Advertisement

ಪಿಎಸ್‌ಐ ಅಮಾನತಿಗೆ ಆಗ್ರಹ

10:19 AM Jul 12, 2020 | Suhan S |

ಬಂಗಾರಪೇಟೆ: ತಹಶೀಲ್ದಾರ್‌ ಚಂದ್ರಮೌಳೇಶ್ವರ್‌ ಕೊಲೆಗೆ ಪೊಲೀಸರ ವೈಫ‌ಲ್ಯವೇ ಕಾರಣ. ಹೀಗಾಗಿ ಕಾಮಸಮುದ್ರ ಪಿಎಸ್ ಐ  ದಯಾನಂದ್‌ ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ವಿವಿಧ ದಲಿತ ಪರ ಸಂಘಟನೆಗಳು ಹಾಗೂ ಕರವೇ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟಿಸಿದರು.

Advertisement

ಚಿಕ್ಕಕಳವಂಚಿ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಉಂಟಾಗಿದ್ದ ಜಮೀನು ವಿವಾದ ಬಗೆಹರಿಸಲು ಸರ್ವೆ ಮಾಡುತ್ತಿದ್ದಾಗ ಏಕಾಏಕಿ ಆರೋಪಿ ವೆಂಕಟಪತಿ ತಹಶೀಲ್ದಾರ್‌ಗೆ ಚಾಕುನಿಂದ ತಿವಿದು, ಕೊಲೆ ಮಾಡಿರುವುದನ್ನು ನೋಡಿದರೆ ಇದು ಕರ್ನಾಟಕನ ಅಥವಾ ಬಿಹಾರನ ಎಂಬ ಅನುಮಾನ ಮೂಡಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಕಾಮಸಮುದ್ರ ಠಾಣೆ ಪಿಎಸ್ ‌ಐ  ಮೂವರು ಪೇದೆಗಳ ಸಮ್ಮುಖದಲ್ಲಿ ಈ ಘಟನೆ ನಡೆದಿರುವ ಕಾರಣ, ಕೆಜಿಎಫ್ ಎಸ್ಪಿ ಘಟನೆ ಹೊಣೆ ಹೊರಬೇಕು, ಆರೋಪಿ ನಿವೃತ್ತ ವೆಂಕಟಪತಿ ಗಲ್ಲಿಗೇರಿಸಿ, ನಿವೃತ್ತಿ ವೇತನ ಸ್ಥಗಿತಗೊಳಿಸಿ, ಅವರ ಆಸ್ತಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡು, ಮೃತರ ಕುಟುಂಬಕ್ಕೆ ಸಾಮಾಜಿಕ ನ್ಯಾಯಕಲ್ಪಿಸಬೇಕು ಎಂದು ಆಗ್ರಹಿಸಿದರು.

ದಲಿತ ಸಂಘಟನೆಗಳ ಮುಖಂಡ ಹೂವರಸನಹಳ್ಳಿ ರಾಜಪ್ಪ, ಹುಣಸನಹಳ್ಳಿ ವೆಂಕಟೇಶ್‌, ದಲಿತ ಸಮಾಜ ಸೇನೆ ಅಧ್ಯಕ್ಷ ಸೂಲಿಕುಂಟೆ ಆನಂದ್‌, ವಿ.ಯಲ್ಲಪ್ಪ, ಜೀವಿಕ ರಾಮಚಂದ್ರ, ಕರವೇ ತಾಲೂಕು ಅಧ್ಯಕ್ಷ ಕಣಿಂಬೆಲೆ ರಾಮಪ್ರಸಾದ್‌, ನಗರ ಅಧ್ಯಕ್ಷ ಚಲಪತಿ, ಹುಣಸನಹಳ್ಳಿ ರಮೇಶ್‌, ಸಿ.ವೈ.ಚರಣ್‌ಬಾಬು, ಪಿ.ಚಂದ್ರಶೇಖರ್‌, ಎಸ್‌.ಕೆ.ಜಗದೀಶ್‌, ಹಿರೇಕರಪನಹಳ್ಳಿ ರಾಮಪ್ಪ, ಸ್ಟಾಂಪ್‌ ವೆಂಡರ್‌ ಮಂಜುನಾಥ್‌, ಮಾರುತಿ ಪ್ರಸಾದ್‌, ಅಸ್ಗರ್‌ಇತರಿದ್ದರು.

ಕರ್ತವ್ಯನಿರತ ತಾಲೂಕು ದಂಡಾಧಿಕಾರಿಗಳಿಗೆ ಪೊಲೀಸ್‌ ಇಲಾಖೆಯು ರಕ್ಷಣೆ ನೀಡುವುದರಲ್ಲಿ ಎಡವಿದೆ. ಘಟನೆ ತಡೆಯುವಲ್ಲಿ ವಿಫ‌ಲವಾದ ಪೊಲೀಸ್‌ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಇದು ಸರಿಯಲ್ಲ. ಸೂಲಿಕುಂಟೆ ರಮೇಶ್‌, ಕದಸಂಸ, ರಾಜ್ಯ ಸಂಘಟನಾ ಸಂಚಾಲಕ.

Advertisement

Udayavani is now on Telegram. Click here to join our channel and stay updated with the latest news.

Next