Advertisement

ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿನ ದಾಖಲೆಯ ಸಾಧನೆ

12:42 PM Apr 05, 2022 | Team Udayavani |

ಶಿರಸಿ: ಸುದೀರ್ಘ 116 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕದ ಪ್ರತಿಷ್ಠಿತ ಪಟ್ಟಣ ಸಹಕಾರಿ ಬ್ಯಾಂಕ್ ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿಗೆ ಪ್ರಸಕ್ತ ಸಾಲಿನಲ್ಲಿ  ಒಟ್ಟೂ ವ್ಯವಹಾರವನ್ನು 1692 ಕೋಟಿ ರೂ.ಗಳಿಗೆ ವೃದ್ಧಿಸಿ ನೂತನ ದಾಖಲೆಯನ್ನು ನಿರ್ಮಿಸಿದೆ. ಈ ಸಾಲಿನಲ್ಲಿ 11.91 ಕೋಟಿ ರೂ.ನಿರ್ವಹಣಾ ಲಾಭ ಮಾಡಿದೆ. 8.49 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ  ಜಯದೇವ ನಿಲೇಕಣಿ ತಿಳಿಸಿದ್ದಾರೆ.

Advertisement

ಈ ಕುರಿತು ಪ್ರಕಟನೆ ನೀಡಿರುವ, ಬ್ಯಾಂಕಿನ ಒಟ್ಟೂ ವ್ಯವಹಾರವು ಪ್ರಸಕ್ತ ಸಾಲಿನಲ್ಲಿ 1692 ಕೋಟಿ ರೂ. ದಾಟುವುದರೊಂದಿಗೆ ಹೊಸ ದಾಖಲೆಯನ್ನು ನಿರ್ಮಿಸಿದೆ. ಬ್ಯಾಂಕಿನ ಠೇವಣಿಗಳು ಕಳೆದ ವರ್ಷದ 1008 ಕೋಟಿಗಳಿಂದ ಪ್ರಸಕ್ತ ವರ್ಷಾಂತ್ಯಕ್ಕೆ 1064 ಕೋಟಿಗಳಿಗೆ ಹಾಗೂ ಒಟ್ಟೂ ಸಾಲ ಮತ್ತು ಮುಂಗಡಗಳು ಕಳೆದ ವರ್ಷದ 591 ಕೋಟಿಗಳಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 628 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಬ್ಯಾಂಕಿನ ಒಟ್ಟೂ ದುಡಿಯುವ ಬಂಡವಾಳ ಕಳೆದ ವರ್ಷದ 1127 ಕೋಟಿ ರೂ.ಗಳಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 1232 ಕೋಟಿಗಳಿಗೆ ಏರಿಕೆಯಾಗಿದ್ದು, 105 ಕೋಟಿ ರೂ.ಯಷ್ಟು ಹೆಚ್ಚಳವಾಗಿದೆ. ಈ  ಮೂಲಕ ಶೇಕಡಾ 9.32 ರಷ್ಟು ವೃದ್ಧಿ ದಾಖಲಿಸಿದೆ.  ಒಟ್ಟೂ 461 ಕೋಟಿ ಹಣವನ್ನು ರಾಜ್ಯ ಸರಕಾರ, ಕೇಂದ್ರ ಸರಕಾರ ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ ಗುಂತಾಯಿಸುವ ಮೂಲಕ ಬ್ಯಾಂಕಿನ ಆರ್ಥಿಕ ಸ್ಥಿರತೆಯನ್ನು ದೃಢೀಕರಿಸಿದೆ. ಒಟ್ಟೂ 45,000 ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಬೃಹತ್ ಪಟ್ಟಣ ಸಹಕಾರಿ ಬ್ಯಾಂಕು ಈ ವರ್ಷ ತನ್ನ ಶೇರು ಬಂಡವಾಳವನ್ನು ಕಳೆದ ವರ್ಷದ 22.88 ಕೋಟಿಗಳಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 25.71 ಕೋಟಿ ರೂ.ಗಳಿಗೆ ಹೆಚ್ಚಿಸುವುದರ ಮೂಲಕ ಶೇಕಡಾ 12.37 ರಷ್ಟು ವೃದ್ಧಿ ದಾಖಲಿಸಿದೆ ಎಂದು ತಿಳಿಸಿದ್ದಾರೆ.

ಸ್ವಂತ ನಿಧಿಗಳನ್ನು 113.63 ಕೋಟಿಗಳಿಗೆ ವೃದ್ಧಿಸುವುದರೊಂದಿಗೆ ಸ್ವಂತ ಬಂಡವಾಳವನ್ನು 136.34 ಕೋಟಿ ರೂ.ಗಳಿಗೆ ವೃದ್ಧಿಸಿಕೊಂಡಿರುತ್ತದೆ. ಬ್ಯಾಂಕು ನಿಕ್ಕಿ ಅನುತ್ಪಾದಕ ಆಸ್ತಿಗಳ ಪ್ರಮಾಣವನ್ನು ಸತತ ಹನ್ನೊಂದು ವರ್ಷಗಳಿಂದ ಪ್ರತಿಶತ ಸೊನ್ನೆಗೆ ಕಾಯ್ದುಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು‌ ಬಣ್ಣಿಸಿದ್ದಾರೆ.

ಬ್ಯಾಂಕು ಈ ಹೊಸ ಆರ್ಥಿಕ ವರ್ಷದಲ್ಲಿ ಸಾಲ ಮುಂಗಡಗಳ ಬಡ್ಡಿ ದರಗಳನ್ನು ಪರಿಷ್ಕರಿಸಿದ್ದು ಗೃಹ ಸಾಲ ಶೇ. 7.75, ಕಾರು ಸಾಲ  ಶೇ.೮, ವ್ಯವಹಾರ, ಉದ್ದಿಮೆಗಳಿಗೆ ದುಡಿಯುವ ಬಂಡವಾಳಕ್ಕಾಗಿ ಶೇ.9.45 ಸ್ಪರ್ಧಾತ್ಮಕ ದರಗಳಲ್ಲಿ ಸಾಲ ನೀಡುತ್ತಿದ್ದು ಸದಸ್ಯರು ಹಾಗೂ ಗ್ರಾಹಕರು ಈ ಸಾಲ ಯೋಜನೆಗಳ ಲಾಭ ಪಡೆಯಬೇಕು. ಆಧುನಿಕ ಸೌಲಭ್ಯಗಳೂ ಎಲ್ಲ ಶಾಖೆಗಳಿಗೂ ಒದಗಿಸಲಾಗಿದೆ ಎಂದು‌ ಪ್ರಕಟನೆಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಆರತಿ ಶೆಟ್ಟರ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next