Advertisement

ಲೋಕಲ್‌ ಟೆಸ್ಟ್‌ ಶಾಂತಿಯುತ: ಸೆ.3ಕ್ಕೆ ಫ‌ಲಿತಾಂಶ ಪ್ರಕಟ 

06:00 AM Sep 01, 2018 | Team Udayavani |

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ನಡೆದ ಮತದಾನ ಶಾಂತಿಯುತವಾಗಿತ್ತು. ಮಹಾನಗರ ಪಾಲಿಕೆಗಳಿಗೆ ನಡೆದ ಮತದಾನ ಪ್ರಮಾಣ ಶೇ.53.8 ಇದ್ದರೆ, ಉಳಿದ ನಗರ ಸ್ಥಳೀಯ ಸಂಸ್ಥೆಗಳ ಮತ ಪ್ರಮಾಣ ಶೇ. 67.1 ರಷ್ಟು ದಾಖಲಾಗಿದೆ.

Advertisement

ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಮಹಾನಗರ ಪಾಲಿಕೆ ಸೇರಿದಂತೆ 21 ಜಿಲ್ಲೆಗಳ 29 ನಗರಸಭೆಗಳು, 53 ಪುರಸಭೆಗಳು ಹಾಗೂ 20 ಪಟ್ಟಣ ಪಂಚಾಯ್ತಿಗಳಿಗೆ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಶುರುವಾಯಿತು. ಕೆಲವೆಡೆ ಅಡಚಣೆ, ಸಣ್ಣ ಪುಟ್ಟ ಗೊಂದಲ, ಸಮಸ್ಯೆಗಳನ್ನು ಹೊರತುಪಡಿದರೆ ಎಲ್ಲಿಯೂ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ.

ಮತಕೇಂದ್ರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು. ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ನಡೆದ ಮತದಾನ ಶಾಂತಿಯುತವಾಗಿತ್ತು. ಯಾವುದೇ ಲೋಪದೋಷಗಳು ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ.

ಹಾಗಾಗಿ ಯಾವುದೇ ವಾರ್ಡ್‌ಗೂ ಮರು ಮತದಾನ ನಡೆಸುವ ಸಾಧ್ಯತೆ ಇಲ್ಲ. ಹಾಗಿದ್ದರೂ ಲೋಪದೋಷಗಳ ಹಿನ್ನೆಲೆಯಲ್ಲಿ ಯಾವುದಾದರೂ ವಾರ್ಡ್‌ನಲ್ಲಿ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದೆಯೇ ಎಂಬ ಬಗ್ಗೆ ಮಾಹಿತಿ
ಸಂಗ್ರಹಿಸಲಾಗುತ್ತಿದೆ. ಶುಕ್ರವಾರ ಮಧ್ಯರಾತ್ರಿ ವೇಳೆಗೆ ನಿಖರ  ಮಾಹಿತಿ ಸಿಗಲಿದೆ. ಒಂದೊಮ್ಮೆ ಯಾವುದೇ
ವಾರ್ಡ್‌ ನಲ್ಲಿ ಮರು ಮತದಾನ ಅಗತ್ಯವಿದ್ದರೆ ಭಾನುವಾರ ಮರು ಮತದಾನ ನಡೆಸಲಾಗುವುದು ಎಂದು ಹೇಳಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next