Advertisement

ಭಾರತಕ್ಕೆ ಸೀಹಾಕ್‌ ಕಾಪ್ಟರ್‌ ಮಾರಾಟ: ಅಮೆರಿಕ ಅನುಮತಿ

11:48 PM Apr 03, 2019 | Team Udayavani |

ವಾಷಿಂಗ್ಟನ್‌: ಭಾರತದ ನೌಕಾಪಡೆಗೆ ಇನ್ನಷ್ಟು ಬಲ ತುಂಬುವ ಮಹತ್ವದ ನಿರ್ಧಾರದಲ್ಲಿ ಎಂಎಚ್‌-60ಆರ್‌ ಸೀ ಹಾಕ್‌ ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ 18,200 ಕೋಟಿ ರೂ. ಮೊತ್ತಕ್ಕೆ ನೀಡಲು ಅಮೆರಿಕ ಒಪ್ಪಿಗೆ ನೀಡಿದೆ. ಹಿಂದೂ ಮಹಾಸಾಗರದಲ್ಲಿ ಚೀನದ ಪ್ರಭಾವ ತಡೆಯುವ ನಿಟ್ಟಿನಲ್ಲಿ ಈ ಒಪ್ಪಂದ ಮಹತ್ವದ್ದಾಗಿರಲಿದೆ.

Advertisement

24 ಸೀಹಾಕ್‌ ಕಾಪ್ಟರ್‌ಗಳು ಭಾರತಕ್ಕೆ ಲಭ್ಯವಾಗಲಿದ್ದು, ಇವು ಯುದ್ಧ ನೌಕೆಗಳಿಂದ ಕಾರ್ಯನಿರ್ವಹಣೆ ಮಾಡಲಿವೆ. ಸದ್ಯ ಸೀಹಾಕ್‌ ಬದಲಿಗೆ ಭಾರತದ ನೌಕಾಪಡೆ ಹಳೆಯ ಕಾಲದ ಸೀ ಕಿಂಗ್‌ ಕಾಪ್ಟರ್‌ ಬಳಸುತ್ತಿದೆ. ಸೀಹಾಕ್‌ ಕಾಪ್ಟರ್‌ಗಳನ್ನು ವಿಶ್ವದಲ್ಲೇ ಅತ್ಯಂತ ಸುಧಾರಿತ ಎಂದು ಪರಿಗಣಿಸಲಾಗಿದೆ. ಯುದ್ಧ ಅಥವಾ ಸಂಘರ್ಷದ ವೇಳೆ ಶತ್ರುಪಡೆಗಳ ಸಬ್‌ಮರೀನ್‌, ಹಡಗುಗಳ ಮೇಲೂ ದಾಳಿ ಮಾಡಬಹುದಾದ ಸಾಮರ್ಥ್ಯವನ್ನು ಇದು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next