Advertisement

ನೀರಾವರಿ ಯೋಜನೆಗಳ ಜಾರಿಗೆ ಆಗ್ರಹ

08:56 PM Sep 26, 2020 | Suhan S |

ಚನ್ನಮ್ಮ ಕಿತ್ತೂರು: ಕಿತ್ತೂರ ಕ್ಷೇತ್ರಕ್ಕೆ ಅವಶ್ಯವಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇವರಿಗೆ ಶಾಸಕ ಮಹಾಂತೇಶ ದೊಡಗೌಡರ ಮನವಿ ಸಲ್ಲಿಸಿದರು.

Advertisement

ಕ್ಷೇತ್ರವು ಹೆಚ್ಚಾಗಿ ಗ್ರಾಮೀಣ ಪ್ರದೇಶವನ್ನು ಒಳಗೊಂಡಿದ್ದು ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುತ್ತಾರೆ. ಈ ಭಾಗದ ರೈತರಿಗೆ ಹೇಳಿಕೊಳ್ಳುವಂತ ಯಾವುದೇ ಸೌಲಭ್ಯವಿಲ್ಲದೇ ನೀರಾವರಿ ಬೆಳೆ ಬೆಳೆಯಲು ಆಗುತ್ತಿಲ್ಲ. ಈ ಭಾಗಕ್ಕೆ ನೀರಾವರಿ ಯೋಜನೆಗಳ ಅತೀ ಅವಶ್ಯಕತೆಯಿರುತ್ತದೆ. ಮಲಪ್ರಭಾ ನದಿಗೆ ಮಹದಾಯಿ ಜೋಡಣೆ ಮಾಡಿ ಕಳಸಾ- ಬಂಡೂರಿ ಯೋಜನೆಗಳನ್ನು ಜಾರಿಗೆ ತರುವ ಸಮಯದಲ್ಲಿ ಮಲಪ್ರಭಾ ನದಿಗೆ ಸೂಕ್ತವಾದ ಸ್ಥಳದಲ್ಲಿ ಬ್ರೀಜ್‌ ಕಂ ಬ್ಯಾರೇಜ ನಿರ್ಮಿಸಿ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಮುಖಾಂತರ ನೀರಾವರಿ ಸೌಲಭ್ಯ ಕಲ್ಪಿಸುವುದು, ತಟ್ಟಿ ಹಳ್ಳಕ್ಕೆ ಅಸೋಗಾ ಹತ್ತಿರ ಡ್ಯಾಂ ನಿರ್ಮಿಸುವದು ಮತ್ತು ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಮುಖಾಂತರ ನೀರು ಒದಗಿಸುವದು, ಕಾಳಿ ನದಿಯ ನೀರು ಭಾಗಶಃ ಬಳಕೆಯಾಗದೇ ಸಮುದ್ರಪಾಲಾಗುತ್ತಿದ್ದು ಈ ನೀರನ್ನು ಸದ್ಬಳಕೆ ಮಾಡಿಕೊಂಡು ಕಿತ್ತೂರ ಹಾಗೂ ಧಾರವಾಡ ಭಾಗಕ್ಕೆ ಕಾಲುವೆ ಮುಖಾಂತರ ಸೌಲಭ್ಯ ಕಲ್ಪಿಸುವದು, ತಿಗಡಿ ಡ್ಯಾಂನಿಂದ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವದು, ಚಚಡಿ ಏತ ನೀರಾವರಿ ಯೋಜನೆ ತ್ವರಿಗತವಾಗಿ ಕೈಗೆತ್ತಿಕೊಂಡು ನೇಸರಗಿ ಹಾಗೂ ಬೆ„ಲಹೊಂಗಲ ಭಾಗಕ್ಕೆ ಅನುಕೂಲ ಕಲ್ಪಿಸುವದು, ಮುಂತಾದ ನೀರಾವರಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next