ದೊಡ್ಡಬಳ್ಳಾಪುರ: ನಗರದ ಬಸವ ಭವನದಿಂದ ಇಸ್ಲಾಂಪುರದವರೆಗೆ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ರಸ್ತೆಯಲ್ಲಿ ಡಾಂಬರು ಹಾಕಿದ ಎರಡೇ ವಾರದಲ್ಲಿ ಮತ್ತೆ ಕಿತ್ತು ಹೋಗಿದ್ದು, ರಸ್ತೆ ಗುಣಮಟ್ಟ ತಜ್ಞರಿಂದ ಪರಿಶೀಲನೆ ನಡೆಸಬೇಕು ಎಂದು ತಾಪಂ ಸದಸ್ಯ ಡಿ.ಸಿ.ಶಶಿಧರ್ ಆಗ್ರಹಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ತಾಪಂ ಅಧ್ಯಕ್ಷೆ ರತ್ನಮ್ಮಜಯರಾಂ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಚರಂಡಿಗಳು ಅವೈಜ್ಞಾನಿಕವಾಗಿದ್ದು ಗುತ್ತಿಗೆದಾರರಿಗೆ ಅಂತಿಮ ಬಿಲ್ ಪಾವತಿ ಮುನ್ನ ಗುಣಮಟ್ಟ ಪರಿಶೀಲನೆ ಮಾಡಬೇಕು ಎಂದರು.
ಸದಸ್ಯ ಸುನಿಲ್ ಕುಮಾರ್, ಚಿಕ್ಕಬಳ್ಳಾಪುರ- ದೊಡ್ಡಬಳ್ಳಾಪುರ ರಸ್ತೆ ಬದಿ ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಒಣಗಿ ನಿಂತಿರುವ ಮರ ಹಾಗೂ ರಸ್ತೆ ಮೇಲೆ ಬಂದಿರುವ ದೊಡ್ಡ ರಂಬೆ ತೆರವುಗೊಳಿಸಬೇಕು ಎಂದರು. ತಾಲೂಕಿನಲ್ಲಿ 78 ಅಂಗನವಾಡಿ ಕಟ್ಟಡಗಳ ದುರಸ್ಥಿ ಹಾಗೂ ವಿದ್ಯುತ್ ಸಂಪರ್ಕ ನೀಡುವ ಸಲುವಾಗಿ ಕಾಮಗಾರಿ ಆರಂಭವಾಗಿ 2018-19ನೇ ಸಾಲಿನಲದಲೇ ಗುತ್ತಿಗೆ ನೀಡಿದ್ದರೂ ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸದಸ್ಯ ಜಿ.ಶಂಕರಪ್ಪ ಒತ್ತಾಯಿಸಿದರು.
ನಗರದ ಅಂಚಿನಲ್ಲೇ ಇರುವ ಪಾಲನಜೋಗಹಳ್ಳಿಯಲ್ಲಿ ಕೊಳವೆ ಬಾವಿ ಕೊರೆಸಬೇಕು ಎಂದು ಸದಸ್ಯ ಹಸನ್‌ಘಟ್ಟ ರವಿ ಮನವಿ ಮಾಡಿದರು. ಅಕ್ಕತಮ್ಮನಹಳ್ಳಿ, ಭೂಚನಹಳ್ಳಿ ಸೇರಿದಂತೆ ಈ ಭಾಗದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಸದಸ್ಯರಾದ