ತೈಪೆ: ದ್ವೀಪರಾಷ್ಟ್ರವಾಗಿರುವ ತೈವಾನ್‌ನೊಂದಿಗೆ ವ್ಯಾಪಾರ ಒಪ್ಪಂದಗಳ ಸಭೆಯನ್ನು ಮಾಡುವುದಾಗಿ ಅಮೆರಿಕ ಗುರುವಾರ ಘೋಷಿಸಿದೆ.
ತೈವಾನ್ ವಿಚಾರಕ್ಕೆ ಅಮೆರಿಕ ಮೂಗು ತೂರಿಸಿರುವುದನ್ನು ಚೀನಾ ಬಲವಾಗಿ ಖಂಡಿಸಿರುವ ನಡುವೆಯೇ ಅಮೆರಿಕ ಒಪ್ಪಂದಗಳನ್ನು ಮಾಡಿಕೊಳ್ಳುವುದಾಗಿ ಹೇಳಿದೆ.
ವ್ಯಾಪಾರ ನಿರ್ಬಂಧ ತೆಗೆದುಹಾಕುವುದು, ಕೃಷಿ, ಡಿಜಿಟಲ್ ವಲಯ ಸೇರಿ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಹೇಳಲಾಗಿದೆ. ಇದಕ್ಕೆ ಪ್ರತಿಯಾಗಿ ಚೀನಾ, “ಒಂದು ವೇಳೆ ಚೀನಾದ ಸಾರ್ವಭೌಮತೆಗೆ ತೊಂದರೆ ಬರುವುದಾದರೆ ನಾವು ಕಠಿಣ ಕ್ರಮಕ್ಕೆ ಸಿದ್ಧರಿದ್ದೇವೆ’ ಎಂದು ಖಡಕ್ ಎಚ್ಚರಿಕೆ ಕೊಟ್ಟಿದೆ.
“ತೈವಾನ್‌ಗೆ ವಿದೇಶಿ ಸಂಬಂಧಗಳನ್ನು ಇಟ್ಟುಕೊಳ್ಳುವುದಕ್ಕೆ ಹಕ್ಕಿಲ್ಲ. ಅಮೆರಿಕವು ಚೀನಾದ ಆಂತರಿಕ ವಿಷಯಗಳನ್ನು ಗೌರವಿಸಿ, ದೂರವಿರಬೇಕು’ ಎಂದು ಚೀನಾದ ವ್ಯವಹಾರಗಳ ಸಚಿವಾಲಯ ಹೇಳಿದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯವೇ ತೈವಾನ್, ಚೀನಾದ ಸಮರಾಭ್ಯಾಸಕ್ಕೆ ಉತ್ತರ ಎನ್ನುವಂತೆ ಗುರುವಾರ ಹುವಾಲೈನ್ ವಾಯು ನೆಲೆಯಲ್ಲಿ ಸಮರಾಭ್ಯಾಸ ನಡೆಸಿದೆ.