್‌ ಪೆಂಪೊ ಹಾಗೂ ಜೇಮ್ಸ್‌ ಮ್ಯಾಟಿಸ್‌ ಜತೆ ಮಾತುಕತೆ ನಡೆಸಲಿದ್ದಾರೆ. ಆ ಭೇಟಿಯ ವೇಳೆ, ಶಸ್ತ್ರಾಸ್ತ್ರಗಳ ಡೀಲ್‌ ನಡೆಯಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಅದಕ್ಕೂ ಮುನ್ನವೇ ಅಮೆರಿಕ ಸರ್ಕಾರ, ಭಾರತದ ಪ್ರಸ್ತಾವನೆಗೆ ಒಪ್ಪಿಗೆ ನೀಡಿರುವುದು ವಿಶೇಷವೆನಿಸಿದೆ. 

6,200 ಕೋಟಿ ರೂ. ಅಪಾಚಿ ಹೆಲಿಕಾಪ್ಟರ್‌, ಕ್ಷಿಪಣಿಗಳ ಒಪ್ಪಂದದ ಅಂದಾಜು ಮೊತ್ತ
19,000 ಕೋಟಿ ರೂ. 2013ರಿಂದೀಚೆಗೆ ಅಮೆರಿಕದಿಂದ ಭಾರತ ಖರೀದಿಸಿರುವ ಯುದ್ಧ ಸಾಮಗ್ರಿಗಳ ಮೌಲ್ಯ
10,000  ಕೋಟಿ ರೂ. ಫಾರಿನ್‌ ಮಿಲಿಟರಿ ಸೇಲ್‌ ಒಪ್ಪಂದದಡಿ ಭಾರತ ಖರೀದಿಸಿರುವ ಸಮರ ಪರಿಕರಗಳ ಮೊತ್ತ

Advertisement

ತಯಾರಕರು  
ಲಾಕಿØàಡ್‌ ಮಾರ್ಟಿನ್‌  (ಅಮೆರಿಕ), ಜನರಲ್‌ ಎಲೆಕ್ಟ್ರಿಕ್‌ ರೇಥೆಯಾನ್‌ 

ಏನೇನು ಸಿಗಲಿದೆ?
ಎಎಚ್‌-64 ಅಪಾಚಿ ಹೆಲಿಕಾಪ್ಟರ್‌
ಹೆಲ್‌ ಫೈರ್‌ ಲಾಂಗ್‌ ಬೋ ಕ್ಷಿಪಣಿ
ಸ್ಟಿಂಗರ್‌ ಬ್ಲಾಕ್‌ ಐ-92ಎಚ್‌ ಕ್ಷಿಪಣಿ
ನೈಟ್‌ ವಿಷನ್‌ ಸೆನ್ಸರ್‌ಗಳು
ಇನರ್ಷಿಯಲ್‌ ನೇವಿಗೇಷನ್‌ ಯಂತ್ರೋಪಕರಣ 

Advertisement

Udayavani is now on Telegram. Click here to join our channel and stay updated with the latest news.

Next