Advertisement

ಬಿಇಒ ಅಮಾನತಿಗೆ ದಸಂಸ ಹಾಗೂ ಪ್ರಗತಿಪರ ಸಂಘಟನೆಗಳ ಆಗ್ರಹ

05:03 PM Nov 24, 2021 | Team Udayavani |

ಪಿರಿಯಾಪಟ್ಟಣ: ಶಿಕ್ಷಣ ಸಂಸ್ಥೆಗೆ ಮೀಸಲಿದ್ದ ಆಸ್ತಿಯನ್ನು  ಬಿಇಒ ವೈ.ಕೆ.ತಿಮ್ಮೇಗೌಡ  ಖಾಸಗಿ ಸಹಕಾರ ಸಂಘಕ್ಕೆ ಅಕ್ರಮವಾಗಿ ಮಾರಾಟ ಮಾಡುವ ಹುನ್ನರಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ದಸಂಸ ಹಾಗೂ ಪ್ರಗತಿಪರ ಸಂಘಟನೆಯ ಒಕ್ಕೂಟದ ಪದಾಧಿಕಾರಿಗಳು  ಬಿಇಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆಯಲ್ಲಿ ತಾಲ್ಲೂಕು ನಾಯಕರ ಸಂಘದ ಅಧ್ಯಕ್ಷ ಪಿ.ಪಿ.ಪುಟ್ಟಯ್ಯ ಮಾತನಾಡಿ ಪಟ್ಟಣದ ಬಿ.ಎಂ.ರಸ್ತೆಯ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ ಜಾಗವನ್ನು ಬಿಇಒರವರು ಕೆಲವು ಪಟ್ಟಭದ್ರ ಹಿತಾಸಕ್ತಿಗಳೊಡನೆ ಸೇರಿಕೊಂಡು ಖಾಸಗಿ ಸಹಕಾರ ಸಂಘಕ್ಕೆ ಖಾತೆ ಮಾಡಿ ಮಾರಾಟ ಮಾಡುವ ಹುನ್ನಾರ ನಡೆಸಿದ್ದಾರೆ. ಪಟ್ಟಣದ ಸರ್ವೆ ನಂ.107 ರಲ್ಲಿ ವಿದ್ಯಾಸಂಸ್ಥೆಗೆ ಸೇರಿದ 2.17 ಗುಂಟೆ ಜಾಗವಿದೆ. ಇದರಲ್ಲಿ ಶಾಲೆ ಹಾಗೂ ಶಿಕ್ಷಕರ ಸಭಾಂಗಣವಿದೆ ಹೀಗಿದ್ದರೂ ಖಾಸಗಿ ಸಹಕಾರ ಸಂಘಕ್ಕೆ ಅಕ್ರಮವಾಗಿ ಪರಭಾರೆ ನಡೆಸಲು ಹುನ್ನಾರ ನಡೆಸಿ ಸರ್ಕಾರಿ ಜಾಗವನ್ನು ಕಬಳಿಸಲು ಮುಂದಾಗಿದ್ದಾರೆ. ಈ ವಿಷಯವಾಗಿ ಈಗಾಗಲೇ ಜಿಲ್ಲಾಧಿಕಾರಿಗಳು ಬಿಇಒಗೆ ನೋಟೀಷ್ ನೀಡಿದ್ದು,  ಈ ಪ್ರಕರಣವು ಜಿಲ್ಲಾಧಿಕಾರಿಗಳು ಮತ್ತು ಪ್ರಾದೇಶಿಕ ಆಯುಕ್ತರ ಸಮ್ಮುಖದಲ್ಲಿ ವಿಚಾರಣೆ ಹಂತದಲ್ಲಿದೆ ಹೀಗಿದ್ದರೂ ಬಿಇಒ ತಿಮ್ಮೇಗೌಡರು ಪದೇಪದೇ ಜಾಗವನ್ನು ಖಾಸಗಿಯವರಿಗೆ ಖಾತೆ ಮಾಡಿಕೊಡಲು ಪತ್ರ ವ್ಯವಹಾರ ನಡೆಸುತ್ತಿದ್ದಾರೆ ಸರ್ಕಾರಿ ಜಾಗವನ್ನು ಪರಭಾರೆ ಮಾಡುವ ಅಧಿಕಾರವನ್ನು ಇವರಿಗೆ ಕೊಟ್ಟವರು ಯಾರು ಆಗಾದರೆ ನಮ್ಮಲ್ಲೂ ಹತ್ತಾರರು ಸಹಕಾರ ಸಂಘಗಳಿವೆ ನಮಗೂ ಜಾಗವನ್ನು ಹಸ್ತಾರಂತರ ಮಾಡಲಿ ಎಂದು ದೂರಿದರು.

ದಸಂಸ ಮುಖಂಡ ಈರಾಜ್ ಬಹುಜನ್ ಮಾತನಾಡಿ ಪಟ್ಟಣದಲ್ಲಿ ನಿರ್ಮಿಸಲು ಹೊರಟಿರುವ ಗುರುಭವನ ನಿರ್ಮಾಣ ನಿರ್ವಹಣಾ ಸಮಿತಿಯ ಹೆಸರನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಭಾಂಗಣ ಎಂಬುದಾಗಿ ಬೋರ್ಡ್ ಹಾಕುವ ಮೂಲಕ ಶಿಕ್ಷಕರಲ್ಲಿ ವರ್ಗ ಸಂಘರ್ಷವನ್ನು ಉಂಟು ಮಾಡುತ್ತಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಈ ವರೆಗಿನ ಲೆಕ್ಕಪತ್ರವನ್ನು ಕೇಳಿದರೆ ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ. ಅಮಾಯಕ ಶಿಕ್ಷಕರಿಗೆ ವೇತನ ಬಡ್ತಿಯನ್ನು ನೀಡುವುದಾಗಿ ಹೇಳಿ ನಿಯಮ ಬಾಹಿರವಾಗಿ ಬಲವಂತವಾಗಿ ಛಾಪಾ ಕಾಗದವನ್ನು ಪಡೆಯಲು ಸಂಘದ ಕೆಲವು ಪದಾಧಿಕಾರಿಗಳನ್ನು ಮುಂದಿಟ್ಟುಕೊಂಡು ಶಿಕ್ಷಕರಿಂದ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದಾರೆ. ತಮಗಿರುವ ಪರಮಾಧಿಕಾರ ಬಳಸಿಕೊಂಡು ತಮಗೆ ಬೇಕಾದವರನ್ನು ಹಾಗೂ ಯಾರೂ ಹಣ ನೀಡುತ್ತಾರೋ ಅವರನ್ನು ಆಯಾಕಟ್ಟಿನ ಸ್ಥಳಗಳಿಗೆ ನಿಯೋಜನೆ ಮಾಡುತ್ತಿದ್ದಾರೆ ಎಂದರು.

ಮುಖಂಡ ಕೋಗಿಲವಾಡಿ ರಾಮಚಂದ್ರ ಮಾತನಾಡಿ ಪಿರಿಯಾಪಟ್ಟಣ ತಾಲ್ಲೂಕು ಒರತು ಪಡಿಸಿ ಈಗಾಗಲೇ ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಶಿಕ್ಷಕರ ವೇತನ ಬಡ್ತಿ ಮಾಡಲಾಗಿದೆ ಆದರೆ ಪಿರಿಯಾಪಟ್ಟಣದಲ್ಲಿ ಬಿಇಒ ತಿಮ್ಮೇಗೌಡರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರನ್ನು ಮುಂದೆ ಬಿಟ್ಟುಕೊಂಡು ಶಿಕ್ಷಕರಿಂದ ಬಲವಂತವಾಗಿ ಛಾಪ ಕಾಗದ ಪಡೆದು ಶಿಕ್ಷಕರಿಗೆ ಆಮೀಷ ಒಡ್ಡಿ ಅವರಿಂದ ತರವಲ್ಲದ ರೀತಿಯಲ್ಲಿ ನೋಟರಿ ಮುಕಾಂತರ ಛಾಪ ಕಾಗದಕ್ಕೆ ಶಿಕ್ಷಕರ ಕುಟುಂಬಸ್ಥರೆಲ್ಲರ  ಸಹಿಯನ್ನು ಬಲವಂತವಾಗಿ ಪಡೆಯುತ್ತಿದ್ದಾರೆ. ಆದ್ದರಿಂದ ಕಾನೂನು ಬಾಹಿರವಾಗಿ ಸರ್ಕಾರಿ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿರುವ ಬಿಇಒರನ್ನು ಕೂಡಲೇ ಅಮಾನತು ಪಡಿಸಬೇಕು ಇಲ್ಲದಿದ್ದರೆ ಶಿಕ್ಷಣ ಇಲಾಖೆಯ ಉಪ ನಿರ್ದೆಶಕರ ಕಚೇರಿ ಮತ್ತು  ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು.

Advertisement

ಈ ಸಂದರ್ಭದಲ್ಲಿ ಶಿರಸ್ಥೆದಾರ್ ವಿನಯ್ ಕುಮಾರ್ ರವರಿಗೆ ಮನವಿತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಕೀಲ ನಂದಿಪುರ ಲೋಕೇಶ್, ಬೀಮ್ ಆರ್ಮಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಕ್ರಮ್ ಪಾಷ, ಪ್ರಗತಿಪರ ಸಂಘಟನೆಯ ಮುಖಂಡರಾದ ವಾಜೀದ್ ಪಾಷಾ, ಎನ್.ಡಿ.ಬಸವರಾಜು, ತಮ್ಮಡಹಳ್ಳಿ ರವಿ, ಕಲ್ಕೆರೆ ಪ್ರಕಾಶ್, ಆಯಿತನಹಳ್ಳಿ ಶ್ರೀನಿವಾಸ್, ಬೂದಿತಿಟ್ಟು ಗಣೇಶ್, ಆಲನಹಳ್ಳಿ ಶ್ರೀನಿವಾಸ್, ಕಂಪಲಾಪುರ ಅನಿಲ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಪಿರಿಯಾಪಟ್ಟಣದ ಬಿಇಒ ಕಚೇರಿ ಮುಂದೆ ಬಿಇಒ ವೈ.ಕೆ.ತಿಮ್ಮೇಗೌಡರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ದಸಂಸ ಹಾಗೂ ಪ್ರಗತಿಪರ ಸಂಘಟನೆಯ ಒಕ್ಕೂಟದ ಪದಾಧಿಕಾರಿಗಳು  ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next