Advertisement

ಯೂರಿಯಾ ನೀಡಲು ಒತ್ತಾಯ

04:09 PM Sep 20, 2020 | Suhan S |

ಮುಳಬಾಗಿಲು: ರೈತರಿಗೆ ಅವಶ್ಯವಿರುವ ಯೂರಿಯಾ ಅಭಾವ ಸೃಷ್ಟಿಯಾಗದಂತೆ ಸಮರ್ಪಕವಾಗಿ ವಿತರಣೆ ಮಾಡುವ ಜೊತೆಗೆ ಯೂರಿಯಾವನ್ನು ಆಂಧ್ರಕ್ಕೆ ಮಾರುವ ಅಂಗಡಿಗಳ ಪರವಾನಗಿ ರದ್ದು ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ನಗರದ ಕೃಷಿ ಇಲಾಖೆ ಎದುರು ಪ್ರತಿಭಟನೆ ನಡೆಸಿ ಕೃಷಿ ಅಧಿಕಾರಿ ಶುಭಾಗೆ ಮನವಿ ಸಲ್ಲಿಸಿದರು.

Advertisement

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ರೈತರಿಗೆ ಅವಶ್ಯವಿರುವ ಗೊಬ್ಬರವನ್ನು ಸಂಬಂಧಪಟ್ಟ ಸರ್ಕಾರಿ ಮತ್ತು ಖಾಸಗಿ ಅಂಗಡಿಗಳ ಮೂಲಕ ಸರಬರಾಜು ಮಾಡುತ್ತಿದ್ದೇವೆ ಎಂಬುದು ಹೇಳಿಕೆಗೆ ಸೀಮಿತವಾಗಿದೆ ಎಂದು ದೂರಿದರು.

ತಾಲೂಕಿನ ಗಡಿ ಭಾಗಗಳ ಅಂಗಡಿಗಳಲ್ಲಿ ಯೂರಿಯಾ ದಾಸ್ತಾನು ಇದ್ದರೂ, ಸ್ಥಳೀಯರಿಗೆ ನೀಡದೆ ಆಂಧ್ರಪ್ರದೇಶದ ಜನಕ್ಕೆ ಹೆಚ್ಚಿನ ಬೆಲೆಗಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ತಾಲೂಕು ಅಧ್ಯಕ್ಷ ಫಾರುಕ್‌ಪಾಷ ಮಾತನಾಡಿ, ಯೂರಿಯಾ ಅಕ್ರಮ ದಾಸ್ತಾನು ಮಾಡಿರುವಖಾಸಗಿ ಅಂಗಡಿಗಳ ವಿರುದ್ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕೃಷಿ ಅಧಿಕಾರಿ ಶುಭಾಗೆ ಮನವಿ ಸಲ್ಲಿಸಿದರು.

ವಿಜಯ ಪಾಲ್‌, ಮೇಲಾಗಾಣಿ ದೇವರಾಜ್‌,ಕಾವೇರಿ ಸುರೇಶ್‌, ಅಣ್ಣಿಹಳ್ಳಿ ನಾಗರಾಜ್‌, ಸುಪ್ರೀಂಚಲ, ಬಂಗಾರಪೇಟೆ ತಾ.ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌, ಈಕಂಬಳ್ಳಿ ಮಂಜುನಾಥ್‌, ಸಾಗರ್‌, ಶಿವು, ನಾರಾ ಯಣ್‌, ಮಂಜುನಾಥ್‌, ಮಂಗಸಂದ್ರ ತಿಮ್ಮಣ್ಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next