Advertisement

ಕಲ್ಲು ಗಣಿಗಾರಿಕೆ ಅನುಮತಿ ರದ್ದತಿಗೆ ಆಗ್ರಹ

02:58 PM Mar 10, 2022 | Team Udayavani |

ತುಮಕೂರು: ಕಲ್ಲು ಗಣಿಗಾರಿಕೆಯಿಂದ ನಮ್ಮ ಬದುಕು ಮೂರಾಬಟ್ಟೆಯಾಗಿದೆ. ಕೂಡಲೇ ಕಲ್ಲುಗಣಿಗಾರಿಕೆಗೆ ನೀಡಿರುವ ಅನುಮತಿ ರದ್ದುಪಡಿಸಲುಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ನಗರದಲ್ಲಿಬುಧವಾರ ಕುಣಿಗಲ್‌ ತಾಲೂಕಿನ ಪಿ.ಹೊನ್ನಹಳ್ಳಿಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲೆಯ ಕುಣಿಗಲ್‌ ತಾಲೂಕು ಹುಲಿಯೂರುದುರ್ಗ ಪಿ.ಹೊನ್ನಮಾಚನಹಳ್ಳಿ ಸರ್ವೆ ನಂ 82ರಲ್ಲಿನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಸುತ್ತ ಮುತ್ತಲಿನ ಗ್ರಾಮಗಳ ಜನರ ಬದುಕು ಸಂಕಷ್ಟದಲ್ಲಿದ್ದು,ಜಿಲ್ಲಾಡಳಿತ ಕೂಡಲೇ ಕ್ರಷರ್‌ಗೆ ನೀಡಿರುವ ಅನು ಮತಿಯನ್ನು ರದ್ದುಗೊಳಿಸುವಂತೆ ಪ್ರತಿಭಟನಕಾರರು ಒತ್ತಾಯಿಸಿದರು.

ಆಕ್ರೋಶ: ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದಪಟೇಲ್‌ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿಕ್ರಷರ್‌ ನಡೆಯುತ್ತಿರುವ ಪಿ.ಹೊನ್ನಮಾಚನಹಳ್ಳಿಯ ಸುತ್ತಮುತ್ತಲಿನ ಗ್ರಾಮ ಗಳಾದ ಬೀಸೆಗೌಡನದೊಡ್ಡಿ, ರಾಜಪ್ಪನ ದೊಡ್ಡಿ, ಮಠದದೊಡ್ಡಿ, ಕಾಮಿದೊಡ್ಡಿ, ಕೆಬ್ಬಳ್ಳಿ,ಉಜ್ಜಯಿನಿ, ಹಿತ್ತಲಪುರ, ನಿಡಶಾಲೆ ಹಾಗೂ ಇತರೆಗ್ರಾಮಗಳ ಮಹಿಳೆಯರು ಮತ್ತು ಗ್ರಾಮದ ಹಿರಿಯರು ಗಣಿಗಾಕೆಯಿಂದ ಆಗುತ್ತಿರುವ ತೊಂದರೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘ ಮತ್ತು ಹಸಿರುಸೇನೆಯ ಜಿಲ್ಲಾಧ್ಯಕ್ಷ ಆನಂದಪಟೇಲ್‌ ಮಾತನಾಡಿ, ಕುಣಿಗಲ್‌ ಕ್ಷೇತ್ರದಶಾಸಕರಾಗಿರುವ ಡಾ.ರಂಗನಾಥ್‌ ಮತ್ತು ಇತರರಹೆಸರಿನಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.

ಮನೆಗಳು ಬಿರುಕು: ಕೊಳವೆಬಾವಿ ಕೊರೆಯುವ ಯಂತ್ರದಿಂದ 20-25 ಅಡಿ ಅಳದ ಗುಂಡಿ ತೋಡಿ,ಬ್ಲಾಸ್ಟಿಂಟ್‌ ನಡೆಸುವುದರಿಂದ ಕ್ರಷರ್‌ಗೆ ಕೇವಲ 80-90 ಮೀಟರ್‌ ದೂರದಲ್ಲಿರುವ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಅಲ್ಲದೇ ನೀರಿನಸೆಲೆಗಳು ಚದುರಿ, ಶೇ.80 ರಷ್ಟು ನೀರಾವರಿ ಕೊಳವೆಬಾವಿಗಳಲ್ಲಿ ನೀರಿಲ್ಲದ ಪರಿಸ್ಥಿತಿ ಇದೆ.ಕ್ರಷರ್‌ನಿಂದ ಬರುವ ದೂಳು, ಈ ಭಾಗದಪ್ರಮುಖ ಬೆಳೆಯಾಗಿರುವ ರೇಷ್ಮೆ ಹುಳುಗಳಿಗೆಆಹಾರವಾದ ಹಿಪ್ಪುನೇರಳೆ ಗಿಡದ ಮೇಲಿದ್ದ ಕಲ್ಲಿನಕಣಗಳನ್ನು ತಿಂದು ರೇಷ್ಮೆ ಬೆಳೆ ಕೈ ಹತ್ತದಂತಾಗಿದೆ ಎಂದು ದೂರಿದರು.

Advertisement

ಈ ಭಾಗದ ಸುಮಾರು 10-15 ಹಳ್ಳಿಗಳಿಗೆಇರುವುದು ಒಂದೇ ಕೆರೆ, ಆ ಕೆರೆಗೆ ಹೊಂದಿಕೊಂಡಂತೆಯೇ ಗಣಿಗಾರಿಕೆ ನಡೆಯುತ್ತಿರುವುದರಿಂದದೂಳು ಕೆರೆಗೆ ತುಂಬಿ, ಇದರ ನೀರು ಕುಡಿದ ಸೀಮೆಹಸುಗಳು ಸಾವನ್ನಪ್ಪಿವೆ. ಹೈನುಗಾರಿಕೆಯನ್ನೇ ನಂಬಿಬದುಕುತ್ತಿದ್ದ ನೂರಾರು ಕುಟುಂಬಗಳು ಬೀದಿಪಾಲಾಗಿವೆ. ಈ ಬಗ್ಗೆ ಹಲವಾರು ಬಾರಿ ತಾಲೂಕುಆಡಳಿತಕ್ಕೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಜನರಿಗೆ ಕಲ್ಲುಗಣಿಯಿಂದ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಒತ್ತಾಯಿಸಿ ಮಾ.14 ರಂದುಬೆಳಗ್ಗೆ 11 ಗಂಟೆಗೆ ಸ್ಥಳದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದ್ದು, ಜಿಲ್ಲಾಧಿಕಾರಿಗಳು ಪ್ರತಿಭಟನಾಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕೆಂದು ಆಗ್ರಹಿಸಲು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ತಿಳಿಸಿದರು.

ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪಿ. ಹೊನ್ನಮಾಚನಹಳ್ಳಿ ಸುತ್ತಮುತ್ತಲ ಗ್ರಾಮಗಳಎನ್‌.ಎಂ.ಯೋಗೀಶ್‌, ಜಯಮ್ಮ, ಲೋಕೇಶ್‌, ಹೆಚ್‌.ಎ., ರಾಜು, ಗಂಗಮ್ಮ, ಜಯಲಕ್ಷ್ಮೀ, ಮಂಜಣ್ಣಹಾಗೂ ರೈತ ಸಂಘದ ವಿವಿಧ ಪದಾಧಿಕಾರಿಗಳುಭಾಗವಹಿಸಿದ್ದರು.

ನಮ್ಮ ಸಾವಿಗೆ ಜಿಲ್ಲಾಡಳಿತವೇ ಹೊಣೆ :  ಬೀಸೆಗೌಡನದೊಡ್ಡಿ ಗ್ರಾಮದ ಗೀತಮ್ಮ, ನಾಗಮ್ಮಮಾತನಾಡಿ, ಕಳೆದ ಎರಡು ವರ್ಷಗಳಿಂದಕ್ರಷರ್‌ನಿಂದಾಗುತ್ತಿರುವ ತೊಂದರೆಗಳ ಬಗ್ಗೆಅಧಿಕಾರಿಗಳಿಗೆ ಮನವಿ ನೀಡಿ ಸಾಕಾಗಿದೆ.ಕ್ರಷರ್‌ ದೂಳಿನಿಂದ ನಮ್ಮ ಬದುಕೇ ಹಾಳಾಗಿದೆ.ಕೃಷಿ, ಹೈನುಗಾರಿಕೆ ಕೈಗೆ ಬರುತ್ತಿಲ್ಲ. ಆದ್ದರಿಂದಮಾ.14ರಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆಎಂದರು. ಜಿಲ್ಲಾಡಳಿತ ನಮ್ಮ ಮನವಿಗೆಸ್ಪಂದಿಸದಿದ್ದರೆ, ನಾವೆಲ್ಲರೂ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗುತ್ತೇವೆ. ನಮ್ಮ ಸಾವಿಗೆಗಣಿಗಾರಿಕೆ ಮತ್ತು ಜಿಲ್ಲಾಡಳಿತವೇ ಹೊಣೆ ಎಂದು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next