ಚಿತ್ರದುರ್ಗ: ಕೋವಿಡ್ 2ನೇ ಅಲೆಯ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ 3 ಸಾವಿರ ರೂ. ಪರಿಹಾರದ ಬದಲು 10 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಸಿಐಟಿಯು ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರು ಮೇ 15 ರಿಂದ ಹೋರಾಟ ನಡೆಸುತ್ತಿದ್ದಾರೆ. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿರುವ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಕೂಡಲೆ ಕೋವಿಡ್ ಎರಡನೆ ಅಲೆಯಪರಿಹಾರವಾಗಿ ತಿಂಗಳಿಗೆ ಹತ್ತು ಸಾವಿರ ರೂ.ಗಳನ್ನುಮೂರು ತಿಂಗಳ ಕಾಲ ನೀಡಬೇಕು. ಕಳೆದ ವರ್ಷಘೋಷಿಸಲಾಗಿರುವ ಕೋವಿಡ್ ಪರಿಹಾರದ ಹಣಐದು ಸಾವಿರ ರೂ. ಇನ್ನು ಒಂದು ಲಕ್ಷ ಕಾರ್ಮಿಕರಿಗೆ ತಲುಪಬೇಕಿದೆ ಎಂದರು.
ಕಾರ್ಮಿಕರ ಮಕ್ಕಳ ಶಿಕ್ಷಣ, ವಿವಾಹ, ವೈದ್ಯಕೀಯ ಚಿಕಿತ್ಸೆ, ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಮೇ 30 ರವರೆಗೆ ಕಾಲಾವಕಾಶ ನಿಗದಿಪಡಿಸಿರುವುದನ್ನು ಮುಂದಿನ ಮೂರು ತಿಂಗಳ ಕಾಲ ವಿಸ್ತರಿಸಬೇಕು ಎಂದು ಕಾರ್ಮಿಕ ಅಧಿಕಾರಿಮೂಲಕ ಕಾರ್ಮಿಕ ಸಚಿವ ಶಿವರಾಂ ಹೆಬ್ಟಾರ್‌ಗೆ ಮನವಿ ಮಾಡಲಾಯಿತು.
ಕೋವಿಡ್ ಎರಡನೇ ಅಲೆಗೆ ಹೆದರಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ಬಹುತೇಕ ಎಲ್ಲಾ ವಲಸೆ ಕಾರ್ಮಿಕರು ರಾಜಧಾನಿ ಬೆಂಗಳೂರು ಮತ್ತಕರ್ನಾಟಕ ಇತರೆ ಭಾಗಗಳಿಂದ ಸ್ವಂತ ಊರುಗಳಿಗೆ ತೆರಳಿದ್ದು, ಇನ್ನು ಯಾರಾದರೂ ಉಳಿದುಕೊಂಡಿದ್ದರೆ ಅಂತಹ ಕಾರ್ಮಿಕ ಕುಟುಂಬಕ್ಕೆ ಉಚಿತ ವಸತಿ,ಊಟ ಮತ್ತು ಊರುಗಳಿಗೆ ತೆರಳಲು ಸಾರಿಗೆ ಸೌಲಭ್ಯ ಕಲ್ಪಿಸಬೇಕು. ಈ ಸಂಬಂಧ ರಾಜ್ಯದ ಬಿಲ್ಡರ್‌ಅಸೋಸಿಯೇಷನ್ ಜತೆ ಮಾತುಕತೆ ನಡೆಸಬೇಕು. ಮೊದಲನೆ ಹಂತದ ಕೋವಿಡ್ ಸಂದರ್ಭದಲ್ಲಿವಿತರಿಸಲಾದ ರೇಷನ್ ಕಿಟ್‌ಗಳು ನಿಜವಾದ ಕಟ್ಟಡ ಮತ್ತು ವಲಸೆ ಕಾರ್ಮಿಕರುಗಳಿಗೆ ತಲುಪಿಲ್ಲದಿರುವ ಬಗ್ಗೆ ಈ ಹಿಂದೆಯೆ ದೂರುಗಳನ್ನು ನೀಡಿದ್ದೇವೆ.
ರೇಷನ್ ಕಿಟ್‌ಗಳು ಕಳಪೆಯಿಂದ ಕೂಡಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ಖರೀದಿಯಲ್ಲಿ ಸಾಕಷ್ಟುಅವ್ಯವಹಾರಗಳು ನಡೆದಿದ್ದು, ಸಂಪೂರ್ಣ ತನಿಖೆಯಾಗಬೇಕು. ಕೇಂದ್ರ ಸರ್ಕಾರದಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯಕಲ್ಯಾಣ ಮಂಡಳಿ ಕಿಟ್‌ಗಳ ರೂಪದಲ್ಲಿ ವಿತರಣೆಮಾಡುವುದನ್ನು ನಿರ್ಬಂಧಿಸಿದ್ದರೂ ಮಂಡಳಿ ಕಿಟ್‌ಗಳ ವಿತರಣೆಗೆ ಟೆಂಡರ್ ಕರೆದಿರುವುದನ್ನುರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಸಹಸಂಚಾಲಕ ಸಿ.ಕೆ.ಗೌಸ್‌ಪೀರ್, ಕಟ್ಟಡ ಕಾರ್ಮಿಕರ ಸಮಿತಿಜಿಲ್ಲಾಧ್ಯಕ್ಷ ಬಿ.ಸಿ.ನಾಗರಾಜಚಾರಿ ಮತ್ತಿತರರು ಇದ್ದರು