ಮಂಡ್ಯ: ರಾಜಕೀಯವಾಗಿ ಚರ್ಚೆಯಾಗಿದ್ದ ʼಉರಿಗೌಡ ಮತ್ತು ನಂಜೇಗೌಡʼ ಸಿನಿಮಾ ನಿರ್ಮಾಣದ ವಿಚಾರದಲ್ಲಿ ಸಚಿವ ಮುನಿರತ್ನ ಹಿಂದೆ ಸರಿದಿದ್ದಾರೆ.
ಈ ಬಗ್ಗೆ ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿ ಆದಿಚುಂಚನಗಿರಿಯ ಶಾಖಾ ಮಠದಲ್ಲಿ ಮಾತನಾಡಿರುವ ಅವರು, ಆದಿಚುಂಚನಗಿರಿಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಲಹೆ ಮೇರೆಗೆ ಚಿತ್ರ ಕೈಬಿಟ್ಟಿದ್ದೇನೆ ಎಂದರು.
ಮೇ 14ಕ್ಕೆ ಚಿತ್ರೀಕರಣದ ಮೂಹೂರ್ತ ಮಾಡಬೇಕು. ಬಹಳ ದೊಡ್ಡ ಸಿನಿಮಾ ಮಾಡಬೇಕು ಅಂದುಕೊಂಡಿದ್ದೆ. ಮೈಸೂರು ಸಂಸ್ಥಾನ ಹಾಗೂ ಟಿಪ್ಪು ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಚರ್ಚೆಯಾಗಿತ್ತು. ಕುಮಾರಸ್ವಾಮಿ ಅವರು ಮುನಿರತ್ನನಿಗೆ ಅಶ್ವತ್ಥ್ ನಾರಾಯಣ್ ಸಿನಿಮಾ ಮಾಡೋಕೆ ಹೇಳಿರಬೇಕು ಅಂದರು. ಅಲ್ಲಿಯವರೆಗೆ ನನಗೆ ಆಲೋಚನೆ ಇರಲಿಲ್ಲ. ಉರಿಗೌಡ ನಂಚೇಗೌಡ ವಿಚಾರದಲ್ಲಿ ಒಂದಷ್ಟು ದಾಖಲೆ ಸಿಗುತ್ತಿವೆ. ಒಂದಷ್ಟು ಸಿಗುತ್ತಿಲ್ಲ. ನನಗ ಚಿತ್ರ ಮಾಡಬೇಕು ಅನ್ನಿಸಿತು ಎಂದರು.
ಇದನ್ನೂ ಓದಿ: ರಜಿನಿ ಪುತ್ರಿ ಐಶ್ವರ್ಯಾ ಲಾಕರ್‌ನಿಂದ ಚಿನ್ನಾಭರಣ ಕಳವು: ಕೆಲಸದಾಳು, ಚಾಲಕನ ಮೇಲೆ ಸಂಶಯ
ಸ್ವಾಮೀಜಿ ಅವರ ಜೊತೆ ಚರ್ಚೆ ಮಾಡಿದೆ. ಆಗ ನನಗೆ ಅನ್ನಿಸಿತು. ಯಾರಿಗೂ ಮನಸ್ಸು ನೋಯಿಸಿ ಸಿನಿಮಾ ಮಾಡಬಾರದು. ಸಿನಿಮಾ ಮಾಡಲು ಕಥೆಗಳು ತುಂಬಾ ಸಿಗುತ್ತದೆ. ಸ್ವಾಮೀಜಿ ಅವರಿಗೆ ಹೇಳಿದ್ದೇನೆ. ಯಾರ ಮನಸ್ಸು ನೋಯಿಸುವ ಉದ್ದೇಶ ನನ್ನದಲ್ಲ. ನಾನು ಈ ಸಿನಿಮಾ ಇಲ್ಲಿಯೇ ಕೈ ಬಿಡುತ್ತೇನೆ. ಬಿಜೆಪಿಯವನು ಅಂತಾ ನಾನು ಈ ಸಿನಿಮಾ ಮಾಡಲು ಹೋಗಲ್ಲ. ಶ್ರೀಗಳು ನೈಜತೆ ಇದ್ದರೆ ಅದರ ಬಗ್ಗೆ ಯೋಜನೆ ಮಾಡಿ ಎಂದರು. ಗೊಂದಲ ಇರುವಾಗ ಯಾವುದು ಸೂಕ್ತ ಎಂದು ಕೇಳಿದರು. ಶ್ರೀಗಳ ಮಾತಿನಂತೆ ನಾನು ಸಿನಿಮಾ ಮಾಡಲ್ಲ ಎಂದು ಹೇಳಿದರು.