ಮುಂಬಯಿ: ಬಹುಭಾಷಾ ನಟಿ, ಹಾಟ್ ಬೆಡಗಿ ಊರ್ವಶಿ ರೌಟೆಲಾ (Urvashi Rautela) ಅವರದ್ದು ಎನ್ನಲಾದ ಖಾಸಗಿ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇತ್ತೀಚೆಗೆ ಊರ್ವಶಿ ಅವರ ಖಾಸಗಿ ವಿಡಿಯೋವೊಂದು ಲೀಕ್ ಆಗಿದೆ ಎನ್ನಲಾಗಿತ್ತು. ಇದೀಗ ನಟಿಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಸ್ನಾನಕ್ಕೆಂದು ಬಾತ್ ರೂಮ್ ಗೆ ಬರುತ್ತಾರೆ. ಕೈಯಲ್ಲಿದ್ದ ಟವೆಲ್ ಅನ್ನು ಹ್ಯಾಂಗರ್‌ಗೆ ನೇತುಹಾಕಿ ತಮ್ಮ ಬಟ್ಟೆ ತೆಗೆಯಲು ಮುಂದಾಗುತ್ತಾರೆ. ಆಗಲೇ ಆ ವಿಡಿಯೋ ಅಲ್ಲಿಗೆ ಮುಕ್ತಾಯವಾಗುತ್ತದೆ.
ಈ ವಿಡಿಯೋವನ್ನು ನಟಿ ಊರ್ವಶಿ ಅವರ ಖಾಸಗಿ ವಿಡಿಯೋವೆಂದು (Private video) ಹಂಚಿಕೊಳ್ಳಲಾಗಿತ್ತು.. ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದನ್ನು ನಟಿ ಊರ್ವಶಿ ಅವರೇ ಪ್ರಚಾರಕ್ಕಾಗಿ ತಾವೇ ಮಾಡಿದ್ದಾರೆ. ಇದೊಂದು ಪಬ್ಲಿಸಿಟಿ ಸ್ಟಂಟ್ ಎಂದು ಕೆಲವರು ವಾದಿಸುತ್ತಿದ್ದರು. ಅಲ್ಲದೆ ಇದು ನಟಿ ಊರ್ವಶಿ ಅವರ ಡೀಪ್ ಫೇಕ್ ವಿಡಿಯೋವೆಂದು ಕೂಡ ಹೇಳಲಾಗಿತ್ತು.
ಇದು ಊರ್ವಶಿ ಅವರ ವೈಯಕ್ತಿಕ ಜೀವನದ ವಿಡಿಯೋವಲ್ಲ, ಇದೊಂದು ಸಿನಿಮಾದ ದೃಶ್ಯ. ʼಘುಸ್ಪೈಥಿಯಾʼ (Ghuspaithiya) ಎನ್ನುವ ಸಿನಿಮಾದ ದೃಶ್ಯವಿದು.
ಈ ಬಗ್ಗೆ ʼಘುಸ್ಪೈಥಿಯಾʼ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದ ವೇಳೆ ಮಾತನಾಡಿದ ನಟಿ, “ಖಂಡಿತ ಇದು ನನ್ನ ವೈಯಕ್ತಿಕ ಜೀವನದ ಕ್ಲಿಪ್ ಅಲ್ಲ. ಇದು ನನ್ನ ಸಿನಿಮಾದ ಒಂದು ಭಾಗವಷ್ಟೇ. ವಿಡಿಯೋ ಕ್ಲಿಪ್ ಲೀಕ್ ಆದ ದಿನ ನಾನು ತುಂಬಾ ಬೇಜಾರ್ ಅಲ್ಲಿದ್ದೆ. ಈ ರೀತಿ ಯಾವ ಹುಡುಗಿಯ ಜೀವನದಲ್ಲೂ ಆಗಬಾರದು” ಎಂದು ನಟಿ ಹೇಳಿದ್ದಾರೆ.
ಈ ಸಿನಿಮಾದಲ್ಲಿ ವಿನೀತ್ ಕುಮಾರ್ ಸಿಂಗ್, ಊರ್ವಶಿ ರೌಟೇಲಾ ಮತ್ತು ಅಕ್ಷಯ್ ಒಬೆರಾಯ್ ನಟಿಸಿದ್ದು, ಆಗಸ್ಟ್ 9 ರಂದು ರಿಲೀಸ್ ಆಗಲಿದೆ.