Advertisement

ಉರಿ : ದಿ ಸರ್ಜಿಕಲ್‌ ಸ್ಟ್ರೈಕ್‌ ಚಿತ್ರದ ನಟ ನವತೇಜ್‌ ಹುಂದಾಲ್‌ ವಿಧಿವಶ

09:05 AM Apr 10, 2019 | Sathish malya |

ಹೊಸದಿಲ್ಲಿ : ಪ್ರಖ್ಯಾತ ನಟ ನವತೇಜ್‌ ಹುಂದಾಲ್‌ ಅವರು ಎ.8ರ ಸೋಮವಾರ ನಿಧನ ಹೊಂದಿದ್ದಾರೆ. ಅವರ ಸಾವಿನ ನಿಖರ ಕಾರಣ ಈಗಿನ್ನೂ ಗೊತ್ತಾಗಿಲ್ಲ ಎಂದು ವರದಿಗಳು ತಿಳಿಸಿವೆ.

Advertisement

ನವತೇಜ್‌ ಹುಂದಾಲ್‌  ಈಚೆಗೆ ನಟಿಸಿದ ಚಿತ್ರ ವಿಕ್ಕೀ ಕೌಶಲ್‌ ನಟನೆಯ “ಉರಿ : ದಿ ಸರ್ಜಿಕಲ್‌ ಸ್ಟ್ರೈಕ್‌’. ಅವರು ಈ ಚಿತ್ರದಲ್ಲಿ ಗೃಹ ಸಚಿವನ ಪಾತ್ರ ನಿರ್ವಹಿಸಿದ್ದರು.

ನವತೇಜ್‌ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ಪುತ್ರಿಯರಲ್ಲಿ ಒಬ್ಬರಾಗಿರುವ ಆವಂತಿಕಾ ಹುಂದಾಲ್‌ ಅವರು ಏಕತಾ ಕಪೂರ್‌ ಅವರ ಜನಪ್ರಿಯ ಟಿವಿ ಶೋ “ಯೇ ಹೈ ಮೊಹಬ್ಬತೇಂ’ ಯಲ್ಲಿ ಮಿಹಿಕಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next