ಮಂಡ್ಯ: ಶ್ರೀರಂಗಪಟ್ಟಣ ಹಾಗೂ ಮಂಡ್ಯ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣ ತಾಲೂಕಿನ ಹೊಸೂರು, ಹಂಗರಹಳ್ಳಿ, ಸಿದ್ದಾಪುರ, ದೊಡ್ಡಪಾಳ್ಯ, ಮುಂಡಗದೊರೆ ಹಾಗೂ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ, ಕೋಡಿಶೆಟ್ಟಿಪುರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿ, ಹಿರಿಯ ಭೂವಿಜ್ಞಾನಿ ಪುಷ್ಪಾ ಅವರಿಗೆ ಮನವಿ ಸಲ್ಲಿಸಿದರು.
ಕೇವಲ ಕಣ್ಣೊರೆಸುವ ತಂತ್ರ: ಅಕ್ರಮ ಗಣಿಗಾರಿಕೆ ಸಂಬಂಧ ಈಗಾಗಲೇ ಸಾಕಷ್ಟು ಬಾರಿ ದೂರು, ಮನವಿ ಸಲ್ಲಿಸಲಾಗಿದೆ. ಆದರೆ, ಇಲಾಖೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳದೆ ಬೇಜವಾಬ್ದಾರಿತನ ತೋರಿದ್ದಾರೆ. ದೂರು ನೀಡಿದರೆ ಕೇವಲ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರ ಎಂದು ಕಿಡಿಕಾರಿದರು.
ಅಧಿಕಾರಿಗೆ ತರಾಟೆ: ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚು ಕಲ್ಲುಕ್ವಾರಿಗಳಲ್ಲಿ ಗಣಿಗಾರಿಕೆ ಹಾಗೂ 230ಕ್ಕೂ ಹೆಚ್ಚು ಜಲ್ಲಿ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ.ಜಿಲ್ಲೆಯ ಬಲಾಡ್ಯ ಬಂಡವಾಳಶಾಹಿಗಳು ದೊಡ್ಡ ದೊಡ್ಡ ರಾಜಕೀಯ ದಣಿಗಳು ಅಕ್ರಮ ಕಲ್ಲುಗಣಿ ಗಾರಿಕೆಯ ಚಟುವಟಿಕೆಗೆ ಪತ್ಯಕ್ಷ ಹಾಗೂ ಪರೋಕ್ಷವಾಗಿ ಗಣಿಗಾರಿಕೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ 65ಕ್ಕೂ ಹೆಚ್ಚು ಜಲ್ಲಿಯಂತ್ರ ಉದ್ಯಮಗಳು ಕಾರ್ಯನಿರ್ವಹಿಸುತ್ತಿದ್ದು, ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ಇಲಾಖೆಯಿಂದ ಬಂದ್ ಮಾಡಿದ್ದರೂ ರಾತ್ರಿ ವೇಳೆ ಎಗ್ಗಿಲ್ಲದೆ ನಡೆಸುತ್ತಿದ್ದಾರೆ. ಆದರೂ ಇದರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಹಿರಿಯ ಭೂವಿಜ್ಞಾನಿ ಪುಷ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ಜಲ್ಲಿಯಂತ್ರ ತೆರೆವುಗೊಳಿಸಿ: ಇನ್ನೊಂದು ವಾರದಲ್ಲಿಅಕ್ರಮ ಕಲ್ಲು ಗಣಿಗಾರಿಕೆ ಚಟುವಟಿಕೆ ಮತ್ತು ಜಲ್ಲಿ ಉದ್ಯಮದ ವಿರುದ್ಧ ಕಾನೂನು ಕ್ರಮ ಜರುಗಿಸಿ, ಚಟುವಟಿಕೆಯನ್ನು ಸ್ಥಗಿತಗೊಳಿಸಿ ಹಾಗೂ ಜಲ್ಲಿಯಂತ್ರಗಳನ್ನು ತೆರೆವುಗೊಳಿಸಬೇಕು. ಇಲ್ಲದಿದ್ದರೆ ಪ್ರಗತಿಪರ ಸಂಘಟನೆಗಳ ಮೂಲಕ ಒಗ್ಗೂಡಿ ಇಲಾಖೆ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ಪ್ರಧಾನಕಾರ್ಯದರ್ಶಿ ಮಂಜೇಶ್ ಗೌಡ, ಇಂಡುವಾಳು ಚಂದ್ರಶೇಖರ್, ಚಂದ್ರ,ತಮ್ಮೇಗೌಡ, ಸಿದ್ದೇಗೌಡ, ತೇಜಸ್, ಜಯಕುಮಾರ್, ರವಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇಲಾಖೆಯಿಂದಕೇವಲ 150 ಗಣಿಗಾರಿಕೆ ಎಂದು ವರದಿ ನೀಡಿದ್ದಾರೆ. ಆದರೆ, ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದರ ಬಗ್ಗೆಕ್ರಮಕೈಗೊಳ್ಳುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಇಲಾಖೆ ಅಧಿಕಾರಿಗಳು ಯಾವುದೇಕ್ರಮಕೈಗೊಂಡಿಲ್ಲ. ಒಂದು ವಾರದೊಳಗೆಕ್ರಮಕೈಗೊಳ್ಳದಿದ್ದರೆಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು.
–ಮಂಜೇಶ್‌ಗೌಡ, ಪ್ರಧಾನಕಾರ್ಯದರ್ಶಿ, ರೈತಸಂಘ
ಅಕ್ರಮ ಗಣಿಗಾರಿಕೆ ವಿರುದ್ಧ ಈಗಾಗಲೇಕ್ರಮಕೈಗೊಳ್ಳಲಾಗಿದೆ.ರಾತ್ರಿ, ಹಗಲು ವೇಳೆಯಲ್ಲಿ ದಾಳಿ ಮಾಡಿಕಲ್ಲು ಗಣಿಗಾರಿಕೆ ಬಳಸುತ್ತಿದ್ದಯಂತ್ರಗಳು, ವಾಹನಗಳನ್ನುವಶಪಡಿಸಿಕೊಂಡು ಸಾಕಷ್ಟು ಮಂದಿವಿರುದ್ಧ ದೂರು ದಾಖಲಿಸಲಾಗಿದೆ. ಅಲ್ಲದೆ, ಗಣಿ ಮಾಲೀಕರಿಗೆ ಲಕ್ಷಾಂತರರೂ. ದಂಡ ಹಾಕಲಾಗಿದ್ದು, ದಂಡ ಪಾವತಿಸುವಂತೆ ಸೂಚಿಸಲಾಗಿದೆ.
–ಪುಷ್ಪಾ, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ