ಮುಂಬಯಿ : ಕ್ರಿಕೆಟಿಗ ರಿಷಭ್ ಪಂತ್ ವಿಚಾರದಲ್ಲಿ ಟ್ರೋಲ್ ಆಗಿದ್ದ ನಟಿ ಊರ್ವಶಿ ರೌಟೇಲಾ ಟಿ ೨೦ ವಿಶ್ವ ಕಪ್ ಗೂ ಮುನ್ನ ಆಸ್ಟ್ರೇಲಿಯಾಕ್ಕೆ ತೆರಳುವ ಮೂಲಕ ಮತ್ತೆ ಟ್ರೋಲ್ ಆಗಿದ್ದಾರೆ.
ಊರ್ವಶಿ ರೌಟೇಲಾ ಅವರ ನನ್ನ ‘ಲವ್ ಸಿಂಬಲ್’ಅನುಸರಿಸಿ ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದೇನೆ ಎಂಬ ಸಾಮಾಜಿಕ ತಾಣದ ಪೋಸ್ಟ್ ಗೆ ಹಲವಾರು ಮಂದಿ ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದು, ‘ಸದ್ದಿಲ್ಲದೆ ಮನೆಗೆ ಬಾ, ಆ ಬಡಪಾಯಿ(ರಿಷಭ್ ಪಂತ್) ಕ್ರಿಕೆಟ್ ಆಡಲಿ…’ ಎಂದು ಕಮೆಂಟ್ ಮಾಡಿದ್ದಾರೆ. ಒಬ್ಬ ವ್ಯಕ್ತಿ ಹಿಂದಿಯಲ್ಲಿ, “ಇದನ್ನು ನಿಲ್ಲಿಸಿ… ಈ ಶೀರ್ಷಿಕೆಗಳನ್ನು ಹಾಕುವ ಮೂಲಕ ನನ್ನನ್ನು ಅಳುವಂತೆ ಮಾಡುತ್ತೀರಾ?” ಎಂದು ಪ್ರತಿಕ್ರಿಯಿಸಿದ್ದಾನೆ.
ಊರ್ವಶಿ ರೌಟೇಲಾ ಅವರು ‘ಮಿಸ್ಟರ್ ಆರ್‌ಪಿ’ ಎಂದು ಕರೆಯುವ ಒಬ್ಬ ವ್ಯಕ್ತಿ ತನ್ನನ್ನು ಭೇಟಿಯಾಗಲು ಹಲವು ಬಾರಿ ಕರೆಯುತ್ತಿದ್ದರು ಮತ್ತು ಅವರು ಹುಚ್ಚನಂತೆ ಪ್ರೀತಿಸುತ್ತಿದ್ದನೆಂದು ಹೇಳಿಕೊಂಡ ನಂತರ ವಿವಾದ ಪ್ರಾರಂಭವಾಗಿದ್ದು, ಪಂತ್ ನಂತರ ‘ದೀದಿ’ ಎಂದು ಕರೆದು, ಇಂತಹ ಆಧಾರರಹಿತ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸುವಂತೆ ಊರ್ವಶಿ ಅವರಲ್ಲಿ ಕೇಳಿಕೊಂಡಿದ್ದರು.
ಊರ್ವಶಿ ಅವರು ಪಂತ್ ಅವರನ್ನು ‘ಚೋಟು ಭಯ್ಯಾ’ ಎಂದು ಕರೆಯುವ ಮೂಲಕ ಉತ್ತರಿಸಿದ್ದರು. ಊರ್ವಶಿ ದುಬೈನಲ್ಲಿ ನಡೆದ ಏಷ್ಯಾ ಕಪ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು, ಅಂತಿಮವಾಗಿ ಪಂತ್ ಬಳಿ ಕ್ಷಮೆಯಾಚಿಸಿ ವೈರಲ್ ಆಗಿದ್ದಾರೆ.
ಊರ್ವಶಿ ಮತ್ತು ರಿಷಭ್ ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ, ಅವರು ಸಾಮಾಜಿಕ ಮಾಧ್ಯಮದಲ್ಲಿ ಇದೆ ವಿಚಾರಕ್ಕಾಗಿ ಪದೇ ಪದೇ ಭಾರಿ ಸುದ್ದಿಯಾಗುತ್ತಿದ್ದಾರೆ. ಪಂತ್ ಇಶಾ ನೇಗಿ ಅವರೊಂದಿಗೆ ಪ್ರೀತಿಸುತ್ತಿರುವ ವಿಚಾರ ಬಹಿರಂಗವಾಗಿದ್ದು, ಕೆಲವರು ಇಬ್ಬರು ಗೆಳತಿಯರ ಹೀರೋ ಎಂದು ಪ್ರತಿಕ್ರಿಯೆ ನೀಡಿದ್ದಾರೆ.