Advertisement

ಉರ್ವಸ್ಟೋರ್‌-ಚಿಲಿಂಬಿ: ವಿದ್ಯುತ್‌ ಕಂಬ ರಸ್ತೆಯ ಬದಿಗೆ ಸರಿಸಿ

10:05 AM Apr 29, 2018 | |

ಮಹಾನಗರ: ಉರ್ವಸ್ಟೋರ್‌-ಚಿಲಿಂಬಿ ರಸ್ತೆಯ ಎಡಭಾಗದಲ್ಲಿ, ವಾಹನಗಳ ನಿಲುಗಡೆಗೆ ಮೀಸಲಿಟ್ಟಿರುವ ರಸ್ತೆಯ ಜಾಗದಲ್ಲಿ ಕೆಲವು ಕಡೆ ವಿದ್ಯುತ್‌ ಕಂಬಗಳಿದೆ. ಅದಕ್ಕೆ ತಾಗಿಕೊಂಡೇ ಹಂಪ್‌ ಸೇರಿದಂತೆ ಇನ್ನಿತರ ಸೂಚನ ಫಲಕವನ್ನು ಇರಿಸಿರುವುದು ಅಪಾಯವನ್ನು ಆಹ್ವಾನಿಸಿದಂತಿದೆ.

Advertisement

ಬಹಳ ಸಂಖ್ಯೆಯಲ್ಲಿ ಬಸ್‌ಗಳು ಮತ್ತು ದೊಡ್ಡ ವಾಹನಗಳು ಆ ರಸ್ತೆಯಲ್ಲಿ ಸಾಗುವುದರಿಂದ ರಸ್ತೆಯಿಂದ ಸ್ವಲ್ಪ ಎಡಗಡೆಗೆ ಬಂದರೆ ಫಲಕಕ್ಕೆ ಮತ್ತು ಅದರ ಕೆಳಗೆ ಅಳವಡಿಸಿದಂತಹ ಕಬ್ಬಿಣದ ರಾಡ್‌ ಗೆ ತಾಗುವ ಸಾಧ್ಯತೆಯಿದ್ದು, ಇದರಿಂದಾಗಿ ವಾಹನಗಳಿಗೆ ಮತ್ತು ನಾಗರಿಕರಿಗೆ ತೊಂದರೆಯಾಗಬಹುದು.

ಆದುದರಿಂದ ವಿದ್ಯುತ್‌ ದೀಪದ ಕಂಬಗಳನ್ನು ರಸ್ತೆಯ ಬದಿಗೆ ಸರಿಸು ವುದರೊಂದಿಗೆ ಫಲಕವನ್ನು ಚಾಲಕರಿಗೆ ಸರಿಯಾಗಿ ಕಾಣುವಂತೆ ಕಂಬದ ಸಮೀ ಪವೇ ಅಳವಡಿಸಿದರೆ ವಾಹನ, ನಾಗರಿಕರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ.

ಒಂದು ವೇಳೆ ಕಂಬಗಳನ್ನು ಈಗಿರುವ ಜಾಗದಿಂದ ಸರಿಸಲು ಸಾಧ್ಯವಿಲ್ಲವಾದರೆ ಕಂಬದ ಸುತ್ತಲೂ ತಡೆ ಬೇಲಿಯನ್ನು ನಿರ್ಮಿಸಬೇಕು. ಸೂಚನ ಫಲಕ ಗಳನ್ನು ರಸ್ತೆ ಬದಿಯಿಂದ ಫ‌ುಟ್‌ಪಾತ್‌ ಬದಿಗೆ ಸ್ಥಳಾಂತರಿಸಿದರೆ ಅಪಾಯ ಕಡಿಮೆ ಯಾಗಬಹುದು. ಸಂಬಂಧಪಟ್ಟಂತಹ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತೆ ಸ್ಥಳಿಯರಾದ ವಿಶ್ವನಾಥ್‌ ಕೋಟೆಕಾರ್‌ ಅವರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next